ಪುಟ:ಕಥಾಸಂಗ್ರಹ ಸಂಪುಟ ೧.djvu/೧೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೩ನೆಯ ಭಾಗ 167 ಬೀಳುವುದಕ್ಕೆ ಬರುವ ಆ ರಾಕ್ಷಸನನ್ನು ನೋಡಿ ಬೇಗ ಎದ್ದು ಸಿಂಹನಾದವನ್ನು ಮಾಡಿ ಭುಜಗಳನ್ನು ತಟ್ಟಿಕೊಂಡು ಅವನನ್ನು ಕುರಿತು--ಎಲೈ, ದುರಾತ್ಮನೇ ! ಬಹುಕಾಲದಿಂದ ಮನುಷ್ಯ ಮಾಂಸಗಳನ್ನು ತಿಂದು ಖಂಡಗಳನ್ನು ಬೆಳಿಸಿಕೊಂಡು ಮದಿಸಿ ಇದೀ, ಇನ್ನು ಮೇಲೆ ನನ್ನ ಭುಜಬಲದಿಂದ ಪ್ರಾಣಗಳೊಡನೆ ನೀನು ಹಿಂದಿ ರುಗಿ ಹೋಗಲಾರೆ. ಏಕಚಕ್ರನಗರದಲ್ಲಿರುವ ಸಮಸ್ಯೆ ಜನಗಳೂ ತಮಗೆ ಕಂಟಕ ನಾದ ನಿನ್ನನ್ನು ನಾನು ಕೊಂದುಹಾಕುವುದರಿಂದ ಈ ದಿವಸ ಮೊದಲ್ಗೊಂಡು ಭಯ ವನ್ನು ಬಿಟ್ಟು ಸುಖವಾಗಿ ನಿದ್ದೆ ಮಾಡಲಿ, ನನ್ನಿಂದ ಹತವಾದ ನಿನ್ನ ಶರೀರವನ್ನು ಹದ್ದು ರಣಹದ್ದು ನರಿ ನಾಯಿ ಕಾಗೆ ಮೊದಲಾದ ಮೃಗಪಕ್ಷಿಗಳು ಎಳದಳದು ಭಕ್ಷಿಸಲಿ ಎಂದು ನುಡಿದು ಕೋಪಾಟೋಪದಿಂದ ಬಂದು ಬಕನ ಮೇಲೆ ಬಿದ್ದನು, ಆ ರಾಕ್ಷಸನು ಮಹಾ ಬಲಪರಾಕ್ರಮ ಧುರೀಣನಾಗಿ ತನ್ನ ಪಾದಘಟ್ಟನದಿಂದ ಭೂಮಿಯನ್ನು ನಡುಗಿಸುತ್ತಾ ವಿಕಾರವಾದ ಶರೀರದಿಂದ ವಿಜೃಂಭಿಸಿ ವಾಯುಪತ್ರ ನನ್ನು ಸಚಾರಿಸಿ ಹುಬ್ಬುಗಳನ್ನು ಗಂಟು ಹಾಕಿಕೊಂಡು ಔಡುಗಳನ್ನು ಕಚ್ಚುತ್ತಾ ಅವನ ಮೇಲೆ ಆ ದೊಡ್ಡ ಮರವನ್ನು ಹಾಕಲು ; ಆ ಭೀಮನು ನಸುನಗುತ್ತಾ ಎಡದ ಕೈಯಿಂದ ಆ ವೃಕ್ಷವನ್ನು ಹಿಡಿದುಕೊಂಡು ಅದನ್ನು ಮುರಿದುಹಾಕಲು ; ಆ ರಾಕ್ಷ ಸನು ಇನ್ನೂ ಅನೇಕ ವೃಕ್ಷಗಳನ್ನು ಪ್ರಯೋಗಿಸಲು ; ಹಾಗೆಯೇ ಅವರಿಬ್ಬರಿಗೂ ಮರಗಳ ಯುದ್ಧವೇ ಪ್ರವರಿ ಸುತ್ತಿತ್ತು. ಆ ಬಳಿಕ ಬಕನು ತನ್ನ ಬಿರುದನ್ನು ಒಕ್ಕಣಿಸಿ ಮಹಾ ಬಲಶಾಲಿಯಾದ ಮಾರುತಪುತ್ರನನ್ನು ಎರಡು ಭುಜಗಳಿಂದ ಬಿಗಿಯಲು ; ಮಹಾಭು ಜನಾದ ಆ ಕುಂತೀ ನಂದನನು ಆ ಪಟ್ಟನ್ನು ಬಿಡಿಸಿಕೊಂಡು ದಿಟ್ಟತನದಿಂದ ಮೆರೆದು ಈಚೆಗೆ ಆಚೆಗೆ ಅಲ್ಲಾ ಡದ ಹಾಗೆ ಅವನನ್ನು ಗಟ್ಟಿ ಯಾಗಿ ಹಿಡಿದು ಮಧ್ಯಮಧ್ಯದಲ್ಲಿ ಮಿಕ್ಕಿರುವ ಅನ್ನ ವನ್ನು ಭಕ್ತಿ ಸುತ್ತಾ ಬಾರಿಬಾರಿಗೂ ತಿವಿಯುತ್ತಾ ಎಳೆಯುತ್ತಾ ಇರಲು ; ಆ ರಾಕ್ಷಸನು ಭೀಮನ ಬಾಹುಗಳ ಹಿಡಿತಕ್ಕೆ ಸಿಕ್ಕಿ ಎಳೆಯಲ್ಪಟ್ಟವನಾಗಿ ಶ್ರಮದಿಂದ ಕಂಗೆಟ್ಟಿ ದ್ದರೂ ಬಾರಿಬಾರಿಗೂ ಎಳೆದು ಭೀಮನನ್ನೂ ಕಂಗೆಡಿಸಿದನು. ಅವರಿಬ್ಬರ ಪಾದಘ ೬ನದಿಂದ ಭೂಮಿಯು ಗಡಗಡನೆ ನಡುಗಿತು, ಈ ಪ್ರಕಾರ ಇಬ್ಬರೂ ವಿಚಿತ್ರಗಮ ನಗಳಿಂದ ಬಾಹುಯುದ್ಧವನ್ನು ಮಾಡುತ್ತಿರಲು ; ಅವರ ಸವಿಾಪದಲ್ಲಿದ್ದು ಪೆಟ್ಟಿಗೆ ಸಿಕ್ಕಿದ ಮಹೊನ್ನ ತಗಳಾದ ವೃಕ್ಷಗಳು ತುಮುರುತು ಮುರಾಗಿ ಭೂಮಿಯಲ್ಲಿ ಬಿದ್ದುವು. ಆ ಸಮಯದಲ್ಲಿ ಪಾಂಡು ಕುಮಾರಕನ ಆ ರಾಕ್ಷಸನನ್ನು ತನ್ನ ಬಾಹುಬ ಲದಿಂದ ಭೂಮಿಯಲ್ಲಿ ಕೆಡಹಿ-ಎಲೈ, ರಾಕ್ಷಸನೇ ! ಸ್ವಲ್ಪ ವಿಶ್ರಮಿಸಿಕೊಂಡು ಮೆಲ್ಲಗೆ ಏಳು ಎಂದು ಬೆನ್ನು ತಟ್ಟಿ ಬಿಟ್ಟುಬಿಡಲು ; ಅವನು ಪಟಚ೦ಡಿನೋಪಾದಿ ಯಲ್ಲಿ ನೆಗೆದು ನಿಂತು ಕೊಂಡು ಭೀಮಾಕಾರದಿಂದ ಬೆದರಿಸಿದನು. ಭೀಮಸೇನನು ಅಟ್ಟಹಾಸವನ್ನು ಮಾಡಿ ಅವನನ್ನು ಗಟ್ಟಿಯಾಗಿ ಹಿಡಿದು ಅಪ್ಪಿಕೊಂಡು ಅವನ ರಸನಾ ಳೆಯನ್ನು ಅಮುಕಿದುದರಿಂದ ಆ ರಾಕ್ಷಸನು ಮೈಮರೆತು ಸ್ವಲ್ಪ ಹೊತ್ತು ಸುಮ್ಮ ನಿದ್ದು ಆ ಮೇಲೆ ಕೋಪೋದ್ದೀಪಿತನಾಗಿ ಭೀಷಣಾಕಾರವನ್ನು ಧರಿಸಿ ಭೀಮನನ್ನು