ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೧೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೭ನೆಯ ಭಾಗ 165 ಸಕುಟಂಬವಾಗಿ ಈ ಆಪತ್ತಿನ ದೆಸೆಯಿಂದ ರಕ್ಷಿಸುತ್ತೇನೆ. ಭಯಪಡಬೇಡ, ರಾಕ್ಸ್ ಸನ ಸವಿಾಪಕ್ಕೆ ನಾನೇ ಹೋಗುತ್ತೇನೆ, ನಿನ್ನ ಮನೆಯಲ್ಲಿ ನನಗೆ ಬೇಕಾದ ಅನ್ನ ವನ್ನು ಮೊದಲೇ ಇಕ್ಕಿದರೆ ನಾನು ಊಟವನ್ನು ಮಾಡಿದಮೇಲೆ ರಾಕ್ಷಸನಿಗೆ ಬಲಿ ಯಾಗುತ್ತೇನೆ ಎನಲು ; ಆ ಬ್ರಾಹ್ಮಣನು ಈ ವೃತ್ತಾಂತವನ್ನು ತನ್ನ ಬಂಧುಗಳಿಗೆಲ್ಲಾ ಹೇಳಿ ಭೀಮಸೇನನಿಗೆ ಮೃಷ್ಟಾನ್ನ ವ೩ ಕ್ಕಲು ; ಮತ್ತು ಪೌರಜನರು ಮಾಂಸ ಇವುಗಳಿಂದ ಕೂಡಿರುವ ನಾನಾ ಪ್ರಕಾರವಾದ ಸೂಪಗಳಿ೦ದಲೂ ಅಪೂಪಗಳಿಂದಲೂ ಉಪ್ಪಿನಕಾಯಿ ಮೊದಲಾದ ವಸ್ತುಗಳಿಂದಲೂ ಕೂಡಿರುವ ಅನ್ನವನ್ನೂ ಚಿಗಳಿ ತಂಬಿಟ್ಟುಗಳನ್ನೂ ಕಡುಬುಗಳನ್ನೂ ಕಲಸೋಗರಗಳನ್ನೂ ತಂದು ಕೊಡಲು ; ಭೀಮನು ಅವೆಲ್ಲವನ್ನೂ ಭಕೀಸಿ ಗುಡಾಣಗಳಲ್ಲಿ ತುಂಬಿದ್ದ ತುಪ್ಪ ಹಾಲು ಮೊಸರು ಗಳನ್ನು ಯಥೇಚ್ಛವಾಗಿ ಕುಡಿದು ತೃಪ್ತಿಯನ್ನು ಹೊಂದಿದನು ಆ ಒಳಿಕ ಪುರ ಜನರು ಯಥಾಪ್ರಕಾರವಾಗಿ ಆ ಮಹಾ ರಾಕ್ಷಸನಿಗೆ ಅಪರಿಮಿತಗಳಾದ ಭಕ್ಷ್ಯ ಭೋಜ್ಯಗಳನ್ನು ಜೊತೆಗೊಳಿಸಿ ಅದೆಲ್ಲವನ್ನೂ ಒಂದು ಬಂಡಿಯಲ್ಲಿರಿಸಿ ಅದಕ್ಕೆ ಎರ ಡೆತ್ತುಗಳನ್ನು ಕಟ್ಟಿ ನಾನಾ ಪ್ರಕಾರವಾದ ವಾದ್ಯ ಧ್ವನಿಗಳಿಂದ ಆ ಬಂಡಿಯನ್ನು ಸುತ್ತಿಕೊಂಡು ಹೋಗುತ್ತಿದ್ದರು. ಆಗ ಬಂಡಿಯನ್ನು ಏರಿ ಭೋಜನ ಪ್ರಿಯನಾ ಗಿಯೂ ರೂಪಸಂಪನ್ನ ನಾಗಿಯ ಯೌವನಸ್ಥನಾಗಿಯೂ ಇರುವ ಈತನು ನಿರ್ನಿಮಿ ತವಾಗಿ ಆ ರಾಕ್ಷಸನಿಗೆ ಏತಕ್ಕೆ ಪ್ರಾಣಗಳನ್ನು ಕೊಡುವುದಕ್ಕಿದ್ದಾನೆಯೋ ಎಂದು ಹೇಳಿಕೊಳ್ಳುವಂಧ ಪರಜನರ ಮಾತುಗಳನ್ನು ಕೇಳುತ್ತಾ ಭೀಮನು ಕದ್ದಾಗಿರುವ ವೃಷಭಗಳನ್ನು ಹೊಡೆಯುತ್ತಾ ದಕಿ ಣಾಭಿಮುಖವಾಗಿ ಬಂಡಿಯನ್ನು ನಡಿಸಲು ; ಆ ಪೌರಜನರು ಕಟ್ಟಳೆಯ ಪ್ರಕಾರ ಸಂಕೇತಸ್ಥಾನಪರ್ಯ೦ತವೂ ಹೋಗಿ ಅಲ್ಲಿಯೇ ನಿಂತು ನೋಡುತ್ತಿದ್ದರು ಆ ವಾಯುಪುತ್ರನು ಅಲ್ಲಿರುವ ಒಂದು ದೊಡ್ಡ ಮರದ ಸಮೀಪಕ್ಕೆ ಹೋಗಿ ಎಲುಬು ಗಳೂ ಕೂದಲುಗಳೂ ಮೆದಳುಗಳೂ ಕೊಬ್ಬುಗಳೂ ಕಾಲುಗಳೂ ಕೈಗಳೂ ಭುಜಗಳೂ ತೊಡೆಗಳೂ ತುಮುರುತು ಮುರುಗಳಾಗಿ ಬಿದ್ದು ಕೆಲವು ಒಣಗಿಯ ಕೆಲವು ಹಸಿಯಾಗಿಯ ಕಾಣಿಸುತ್ತಿರಲು ; ಎಲ್ಲಿ ನೋಡಿದರೂ ಹದ್ದು ರಣಹದ್ದು ಕಾಗೆ ನರಿ ನಾಯಿ ಇವುಗಳು ವಿಕಾರಧನಿಗಳಿ೦ದ ಕೂಗುತ್ತಾ ಓಡಾಡುತ್ತಿರಲು ; ದುರ್ಗಂಧಯುಕ್ತವಾಗಿಯೂ ನೋಡುವುದಕ್ಕೆ ಅಸಹ್ಯವಾಗಿಯ ಸ್ಮಶಾನಕ್ಕಿಂತಲೂ ಭಯಂಕರವಾಗಿಯೇ ಇರುವ ಆ ಮಹಾ ವೃಕ್ಷದ ಬುಡವನ್ನು ಸೇರಿ ತನ್ನ ಮನಸ್ಸಿನಲ್ಲಿ ಅಪರಿಮಿತಗಳಾದ ಭಕ್ಷ್ಯಭೋಜ್ಯ ರಾಶಿಗಳಿಂದಲೂ ಅನ್ನ ರಾಶಿಗಳಿಂದಲೂ ತುಂಬಿದ ಈ ಬಂಡಿಯನ್ನು ರಾಕ್ಷಸನು ಬಂದು ನೋಡುವುದಕ್ಕೆ ಮೊದಲೇ ಇದೆಲ್ಲವನ್ನೂ ನಾನೇ ಭಕ್ಷಿ ಸಬೇಕು ; ಬಲ ಗರ್ವಿತನಾದ ಮತ್ತು ದುರಾ 'ನಾದ ಆ ರಾಕ್ಷಸನು ವಿಜೃಂಭಿಸಿ ಯುದ್ಧವನ್ನು ಮಡುವಾಗ ಅವನು ನನ್ನನ್ನು ತಳ್ಳಿದರೆ ಬಲದಿಂದ ಕದಲದೆ ನಿಂತಿರಬೇಕು ; ಗಟ್ಟಿಯಾಗಿ ನಿಂತರೆ ಅವನನ್ನು ಕೊಲ್ಲ ಬಹುದು ; ಈ ಅನ್ನವನ್ನು ಈಗಲೇ ನಾನು ಭಕ್ಷಿಸದೆ ಹೋದರೆ ಇನ್ನು ಮೇಲೆ ನನಗೆ ಇದು ದಕ್ಕುವುದಿಲ್ಲ ಎಂದು ನಿಶ್ಚಯಿಸಿ ನಾಲ್ಕು ದಿಕ್ಕುಗಳನ್ನೂ ನೋಡಿ ಬಂಡಿಯಲ್ಲಿ