ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

166 KANARESE SELECTIONS-PART III ಚ೦ದವಾಗಿ ಕೂತು ಕೊಂಡು ಶಾಕಸೂಪಗಳಿಂದ ಕೂಡಿರುವ ಅನ್ನವನ್ನು ಕ್ರಮವಾಗಿ ಭಕ್ಷಿಸುತ್ತಿರಲು ; ಸಂಕೇತಸ್ಥಾನದಲ್ಲಿ ನಿಂತಿದ್ದ ಪೌರಜನಗಳು ಭೀಷಣಾಕಾರದಿಂದ ಅನ್ನವನ್ನು ಭಕ್ಷಿಸುತ್ತಿರುವ ಭೀಮನನ್ನು ಉದ್ದವಾದ ದೊಡ್ಡ ಮರಗಳನ್ನು ಏರಿ ನೋಡಿ-ಬಕನು ರಾಕ್ಷಸಾಕಾರದಿಂದ ಬಂದು ಅನ್ನ ವನ್ನು ಭಕ್ಷಿಸದೆ ಬ್ರಾಹ್ಮಣ ರೂಪದಿಂದ ಬಂದು ಭಕ್ಷಿಸುತ್ತಿದ್ದಾನೆ ಎಂದು ನುಡಿಯುತ್ತಿದ್ದರು. ಅಮಿತಪರಾಕ್ರ ಮಶಾಲಿಯಾಗಿಯ ಮಹಾ ಬಲಧುರೀಣನಾಗಿಯೂ ಇರುವ ಭೀಮನು ಬಂಡಿ ಯನ್ನು ಮಂದಗಮನದಿಂದ ನಡೆಸುತ್ತಾ ಅನ್ನವನ್ನು ಭಕ್ಷಿಸುತ್ತಾ ಬಕನಿದ್ದ ಠಾವಿಗೆ ಹೋಗಿ ಅವನನ್ನು ಒಂದು ತೃಣಕ್ಕೆ ಸರಿಯಾಗಿ ಎಣಿಸಿ-ಎಲೈ, ದುರಾತ್ಮನಾದ ರಾಕ್ಷಸನೇ ! ಶೀಘ್ರವಾಗಿ ಬಾ ಎಂದು ಗಟ್ಟಿಯಾಗಿ ಕೂಗಿ ಕರೆಯಲು ; ಆ ರಾಕ್ಷ ಸನು ಆಗ್ರಹವ್ಯಗ್ರನಾಗಿ ಭೀಮನ ಸವಿಾಪಕ್ಕೆ ಬಂದು ತನ್ನ ಪಾದ ಘಟ್ಟನದಿಂದ ಭೂಮಿಯು ಎರಡು ಹೋಳಾಗುವ ಹಾಗೆ ತುಳಿಯುತ್ತಾ ಅವನಿಗೆ ಎದುರಾಗಿ ನಿಂತು ತನಗೋಸ್ಕರ ತಂದ ಅನ್ನ ವನ್ನು ನಿರ್ಭಯವಾಗಿ ಭಕ್ಷಿಸುತ್ತಿರುವ ಈ ಮನುಷ್ಠಾಧನ ನನ್ನು ಮೊದಲು ಯಮನ ಮನೆಗೆ ಕಳುಹಿಸಿ ಆ ಮೇಲೆ ಈ ಅನ್ನವನ್ನು ಭಕ್ಷಿಸುತ್ತೇನೆ ಎಂದು ಹುಬ್ಬುಗಳನ್ನು ಗಂಟುಹಾಕಿಕೊಂಡು ಹಲ್ಲು ಮುಡಿ ಕಚ್ಚುತ್ತಾ ಕರಿಯ ಆಲಿಗಳನ್ನು ಗರಗರನೆ ತಿರುಗಿಸುತ್ತಾ ನಿಂತಿದ್ದನು. ಭೀಮನು ಅವನ ವಾಕ್ಯವನ್ನು ಕಿವಿಗೆ ಹಾಕಿಕೊಳ್ಳದೆ ಯಾವ ದಿಕ್ಕನ್ನೂ ನೋಡದೆ ಅನ್ನವನ್ನು