ಪುಟ:ಕಥಾಸಂಗ್ರಹ ಸಂಪುಟ ೧.djvu/೧೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೩ನೆಯ ಭಾಗ 163 ಕಲಿಯಲಪೇಕ್ಷಿಸಿ ಈತನನ್ನು ನಿರ್ಬಂಧಪಡಿಸಿರುವರು. ಆದರೆ ಈ ಬಾಲಕನಿಗೆ ವಿದ್ಯೆ ಯನ್ನು ಹೇಳಿದಾತನು ತನ್ನ ಅಪ್ಪಣೆ ಇಲ್ಲದೆ ಇನ್ಯಾರಿಗಾದರೂ ಈ ವಿದ್ಯೆಯನ್ನು ಹೇಳಿದರೆ ನಿನಗೆ ಫಲಿಸಲಾರದು ಎಂದು ಕಟ್ಟುಮಾಡಿ ಇದ್ದಾನೆ ಎಂದು ಹೇಳಲು ; ಆ ಬ್ರಾಹ್ಮಣೋತ್ತಮನೂ ಆತನ ಹೆಂಡತಿಯ ಅಮೃತರಸದ ಚಂದದಿಂದ ಒಪ್ಪುತಿ ರುವ ಆ ಕುಂತಿಯ ವಾಕ್ಯವನ್ನು ಕೇಳಿ ಬಹು ಸಂತೋಷಪಟ್ಟು ಅವಳನ್ನು ಬಹು ಪ್ರಕಾರವಾಗಿ ಪೂಜಿಸಿದರು, ಅನಂತರದಲ್ಲಿ ಕುಂತೀದೇವಿಯು ಭೀಮನಿಗೆ ಈ ವೃತ್ತಾಂ ತವನ್ನು ತಿಳಿಸಲು ; ಆತನು--ಹಾಗೆಯೇ ಮಾಡುತ್ತೇನೆ ಎಂದು ಒಡಂಬಟ್ಟನು. ಇತ್ತಲಾ ಧರ್ಮರಾಜನೇ ಮೊದಲಾದ ನಾಲ್ಕು ಮಂದಿಯ ಭಿಕ್ಷಾನ್ನವನ್ನು ತೆಗೆದುಕೊಂಡು ಮನೆಗೆ ಬಂದ ಸಮಯದಲ್ಲಿ ಉತ್ಸಾಹದೊಡನೆ ಕೂಡಿರುವ ಭೀಮ ಸೇನನನ್ನು ನೋಡಿ ಅವರಲ್ಲಿ ಧರ್ಮರಾಜನು ಆತನ ಇಂಗಿತದಿಂದ ಸಂತೋಷಯುಕ್ತ ನಾಗಿ ಇದ್ದಾನೆಂದು ತಿಳಿದು ಇದಕ್ಕೆ ಏನೋ ನಿಮಿತ್ಯವಿದೆ ಎಂದು ಚಿಂತಿಸುತ್ತಾ ಏಕಾಂತದಲ್ಲಿ ತನ್ನ ತಾಯಿಯನ್ನು ನೋಡಿ ವಾಯುಪುತ್ರನು ನಿನ್ನ ಅಪ್ಪಣೆಯಿಂದ ಒಂದು ಮಹಾಕಾರ್ಯವನ್ನು ನಿರ್ವಹಿಸುವುದಕ್ಕೆ ಎಣಿಸಿದ್ದಾನೆಂದು ಆತನ ಮುಖೋಲ್ಲಾಸದಿಂದ ತಿಳಿದೆನು, ಅದನ್ನು ವಿವರವಾಗಿ ತಿಳಿಯ ಹೇಳೆನಲು ; ಕುಂತೀ ದೇವಿಯು-ಎಲೆ, ಕುಮಾರಕನೇ ! ವಾಯುಪುತ್ರನು ನನ್ನ ಅಪ್ಪಣೆಯಿ೦ದ ಒಬ್ಬ ಬ್ರಾಹ್ಮಣನನ್ನು ರಕ್ಷಿಸುವದಕ್ಕೋಸ್ಕರವೂ ಈ ಪಟ್ಟಣದ ಆಪತ್ತನ್ನು ಪರಿಹರಿಸುವುದ ಕ್ರೋಸ್ಕರವೂ ಒಬ್ಬ ರಾಕ್ಷಸನ ಬಲಿರೂಪವಾದಂಧ ಮಹಾ ಕಾರ್ಯಗಳನ್ನು ನಡಿಸಿಲಿ ಜೈ ಸಿದ್ದಾನೆ ಎನಲು ; ಧರ್ಮಜನು ತಾಯಿಯನ್ನು ನೋಡಿ-ಎಲೌ ತಾಯಿಯೇ ! ಇಂಥಾ ಸಾಹಸ ಕಾರ್ಯವನ್ನು ಮಾಡಬಹುದೇ ? ಸತ್ಪುರುಷರಾದವರು ಪ್ರತ್ರತ್ಯಾ ಗವು ಮಹಾ ಅನರ್ಧಕ್ಕೆ ಕಾರಣವೆಂದು ಹೇಳುವರು ಮತ್ತೊಬ್ಬರ ಮಗನನ್ನು ರಕ್ಷಿಸುವದಕ್ಕೋಸ್ಕರ ತನ್ನ ಮಗನನ್ನು ಬಿಡಬಹುದೇ ? ಇಂಥಾ ಲೋಕವಿರುದ್ಧ ವಾದ ಪುತ್ರತ್ಯಾಗರೂಪಕಾರ್ಯವನ್ನು ನೀನು ಮಾಡಬಹುದೇ ? ನಾವೆಲ್ಲರೂ ಭೀಮಸೇನನ ಭುಜಬಲವನ್ನು ನಂಬಿ ದಾಯಾದಿಗಳು ಅಪಹರಿಸಿಕೊಂಡಿರುವಂಧ ರಾಜ್ಯವನ್ನು ತಿರಿಗಿ ಸಾಧಿಸಬೇಕೆಂದು ಬಯಸಿ ಇದ್ದೇವೆ, ದುರ್ಯೋಧನ ದುಶ್ಯಾಸನ ಕರ್ಣ ಶಕುನಿ ಮೊದಲಾದವರು ಮಹಾ ಬಲಪರಾಕ್ರಮಶಾಲಿಯಾದ ಈ ಭೀಮಸೇನನ ಪರಾಕ್ರಮ ವನ್ನು ಸ್ಮರಿಸಿ ಈಗಲೂ ಬೆಚ್ಚಿ ಬೆಚ್ಚಿ ಬೀಳುತ್ತಿದ್ದಾರೆ ಇದಲ್ಲದೆ ಭೀಮಸೇನನ ಭುಜಬಲದಿಂದಲ್ಲ ವೇ ಪಾಪಾತ್ಮರಾದ ಪುರೋಚನಾದಿಗಳನ್ನು ಕೊಂದು ಆರಗಿನ ಮನೆಯ ಅಗ್ನಿ ಬಾಧೆಯನ್ನು ತಪ್ಪಿಸಿಕೊಂಡು ನಾವೆಲ್ಲರೂ ಪ್ರಾಣಸಹಿತವಾಗಿ ನಿಂತುದು ? ಇದನ್ನು ಅರಿಯೆಯಾ ? ಬುದ್ಧಿಶಾಲಿಯಾಗಿ ಮಹಾಬಲಪರಾಕ್ರಮ ಶಾಲಿಯಾದ ಇಂಥಾ ಮಗನನ್ನು ಕೊಡುವುದಕ್ಕೆ ಯೋಚಿಸಿದ ನಿನ್ನ ಬುದ್ಧಿಗೆ ಏನೆನ್ನ ಬೇಕೆನಲು ; ಕುಂತಿಯು ಇಂತೆಂದಳು,ಕೇಳು ಧರ್ಮರಾಜನೇ ? ಭೀಮನ ವಿಷ ಯದಲ್ಲಿ ಹೀಗೆ ಎಣಿಸಬೇಡ. ನಾನು ಬುದ್ದಿ ಮೋಸದಿಂದ ಈ ಕಾರ್ಯವನ್ನು ಮಾಡಿ ದವಳಲ್ಲ. ಕ್ಷೇಶದಿಂದ ನನ್ನ ಬುದ್ದಿ ಮಂದವಾಗಲಿಲ್ಲ, ನಾವು ಈ ಬ್ರಾಹ್ಮಣನ