ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೩ನೆಯ ಭಾಗ 161 ದರಿಂದಲೂ ಸ್ತ್ರೀಬಾಲವೃದ್ಧರಿಗೆ ಅವನ ಭಯವು ಹೆಚ್ಚಾಗುತ್ತಾ ಬಂದುದರಿಂದಲೂ ಎಲ್ಲಾ ಬ್ರಾಹ್ಮಣರ ಮಂತ್ರ ಹೋಮ ಜಪ ಭೋಜನಗಳ ದೆಸೆಯಿಂದ ಆ ದುರಾತ್ಮ ನಿಗೆ ಸಂತೋಷವನ್ನು ಮಾಡಿ ಆತನನ್ನು ಕುರಿತು-ಎಲೈ ರಾಕ್ಷಸೋತ್ತಮನೇ ? ನೀನು ಈ ಪ್ರಕಾರ ಪ್ರತಿದಿನವೂ ಜನರಿಗೆ ಬಾಧೆಯನ್ನು ಮಾಡಬೇಡ, ನಿನಗೆ ಮಾಂಸಾ ಶನಗಳನ್ನೂ ಅನ್ನ ಪಾನಗಳನ್ನೂ ಪುಂಡಿಯ ಸೊಪ್ಪು ಮೊದಲಾದ ಶಾಕಗಳನ್ನೂ ತುಪ್ಪವನ್ನೂ ಅರಳು ಅಪೂಪ ಸೂಪಗಳನ್ನೂ ಪಾನಕದ ಗುಡಾಣಗಳನ್ನೂ ಮೊಸರಿನ ಗಡಿಗೆಗಳನ್ನೂ ತಂಬಿಟ್ಟು ಚಿಗಳಿಗಳ ರಾಶಿಗಳನ್ನೂ ಎರಡೆತ್ತುಗಳನ್ನು ಕಟ್ಟಿದ ಒಂದು ಬಂಡಿಯಲ್ಲಿ ಜೊತೆಮಾಡಿರಿಸಿ ಒಂದೊಂದು ಮನೆಗೆ ಒಬ್ಬೊಬ್ಬ ಮನುಷ್ಯನ ಮೇರೆಗೆ ಪ್ರತಿ ದಿನವೂ ಕಳುಹಿಸುತ್ತೇವೆ. ನೀನು ಇದನ್ನು ಅಂಗೀಕರಿಸಿ ನಮಗೆ ಉಪದ್ರವನ್ನು ಮಾಡದೆ ಇರಬೇಕು ಎನಲು ; ಆ ದೈತ್ಯಾಧಮನು--ಹಾಗೇ ಆಗಲಿ ಎಂದು ಆ ಅರ್ಧಕ್ಕೆ ಒಡಂಬಟ್ಟು ಪ್ರತಿದಿನವೂ ಆ ಮೇರೆಗೆ ಆ ಊರಿನವರು ಕಳುಹಿಸುವ ಬಲಿ ಯನ್ನು ತೆಗೆದು ಕೊಂಡು ಈ ದೇಶವನ್ನು ಶತ್ರು ಜೋರಾದಿ ಭಯವಿಲ್ಲ ದಂತೆ ಪರಿಪಾ ಲಿಸುತ್ತಿದ್ದಾನೆ. ಆತನ ಬಳಿಗೋಸ್ಕರ ಒಬ್ಬೊಬ್ಬರ ಮನೆಗೆ ಅನೇಕ ವರುಷಗಳಿಗೆ ಒಂದುಸಾರಿ ಸರದಿ ಬರುವುದು, ಆ ಕಾಲದಲ್ಲೇನಾದರೂ ಅವರು ಊರನ್ನು ಬಿಟ್ಟು ಹೋಗುವದಕ್ಕೆ ಯತ್ನವನ್ನು ಮಾಡಿದರೆ ಆ ರಾಕ್ಷಸನು ಕುಟುಂಬ ಸಮೇತವಾಗಿ ಅವರನ್ನು ಕೊಂದುಹಾಕುವನು. ಈ ಪಟ್ಟಣದಲ್ಲಿರುವ ವೇತ್ರಕಿಯನೆಂಬ ಅರಸು ರಾಜ ನೀತಿಪರನಲ್ಲದೆ ಇರುವುದರಿಂದ ಈ ಪಟ್ಟಣದ ಜನರಿಗೆ ಉಂಟಾದ ಉಪದ್ರವವನ್ನು ಪರಿ ಹರಿಸಿ ಶಾಶ್ವತವಾದ ಸುಖವನ್ನು ಕಲ್ಪಿಸಲಾರನು, ನಿಷ್ಕಂಟಕಗಳಾದ ದೇಶಗಳು ಎಷ್ಟು ಇದ್ದಾಗ್ಯೂ ನಾವು ದುಶ್ಚಲಾಶ್ರಯವಾದ ಇಂಥಾ ಪ್ರದೇಶಗಳಲ್ಲಿ ಬಿದ್ದು ಇದ್ದೇವೆ. ಬ್ರಾಹ್ಮಣನಿಗೆ ಪರಸ್ಪರಾನುಕೂಲ್ಯವಿಲ್ಲದಿದ್ದರೆ ಸ್ವಚ್ಛಾಗಮನದಿಂದ ಎಲ್ಲಿಗಾದರೂ ಪಕ್ಷಿಗಳೋಪಾದಿಯಲ್ಲಿ ಹೋಗಬಹುದು, ಗೃಹಸ್ಥನಾದವನಿಗೆ ಮೊದಲು ಧಾರಿಕನಾದ ಅರಸಿನ ಆಶ್ರಯವಿರಬೇಕು, ಹೆಂಡತಿಯು ಅನುಕೊಲೆಯಾಗಿರಬೇಕು, ಧನವು ಯಧೇ ಚ್ಛವಾಗಿರಬೇಕು. ಈ ಮರು ಇದ್ದರೆ ಆತನು ತನ್ನ ಜ್ಞಾತಿಪತ್ರಾದಿಗಳನ್ನು ರಕ್ಷಿಸು ವನು, ಈ ಮರು ಅರ್ಧಗಳಲ್ಲಿ ಒಂದಾದರೂ ನನಗೆ ಇಲ್ಲದುದರಿಂದ ನಾನು ಹೀಗೆ ಕೇಶಪಡುತ್ತಿದ್ದೇನೆ. ಈ ದಿವಸ ಮನೆಗಳ ಸರದಿಯ ಮೇರೆಗೆ ನನ್ನ ಕುಲನಾಶಕವಾದ ವಾರವು ಪ್ರಾಪ್ತವಾಯಿತು. ಭೋಜನವನ್ನೂ ಪುರುಷ ಬಲಿಯನ್ನೂ ಸಂಪಾದಿಸಬೇಕು. ಒಬ್ಬ ಪುರುಷನನ್ನು ಕ್ರಯಕ್ಕಾದರೂ ಕೊಂಡು ಕೊಟ್ಟೆವು ಎಂದರೆ ಹಣವಿಲ್ಲ, ಇವ ರೊಬ್ಬರನ್ನೂ ಕೊಡುವುದಕ್ಕೆ ಮನಸ್ಸು ಒಡಂಬಡುವುದಿಲ್ಲ, ಇಂಧಾ ರಾಕ್ಷಸನ ಭಯ ವನ್ನು ಹೋಗಲಾಡಿಸಿಕೊಳ್ಳುವುದಕ್ಕೆ ಮತ್ತೊಂದು ಉಪಾಯವೂ ತೋರುವುದಿಲ್ಲ. ಆದುದರಿಂದ ನಾವೆಲ್ಲರೂ ಆತನ ಬಾಯಿಯಲ್ಲಿ ಬೀಳಬೇಕೆಂದು ಯೋಚಿಸುತ್ತಿದ್ದೇವೆ. ನೀವು ಕೇಳಿದುದರಿಂದ ಈ ದುಃಖದ ಕಾರಣವನ್ನು ವಿವರವಾಗಿ ಹೇಳಿದೆನು ಎನಲು ; ಆ ಕುಂತೀದೇವಿಯು ಆ ಬ್ರಾಹ್ಮಣನನ್ನು ನೋಡಿ-ಎಲೈ, ಬ್ರಾಹ್ಮಣ ತಮನೇ ! ಈ ವಿಷಯಕ್ಕಾಗಿ ನೀನು ಭಯಪಡಬೇಡ ಇದಕ್ಕೆ ನಾನೊಂದು ಉಪಾ 11.