ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೧೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

162 KANARESE SELECTIONS-PART III ಯವನ್ನು ಹೇಳುತ್ತೇನೆ, ನೀವಿಷ್ಟು ಮಂದಿಯೂ ಏಕಕಾಲದಲ್ಲಿ ಹೋಗುವುದು ಯುಕ್ತ ವಲ್ಲ, ನಿನಗೆ ಒಬ್ಬನೇ ಮಗನೂ ಒಬ್ಬಳೇ ಮಗಳೂ ಇರುವುದರಿಂದ ಅವರನ್ನೂ ಅವ ರನ್ನು ಕಾಪಾಡುವ ಪತಿಯನ್ನೂ ಕಳುಹಿಸುವುದೂ ಸರಿಯಲ್ಲ, ನನಗೆ ಐದುಮ.೦ದಿ ಮಕ್ಕಳಿದ್ದಾರೆ. ಅವರೊಳಗೊಬ್ಬನನ್ನು ನಿಮಗೆ ಕೊಡುತ್ತೇನೆ. ಆತನು ನೀವು ಕೊಡುವ ಅನ್ನ ಪಾನಗಳನ್ನು ಜೊತೆಮಾಡಿಕೊಂಡು ರಾಕ್ಷಸನ ಸವಿಾಪಕ್ಕೆ ಹೋಗುತ್ತಾನೆ ಎನಲು ಆ ಬ್ರಾಹ್ಮಣನು-ನಾನು ನನ್ನ ಪ್ರಾಣರಕ್ಷಣಾರ್ಧವಾಗಿ ಇಂಥಾ ಅಕೃತ್ಯಕ್ಕೆ ಒಡಂ ಬಡುವವನಲ್ಲ, ಬ್ರಾಹ್ಮಣನಾಗಿಯ ಅತಿಧಿಯಾಗಿಯೂ ಇರುವ ನಿನ್ನ ಕುವಾರ ನನ್ನು ರಾಕ್ಷಸನಿಗೆ ಕೊಡುವುದಕ್ಕೆ ಹೇಗೆ ಸಮ್ಮತಿಸುವೆನು ? ಮಹಾ ಕುಲ ಪ್ರಸೂತ ರಾದ ನಿಮ್ಮಂಧವರಿಗೆ ಇಂಥಾ ಪರೋಪಕಾರ ಬುದ್ಧಿಯುಂಟಾಗುವುದು ಅದ್ಭುತವಲ್ಲ. ಬ್ರಾಹ್ಮಣ ನಿಮಿತ್ತವಾಗಿ ಸ್ವ ಪುತ್ರನನ್ನಾ ದರೂ ಒಪ್ಪಿಸುವುದು ನಿಮಗೆ ಯುಕ್ತವು. ಆದರೂ ನಾನು ಶ್ರೇಯಸ್ಸಾಗುವ ಮೇರೆಗೆ ವಿಚಾರಿಸಬೇಡವೇ ? ಬ್ರಾಹ್ಮಣವಧೆಗೂ ಆತ ವಧೆಗೂ ಅಂತರವನ್ನು ವಿಚಾರಿಸುವಲ್ಲಿ ಆತ ವಧೆಗಿಂತಲೂ ಬ ಹ ವಧೆಯೇ ಅಧಿಕ ವಾಗಿರುವುದು, ಹೀಗಿರುವಲ್ಲಿ ಅದಕ್ಕೆ ಪ್ರಾಯಶ್ಚಿತ್ತವು ವಿಧಿಸಲ್ಪಟ್ಟಿರುವುದು, ಬ್ರಾಹ್ಮ ಇವಧೆಯನ್ನು ಅಜ್ಞಾನದಿಂದ ಮಾಡಿದರೂ ದುಷ್ಪರಿಹಾರವಾದುದರಿಂದ ಬುದ್ದಿ ಪೂರ್ವ ಕವಾಗಿ ಮಾಡಿದರೆ ಹೇಗೆ ಪರಿಹರಿಸತಕ್ಕುದು ? ತನಗೆ ಅಭಿಮತವಿಲ್ಲದೆ ಮತ್ತೊಬ್ಬರ ನಿರಂಧದ ದೆಸೆಯಿಂದ ಬರುವ ಆತ್ಮವಧೆಗೆ ದೋಷವಿಲ್ಲ, ನಿನ್ನ ಕುಮಾರನನ್ನು ಕಳು ಹಿಸುವುದು ಬುದ್ದಿ ಪೂರ್ವಕವಾದ ಬ್ರಾಹ್ಮಣವಧೆಯಾದುದರಿಂದ ಈ ಕೃತ್ಯವು ಅತಿ ಕ್ರೂರವಾಗಿರುವುದು, ವಿಶೇಷವಾಗಿ ತನ್ನ ಮನೆಗೆ ಬಂದಂಧವನನ್ನೂ ಯಾಚನೆಗೆ ಬಂದಂಧವನನ್ನೂ ಶರಣಾಗತನಾದವನನ್ನೂ ವಧಿಸುವುದು ಅತಿನಿಂದಿತವೆಂತಲೂ ಅದನ್ನು ಒಂದು ವೇಳೆಯಾದರೂ ಮಾಡಬಾರದೆಂತಲೂ ಪ್ರಾಜ್ಞರು ಹೇಳುವರು, ನಮ್ಮಲ್ಲಿ ಒಬ್ಬರು ಬಿಟ್ಟು ಹೋದರೆ ದುಃಖವುಂಟಾಗುತ್ತದೆ ಎಂದು ಅಷ್ಟು ಮಂದಿಯ ಹೋಗ ಬೇಕೆಂದು ಎಣಿಸಿ ಇದ್ದೇನೆ. ನಿನ್ನ ಕುಮಾರನನ್ನು ಕಳುಹಿಸುವುದಕ್ಕೆ ನಾನು ಒಂಡಂ ಬಡೆನು ಎನಲು ; ಆಕುಂತೀದೇವಿಯು-ಎಲೈ, ದ್ವಿಜನೇ! ಬ್ರಾಹ್ಮಣನನ್ನು ಸಂರಕ್ಷಣೆ ಮಾಡಬೇ ಕೆಂತಲೂ ಬ್ರಾಹ್ಮಣವಧೆಯು ನಿಂದಿತವೆಂತಲೂ ನಾನು ಬಲ್ಲೆನು. ತಾಯಿಗೆ ನೂರು ಮಂದಿ ಕುಮಾರಕರಿದ್ದರೂ ಅವರಲ್ಲೊಬ್ಬನೂ ಅಪ್ರಿಯನಾಗಿ ಹೋಗುವುದಿಲ್ಲ, ಆದು ದರಿಂದ ನನಗೆ ಈ ಕುಮಾರಕನು ಅಪ್ರಿಯನೆಂದು ಕಳುಹಿಸುವುದಿಲ್ಲ, ಆದರೆ ಈತನು ಬಲಪರಾಕ್ರಮಶಾಲಿಯ ಮಂತ್ರಸಿದ್ಧಿಯುಳ್ಳವನೂ ಅಧಿಕ ತಪೋಬಲಯುಕನೂ ಆಗಿ ಇರುವುದರಿಂದ ಈತನು ನೀವು ಕೊಟ್ಟೆ ಅನ್ನ ಪಾನಗಳನ್ನು ಆ ರಾಕ್ಷಸನಿಗೆ ಕೊಟ್ಟು ತನ್ನನ್ನು ರಕ್ಷಿಸಿಕೊಂಡು ತಿರಿಗಿ ಬರುವನೇ ಹೊರತು ಅವನಿಂದ ಪೆಟ್ಟು ತಿಂದು ಬರುವರಿ ಧವನಲ್ಲ, ಮೊದಲು ಈ ಬಾಲಕನಿಂದ ಮಹಾ ಬಲಶಾಲಿಗಳಾಗಿಯ ಮಹಾ ಶರೀ ರವುಳ್ಳವರಾಗಿಯೂ ಇದ್ದ ರಾಕ್ಷಸರು ಅನೇಕ ಮಂದಿ ಹತರಾದರು. ಈ ರಹಸ್ಯವನ್ನು ಯಾರಿಗೂ ಹೇಳಬೇಡ. ಈತನಲ್ಲಿರುವ ವಿದ್ಯೆಯನ್ನು ಬಹು ಮಂದಿ ವಿದ್ಯಾರ್ಥಿಗಳು