ಭಕ್ಷಿಸುತ್ತಿದ್ದನು. ಪುರುಷಭಕ್ಷಕನಾದ ಆ ಬಕನು ಭೀಮನನ್ನು ಕೊಲ್ಲಬೇಕೆಂದೆಣಿಸಿ `ಹಸ್ತಗಳನ್ನು ಉನ್ನತವಾಗಿ ಎತ್ತಿ ಕೊಂಡು ಅಟ್ಟಹಾಸವನ್ನು ಮಾಡುತ್ತಾ ಅವನ ಮೇಲೆ ಕಾಣಿಸಿ ಕೊಳ್ಳಲು ; ಶತ್ರುಜನ ಭೀಕರನಾದ ಭೀಮಸೇನನು ಯಧಾಪ್ರಕಾರ ಭುಂಜಿಸುತ್ತಿ ದ್ದನು. ಅದನ್ನು ನೋಡಿ ಆ ಬಕನು ಕೋಪಾಟೋಸದಿಂದ ಬಂದು ಭೀಮಸೇನನ ಬೆನ್ನಿನ ಮೇಲೆ ಎರಡು ಕೈಗಳಿಂದ ಅಪ್ಪಳಿಸಲು ; ಆ ರಾಕ್ಷಸನ ಅ೦ಗೈ ಪೆಟ್ಟು ಗಳು ಭೀಮಸೇನನ ಹೊಟ್ಟೆ ಯಲ್ಲಿ ಅಲ್ಲಲ್ಲಿರುವ ಕವಳಗಳನ್ನು ಒಂದೇ ರಾವಿನಲ್ಲಿ ಒತ್ತಾಗಿ ಸೇರಿಸಿ ಮತ್ತೂ ಭೋಜನ ಮಾಡುವುದಕ್ಕೆ ಸೌಕರ್ಯವನ್ನುಂಟುಮಾಡಿದುವು. ಆಗ ಲಾದರೂ ಭೀಮನು ಆತನನ್ನು ಸಡ್ಡೆ ಮಾಡದೆ ಯಥಾಪ್ರಕಾರವಾಗಿ ಅನ್ನ ವನ್ನೇ ಭಕ್ಷಿಸುತ್ತಿದ್ದನು. ಆ ರಾಕ್ಷಸನು ಸಮೀಪದಲ್ಲಿರುವ ಒಂದು ದೊಡ್ಡ ಮರವನ್ನು ಕಿತ್ತು ಹಿಡಿದು ಕೊಂಡು ಭೀಮನನ್ನು ಕೊಲ್ಲಬೇಕೆಂದು ಯತ್ನ ವನ್ನು ಮಾಡಲು ; ಆ ವಾಯುಪುತ್ರನು ತನ್ನ ಎಡದ ಕೈಯಿಂದ ಅವನನ್ನು ಮರ ಸಹಿತವಾಗಿ ಹಿಡಿದು ಕೊಂಡು ಎಲ್ಲಿಗೂ ಬಿಡದೆ ಯಥಾಪ್ರಕಾರ ಮೆಲ್ಲ ಮೆಲ್ಲಗೆ ಅನ್ನವನ್ನು ಭಕ್ಷಿಸಿ ಮುಗು ಇುನಗೆಯಿಂದ ಆ ರಾಕ್ಷಸನನ್ನು ಆಚೆಗೆ ಬಿಸಾಟು ನೂರು ಗುಡಾಣಗಳಲ್ಲಿ ಇರುವ ತುಪ್ಪವನ್ನೂ ನೂರು ಗುಡಾಣಗಳಲ್ಲಿರುವ ಮೊಸರನ್ನೂ ಕುಡಿದು ಕೈಗಳನ್ನು ತೊಳ ಕೊಂಡು ಆಚಮನವನ್ನು ಮಾಡಿ ಪರ್ವತದೋಪಾದಿಯಲ್ಲಿ ಸ್ಥಿರವಾದ ಧೈರವನ್ನು ಬಿಡದೆ ಮುಹೂತ್ರ ಮಾತ್ರ ವೀರಾಸನದಲ್ಲಿ ಕುಳಿತು ಕೊಂಡಿದ್ದನು. ಆ ಮೇಲೆ ಕೈಯ್ಯಲ್ಲಿ ಹಿಡಿದಿದ್ದ ಮಹಾ ವೃಕ್ಷವನ್ನು ಗರಗರನೆ ತಿರುಗಿಸುತ್ತಾ ಶೀಘ್ರವಾಗಿ ಮೇಲೆ