168 KANARESE SELECTIONS-PART III ಬೆದರಿಸಲು ; ಆ ಭೀಮನು ನಸುನಗೆಯಿಂದ ಅವನ ಕಂಠವನ್ನು ತನ್ನ ಭುಜದಿಂದ ಬಿಗಿ ಯಾಗಿ ಹಿಡಿದು ಮೊಗಮಡಿಯಾಗಿ ತಳ್ಳಿ ಮೊಣಕಾಲಿನಿಂದ ಬೆನ್ನನ್ನು ತಿವಿದು ನೋಯಿಸಿ ಆ ಮೇಲೆ ಅವನ ಭುಜಗಳೆರಡನ್ನೂ ಹಿಡಿದುಕೊಂಡು ಮೇಲಕ್ಕೆ ಎತ್ತಿ ಭೂಮಿಯಲ್ಲಿ ಹಾಕಿ ತನ್ನ ಎಡಗಾಲಿನಿಂದ ಅವನ ಎದೆಯನ್ನು ಒದೆದನು, ಆ ರಾಕ್ಷ ಸನು ಅತಿ ಕೋಪಿಷ್ಠನಾಗಿ ಬಾಯಿಯನ್ನು ತೆರೆದು ಉರಿಯುತ್ತಿರುವ ನಾಲಿಗೆಯುಳ್ಳ ವನಾಗಿ ತನ್ನ ಬಲಗೈಯ್ಯಂದ ಭೀಮನ ನೆತ್ತಿಯನ್ನು ಗುದ್ದಿ ಆತನ ಎಡದ ಪಾರ್ಶ್ವ ವನ್ನು ಮತ್ತೊಂದು ಮುಷ್ಟಿಯಿಂದ ತಿವಿದು ಮೊಣಕಾಲಿನಿಂದ ಎದೆಯನ್ನು ತಿವಿದು ನೋಯಿಸಲು ; ಆ ವಾಯುಪುತ್ರನು ಕೋಪಿಸಿಕೊಂಡು ಆ ರಾಕ್ಷಸನನ್ನು ಹಿಡಿದು ಕೊಂಡನು. ಹೀಗೆ ಮಹಾ ಬಲಶಾಲಿಗಳಾದ ಭೀಮಬಕರು ಮದದಾನೆಗಳೋಪಾ ದಿಯಲ್ಲಿ ಒಬ್ಬರನೊಬ್ಬರು ಹಿಡಿಯುತ್ತಾ ತಿವಿಯುತ್ತಾ ತೊಡರಿಕೊಳ್ಳುತ್ತಾ ಭು ಜಗ ಳನ್ನು ತಟ್ಟಿ ಕೊಂಡು ಸಿಂಹನಾದವನ್ನು ಮಾಡುತ್ತಿದ್ದರು, ಆ ಸಮಯದಲ್ಲಿ ಅವರ ಬಾಹುಯುದ್ಧ ಸಂರಂಭದಿಂದ ಆ ಪಟ್ಟಣದಲ್ಲಿರುವ ಜನರೆಲ್ಲರೂ ಭಯಪಡುತ್ತಿದ್ದರು. ಹಾಗೆಯೇ ಅವರಿಬ್ಬರೂ ಪಾದಘಾತಗಳಿಂದ ಭೂಮಿಯನ್ನು ನಡುಗಿಸುತ್ತಾ ಮರಗ ಳನ್ನೂ ಬಳ್ಳಿಗಳನ್ನೂ ಹೊದೆಗಳನ್ನೂ ಪೂರ್ಣವಾಗುವ ಹಾಗೆ ಮಾಡು ತ್ತಾ ಪರಸ್ಪರ ಜಯಾಭಿಲಾಷೆಯಿಂದ ಹೋರುತ್ತಿರಲು ; ಮರು ಗಾವುದ ವಿಸ್ತಾರವುಳ್ಳ ಆ ವನಪ್ಪ ದೇಶವು ವೃಕ್ಷಗುಲ್ಕ ಲತಾಪಾಷಾಣರಹಿತವಾಗಿ ಆಮೆಯ ಬೆನ್ನಿನೋಪಾದಿಯಲ್ಲಿ ಕಾಣಿ ಸಿತು. ಆ ಬಳಿಕ ಭೀಮನು ಅವನ ಒಳಹೊಕ್ಕು ತನ್ನ ಭುಜಗಳಿಂದ ಅವನನ್ನು ಬಿಗಿದು ಹಿಡಿದು ನಡುವನ್ನೂ ತೊಡೆಗಳ ಸಂದನ್ನೂ - ಬಿಗಿಯಾಗಿ ತಿವಿದು ನೋಯಿಸಲು, ಆ ರಾಕ್ಷಸನು ಬಹಳವಾಗಿ ಕಂಗೆಟ್ಟನು. ಅದನ್ನು ತಿಳಿದು ಬೀಮಸೇನನು ಅವನನ್ನು ಭೂಮಿಯ ಮೇಲೆ ಎತ್ತಿ ಹಾಕಿ ತನ್ನ ಕಾಲುಗಳಿಂದ ಒದೆದು ತಿಕ್ಕಿ ನೋಯಿಸಿ ಅವನ ಬೆನ್ನು ಮೂಳೆ ಮುರಿಯುವ ಹಾಗೆ ಮೊಣಕಾಲುಗಳಿಂದ ತಿವಿದು ಬಲಗೈಯಿಂದ ಕತ್ತನ್ನು ಎತ್ತಿ ಹಿಡಿದು ಎಡಗೈಯಿಂದ ನಡುಕಟ್ಟನ್ನು ಹಿಡಿದು ವಿಕಾರ ಧ್ವನಿಯನ್ನು ಮಾಡುತ್ತಿರುವಂಧ ಆ ರಾಕ್ಷಸನನ್ನು ನೆಲಕ್ಕೆ ಹಾಕಿ ಕುಕ್ಕಿ ಮೊಣಕಾಲಿನಿಂದ ತಿವಿ ಯಲು ; ಆ ಒಕಾಸುರನು ತನ್ನ ಬಾಯಿಂದ ರಕ್ತವನ್ನು ಕಾರುತ್ತಾ ಪ್ರಾಣವನ್ನು ಬಿಟ್ಟನು. ಅವನು ಸಾಯುವಾಗ ಉಂಟಾದ ವಿಕಾರಧ್ವನಿಯನ್ನು ಕೇಳಿ ಸಕಲ ಜನರೂ ಭಯಪಟ್ಟರು. ಬಕನು ಸತ್ತನೆಂದು ನೋಡಿ ವನಗಳಲ್ಲಿಯ ಉದ್ಯಾನವನಗಳಲ್ಲಿಯ ಜಗತಿಗ ಇಲ್ಲಿಯ ಈು ದ್ರ ದೇವಾಲಯಗಳಲ್ಲಿಯೂ ತಿರುಗುತ್ತಿದ್ದ ಅವನ ಪರಿಚಾರಕರು ಬಂದು ಪರಾಕ್ರಮಶಾಲಿಯಾದ ಭೀಮನಿಗೆ ಶರಣಾಗತರಾಗಲು ; ಆ ಭೀಮಸೇನನು ಅವರನ್ನು ನೋಡಿ ಅಭಯವನ್ನು ಕೊಟ್ಟು--ಈ ಹೊತ್ತು ಮೊದಲುಗೊಂಡು ನೀವು ಮನುಷ್ಯರನ್ನು ಬಾಧಿಸಿದರೆ ಬಕನು ಹೊಂದಿದ ದುರ್ಗತಿಯನ್ನು ನೀವೂ ಹೊಂದಬೇಕಾಗುವುದು. ಆದಕಾರಣ ಎಚ್ಚರಿಕೆಯಿಂದಿರಬೇಕು ಎನ್ನ ಲು ; ಅವರು ಮಹಾ ಪ್ರಸಾದವೆಂದು ಒಡಂಬಟ್ಟು ಮೊದಲಿದ್ದ ಠಾವುಗಳನ್ನು ಬಿಟ್ಟು ಹೋಗಿ
ಪುಟ:ಕಥಾಸಂಗ್ರಹ ಸಂಪುಟ ೧.djvu/೧೮೦
ಗೋಚರ