ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೩ನೆಯ ಭಾಗ 169 ತಾಳೆಯ ಮರಗಳಲ್ಲಿಯ ಬಸರಿಯ ಮರಗಳಲ್ಲಿಯ ಬೂರುಗದ ಮರಗಳಲ್ಲಿಯ ಎಕ್ಕದ ಗಿಡಗಳಲ್ಲಿಯ ಸಕುಟು೦ಬರಾಗಿ ಇರುತ್ತಿದ್ದರು, ಮತ್ತು ಬಕನ ತಮ್ಮನು ಭೀಮಸೇನನಿಗೆ ಶರಣಾಗತನಾಗಿ ಆತನ ಅಪ್ಪಣೆಯಿಂದ ಯಮುನಾ ತೀರವನ್ನು ಬಿಟ್ಟು ಸ್ಮಶಾನಗಳಲ್ಲಿ ಇರುತ್ತಿದ್ದನು, ಆ ಬಳಿಕ ಕುಂತೀ ಕುಮಾರನು ಪ್ರಾಣಗಳನ್ನು ಬಿಟ್ಟಿ ರುವಂಥಾ ಕಿವಿ ಕಣ್ಣು ನಾಲಿಗೆ ಇಲ್ಲದೆ ಇರುವಂಧಾ ಆ ಮಹಾ ರಾಕ್ಷಸನ ಶರೀರ ವನ್ನು ತಂದು ಪಟ್ಟಣದ ಬಾಗಿಲಲ್ಲಿ ಕೆಡಹಲು ; ಆ ಮಾರನೆಯ ದಿವಸ ಪ್ರಾತಃಕಾಲ ದಲ್ಲಿ ಆ ಪಟ್ಟಣದ ಜನರು ನೆತ್ತರಿಂದ ನೆನೆದು ಪರ್ವತದಂತೆ ಅತಿಭಯಂಕರವಾಗಿ ಬಿದ್ದಿ ರುವ ಬಕನ ಶವವನ್ನು ಕಂಡು ಆಶ್ಚರ್ಯಪಡುತ್ತಾ ಮಗಿನ ಮೇಲೆ ಬೆರಳಿಕ್ಕಿಈ ಹೊತ್ತು ದೈವದ ಕೃಪೆಯು ನಮ್ಮ ಪಾಲಿಗೆ ಬಂದಿತು ಎಂದು ಆನಂದ ಪೆಟ್ಟು ತಮ್ಮ ತಮ್ಮ ಮನೆಗಳಿಗೆ ಹೋಗಿ ಸುಖವಾಗಿದ್ದರು. 8 THE MARRIAGE OF DROUPADI TO THE FIVE PANDU PRINCES. ೮, ಬ್ರೌಪದಿಯ ಸ್ವಯಂವರ. ಪಾಂಡವರು ಎಂದಿನಂತೆ ಏಕಚಕ್ರನಗರದಲ್ಲಿರುವ ಬ್ರಾಹ್ಮಣನ ಮನೆಯಲ್ಲಿ ವಾಸ ವನ್ನು ಮಾಡುತ್ತಿರುವಾಗ ಒಬ್ಬ ಬ್ರಾಹ್ಮಣನು ಬಂದು ಅವರ ತಾಯಿಯಾದ ಕುಂತಿ ಯೊಡನೆ ಪಾಂಚಾಲ ದೇಶದ ಅರಸನಾದ ದುಪದರಾಜನು ತನ್ನ ಮಗಳಾದ ದೌಪದಿ ಯನ್ನು ಅರ್ಜುನನಿಗೆ ಕೊಡಬೇಕೆಂದು ನಿಶ್ಚಯಿಸಿಕೊಂಡಿರುವಲ್ಲಿ ಪಾಂಡವರೆಲ್ಲರೂ ಅರ ಗಿನ ಮನೆಯಲ್ಲಿ ಸುಟ್ಟು ಹೋದರು ಎಂಬ ಸುದ್ದಿ ಯನ್ನು ಕೇಳಿ ಬಹಳ ಚಿಂತೆಪಡು ತಿರುವಾಗ ಆತನ ಫರೋಹಿತನು--ಎಲೆ, ಅರಸೇ ? ದೊಡ್ಡವರ ಮಾತಿನ ಪ್ರಕಾರ ಧರ್ಮದಿಂದ ನಡೆಯುವಂಧ ಆ ಪಾಂಡವರಿಗೆ ಹಾನಿಯು ಒರಲಾರದು. ನೀನು ವ್ಯಸನ ಪಡದೆ ನಿನ್ನ ಮಗಳಿಗೆ ಸ್ವಯಂವರವನ್ನು ಮಾಡುವುದಕ್ಕೆ ಪ್ರಯತ್ನಿಸಿದರೆ ಆ ಪಾಂಡ ವರು ಎಲ್ಲಿದ್ದರೂ ಇಲ್ಲಿಗೆ ಬರುತ್ತಾರೆಂದು ಹೇಳಿದುದರಿಂದ ದ್ರುಪದರಾಜನು ಆ ಪುರೋ ಹಿತನ ಮಾತನ್ನು ಕೇಳಿ ಪ್ರಷ್ಯ ಮಾಸದ ಶುಕ್ಲ ಪಕ್ಷದ ರೋಹಿಣೀ ನಕ್ಷತ್ರಯುಕ್ತ ವಾದ ಶುಭದಿವಸದಲ್ಲಿ ತನ್ನ ಮಗಳಿಗೆ ಸ್ವಯಂವರವೆಂದು ಪಟ್ಟಣದಲ್ಲಿ ಪ್ರಸಿದ್ಧ ಪಡಿಸಿದನು. ಈ ದಿವಸಕ್ಕೆ ಇಪ್ಪತ್ತೈದನೆಯ ದಿವಸದಲ್ಲಿ ಸ್ವಯಂವರ ಮಹೋತ್ಸವವು ನಡೆಯು ತದೆ. ಆ ಮಹೋತ್ಸವವನ್ನು ನೋಡುವುದಕ್ಕೆ ದೇವಗಂಧರ್ವ ಯಕ್ಷರೂ ಬ್ರಹ್ಮರ್ಷಿ ಗಳೂ ಹೋಗುತ್ತಿದ್ದಾರೆ. ಮಹಾನುಭಾವರಾದ ನಿನ್ನ ಕುಮಾರಕರು ರೂಪವಂತರು. ಇವರನ್ನು ನೋಡಿ ದೌ ಪದಿಯು ಇವರೊಳಗೆ ಒಬ್ಬನನ್ನು ವರಿಸಿದರೂ ವರಿಸಬಹುದು. ಯಾರಭಾಗ್ಯವು ಹೇಗಿದೆಯೋ ಕ೦ಡವರಾರು ? ಅದರಿಂದ ನೀನು ಮಕ್ಕಳನ್ನು ಕರ ಕೊಂಡು ಆ ಪಾಂಚಾಲ ದೇಶಕ್ಕೆ ಬಾ ಎಂದು ಹೇಳಲು ; ಕುಂತಿದೇವಿಯು ತನ್ನ ಮಕ್ಕಳನ್ನು ಕರೆದುಕೊಂಡು ಪಾಂಚಾಲನಗರಕ್ಕೆ ಹೊರಟಳು ಹೀಗೆ ಹೋಗುತ್ತಿರುವಾಗ ದಾರಿಯಲ್ಲಿ ಗುಂಪಾಗಿ ಹೋಗುವ ಬ್ರಾಹ್ಮಣರು ಬ್ರಹ್ಮಚರ್ಯಾವ್ರತಸಂಪನ್ನರಾದ ಈ ಐದು ಮಂದಿಯನ್ನೂ ನೋಡಿ--ನೀವು ಯಾರು?