ಪುಟ:ಕಥಾಸಂಗ್ರಹ ಸಂಪುಟ ೧.djvu/೧೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

164 KANARESE SELECTIONS-PART III ಮನೆಯಲ್ಲಿ ಸುಖವಾಗಿ ಇದ್ದೇವಾದಕಾರಣ ಈತನಿಗೆ ಒಂದು ಉಪಕಾರವನ್ನು ಮಾಡ ಬೇಕೆಂದು ಎಣಿಸಿದೆನು. ಲೋಕದಲ್ಲಿ ಉಪಕಾರವನ್ನು ಮಾಡಿದವರು ಕೆಟ್ಟು ಹೋಗು ವದಿಲ , ಇದಲ ದೆ ಬಾಹ್ಮಣನಿಗೆ ಉಪಕಾರವನು ಮಾಡಿದರೆ ಮಹತಾದ ಧರ್ಮವು ಬರುವುದೆಂದು ಯೋಚಿಸಿದೆನು, ಮತ್ತು ಭೀಮನು ಅರಗಿನ ಮನೆಯಲ್ಲಿ ಮಾಡಿದ ಸಾಹಸವನ್ನೂ ಹಿಡಿಂಬವಧೆಯನ್ನೂ ನೋಡಿ ಇವನು ಆ ರಾಕ್ಷಸನಿಗೆ ಸ್ವಲ್ಪವೂ ದಕ್ಕುವುದಿಲ್ಲ ಎಂಬ ವಿಶ್ವಾಸದಿಂದ ಈ ಕಾರ್ಯಕ್ಕೆ ಒಡಂಬಟ್ಟೆ ನು. ಇಷ್ಟು ಮಾ ತ್ರವೇ ಅಲ್ಲ, ಭೀಮನ ಭುಜಬಲವು ಹತ್ತು ಸಾವಿರ ಆನೆಗಳ ಬಲಕ್ಕೆ ಸಮನಾಗಿರು ವುದು, ಈ ಭೀಮನಿಗೆ ಸಮಾನನಾದ ಪರಾಕ್ರಮಶಾಲಿಯು ಈ ವರೆಗೂ ಲೋಕ ದಲ್ಲಿ ಹುಟ್ಟಿದವರೊಳಗೆ ಒಬ್ಬನೂ ಇಲ್ಲ, ಮತ್ತು ಒಂದು ವೇಳೆ ಇಂದ್ರನು ಯುದ್ಧ ದಲ್ಲಿ ಎದುರಿಸಿದರೂ ಅವನನ್ನು ಈ ಭೀಮಸೇನನು ಜಯಿಸುವನು ಇದಲ್ಲದೆ ನಾನು ಈತನನ್ನು ಬಾಲ್ಯದಲ್ಲಿ ಶತಶೃಂಗಪರ್ವತದ ಮೇಲೆ ಎತ್ತಿ ಕೊಂಡು ಹೋಗುತ್ತಿರುವಾಗ ನನ್ನ ಕಂಕುಳಿಂದ ಜಾರಿ ಕೆಳಗೆ ಬಿದ್ದ ಈತನ ಶರೀರಕಾಠಿಣ್ಯದಿಂದ ಆ ಪರ್ವತದ ಮಹಾ ಶಿಲೆಗಳು ಪುಡಿಪುಡಿಯಾದವು. ಇದೆಲ್ಲವನ್ನೂ ನನ್ನ ಮನಸ್ಸಿನಲ್ಲಿ ಮರೆಯದೆ ಇದ್ದುದರಿಂದ ಆ ಬ್ರಾಹ್ಮಣನಿಗೆ ಹಿತವನ್ನು ಎಣಿಸಿ ಭೀಮನಿಗೆ ಈ ಕಾರ್ಯವನ್ನು ಕಟ್ಟು ಮಾಡಿದೆನೇ ಹೊರತು ಅಜ್ಞಾನದಿಂದಲೂ ಅರ್ಧಲೋಭದಿಂದಲೂ ಬುದ್ದಿ ಭ್ರಮೆ ಯಿಂದಲೂ ಈ ಕೆಲಸಕ್ಕೆ ಪ್ರವರ್ತಿಸಿದವಳಲ್ಲ, ಅದರಿಂದ ಇದು ಬುದ್ದಿ ಪೂರ್ವಕವಾಗಿ ಮಾಡಿದಂಧ ಕಾರ್ಯವೆಂದು ನೀನು ತಿಳಿ ನಾವು ಈ ಕಾರ್ಯವನ್ನು ನಿರ್ವಹಿಸಿದರೆ ಧರ್ಮವೂ ಕೃತಜ್ಞತೆಯ ಬರುತ್ತವೆ. ಬ್ರಾಹ್ಮಣನಿಗೆ ಸಹಾಯವನ್ನು ಮಾಡಿದಂಧ ಕೃತ್ರಿಯನು ಶಾಶ್ವತವಾದ ಪುಣ್ಯಲೋಕವನ್ನು ಪಡೆಯುವನೆಂದು ಕೇಳಿ ಉಂಟು. ಕೃತ್ರಿಯನಿಗೆ ಪ್ರಾಣದಾನವನ್ನು ಮಾಡಿದವನು ಇಹಪರಗಳಲ್ಲಿ ಕೀರ್ತಿಸುಕೃತಗಳನ್ನು ಪಡೆಯುವನು, ವೈಶ್ಯನಿಗೆ ಸಹಾಯವನ್ನು ಮಾಡಿದವನು ಲೋಕರಂಜಕನಾಗುವನು. ಶರಣಾಗತನಾದ ಶೂದ್ರನ ಭಯವನ್ನು ಪರಿಹರಿಸಿದವನು ಆ ಸುಕೃತ ವಿಶೇಷದಿಂದ ಈ ಲೋಕದಲ್ಲಿ ಸಕಲ ರಾಜಪೂಜಿತವಾದ ಕುಲದಲ್ಲಿ ಹುಟ್ಟು ವನು ಎಂದು ಕೃಷ್ಣ ದೈಪಾಯನನು ಹೇಳಿರುವುದರಿಂದ ಈ ಕಾರ್ಯವನ್ನು ಭೀಮಸೇನನಿಗೆ ಕಟ್ಟುಮಾಡಿ ದೆನು ಎನಲು ; ಆ ಅಜಾತಶತ್ರುವು--ಎಲೈ, ತಾಯೇ ! ನೀನು ಈಗ ಬುದ್ಧಿ ಪೂರ್ವಕ ವಾಗಿ ಆಚರಿಸಿದಂಧ ಕಾರ್ಯವು ಉಚಿತವೇ ಸರಿ ; ಆಪ್ತನಾದ ಬ್ರಾಹ್ಮಣನಲ್ಲಿ ಕೃಪಾ ವಿಶೇಷದಿಂದ ನೀನು ಭೀಮನನ್ನು ಕಳುಹಿಸಿದುದರಿಂದ ಆತನು ಮನುಷ್ಯಭಕ್ಷಕನಾದ ಆ ರಾಕ್ಷಸನನ್ನು ಈ ಕ್ಷಣದಲ್ಲಿಯೇ ಜಯಿಸಿ ಪಟ್ಟಣದಲ್ಲಿರುವವರಿಗೆಲ್ಲಾ ಅಭಯದಾನ ವನ್ನು ಮಾಡುವುದು ಯಥಾರ್ಥವು. ಹೇಗಾದರೂ ಇಲ್ಲಿರುವಂಧ ನಮ್ಮನ್ನು ಯಾರೂ ಅರಿಯದೆ ಇರುವ ಹಾಗೆ ಈ ಬ್ರಾಹ್ಮಣನೊಡನೆ ಪ್ರಯತ್ನದಿಂದ ಹೇಳು ಎನಲು ; ಕುಂತೀದೇವಿಯು ತಿರಿಗಿ ಬ್ರಾಹ್ಮಣನ ಮನೆಗೆ ಹೋಗಿ ಅವರೆಲ್ಲರಿಗೂ ಉಚಿತಪ್ರಕಾರ ದಿಂದ ಸಮಾಧಾನವನ್ನು ಹೇಳಿದಳು. ಆ ಮಾರನೆಯ ದಿವಸ ಪ್ರಾತಃಕಾಲದಲ್ಲಿ ಮಹಾ ಬಲಶಾಲಿಯಾದ ಭೀಮಸೇ ನನು ಆ ಬ್ರಾಹ್ಮಣನ ಸಮಿಾಪಕ್ಕೆ ಹೋಗಿ--ಎಲೈ ಬ್ರಾಹ್ಮಣೋತ್ತಮನೇ ! ನಿನ್ನನ್ನು