ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

170 KANARESE SELECTIONS-PART III ಎಲ್ಲಿಂದ ಎಲ್ಲಿಗೆ ಹೋಗುತ್ತೀರಿ ? ಎಂದು ಕೇಳಿದುದಕ್ಕೆ ಯುಧಿಷ್ಠರನು--ಎಲೈ, ಮಹಾ ತರುಗಳಿರಾ ! ನಾವು ಏಕಚಕ್ರ ಪ್ರರದ ದೆಸೆಯಿಂದ ಹೋಗುತ್ತಿದ್ದೇವೆ. ಇವರು ನನ್ನ ತಮ್ಮಂದಿರು. ಈ ಮುದುಕಿಯು ನಮ್ಮ ತಾಯಿಯು ಎನಲು; ಬ್ರಾಹ್ಮಣರು-ಹಾಗಾ ದರೆ ಬನ್ನಿರಿ ! ಈ ಹೊತ್ತು ಪಾಂಚಾಲನಗರಕ್ಕೆ ಹೋಗಬೇಕು, ಅಲ್ಲಿ ಬ್ರೌಪದೀದೇ ಎಗೆ ಸ್ವಯಂವರ ಮಹೋತ್ಸವವು ನಡೆಯತ್ತದೆ. ಈ ಅದ್ಭುತವನ್ನು ನೋಡುವದಕ್ಕೆ ಈ ವೇ ನಾವು ಗುಂಪುಕೂಡಿ ಹೋಗುತ್ತಿರುವುದು ? ನೀವೂ ನಮ್ಮ ಸಂಗಡಲೇ ಬಂದು ಅಲ್ಲಿ ನಾನಾ ದೇಶಗಳಿಂದ ಬಂದು ಕೂಡಿರುವ ಅರಸುಗಳ ದೆಸೆಯಿಂದ ಅನೇಕ ಧನಕ ನಕ ವಸ್ತು ವಾಹನಾದಿಗಳ ದಾನಗಳನ್ನೂ ನಾನಾ ವಿಧವಾದ ಭಕ್ಷ್ಯಭೋಜ್ಯ ಮೊದ ಲಾದ ಆಹಾರಗಳನ್ನೂ ಪರಿಗ್ರಹಿಸಿ ಆ ಉತ್ಸವವನ್ನು ನೋಡಿ ತಿರಿಗಿ ಬರಬಹುದು. ನೀವು ಬಹು ಮನೋಹರಾಕಾರರಾದುದರಿಂದ ಆ ದ್ರುಪದರಾಜನ ಮಗಳು ನಿಮ್ಮ ವ ರೊಳಗೆ ಒಬ್ಬನನ್ನು ವರಿಸಬಹುದು ಎನಲು ; ಅವರು--ಹಾಗೇ ಆಗಲಿ, ನಿಮ್ಮ ಸಂಗ ಡಲೇ ಆ ಉತ್ಸವವನ್ನು ನೋಡುವುದಕ್ಕೆ ನಾವೂ ದ್ರುಪದನ ನಗರಕ್ಕೆ ಬರುತ್ತೇವೆಂದು ಹೇಳಿ ಬ್ರಾಹ್ಮಣರೊಡನೆ ಪಾಂಚಾಲ ದೇಶವನ್ನು ಕುರಿತು ಹೋಗುತ್ತಾ ಮಧ್ಯಮಾ ರ್ಗದಲ್ಲಿ ವ್ಯಾಸ ಋಷಿಯನ್ನು ನೋಡಿ ಪೂಜಿಸಿ ಆತನ ಅಪ್ಪಣೆಯನ್ನು ತೆಗೆದುಕೊಂಡು ಆ ಮೇಲೆ ಪಾಂಚಾಲನಗರ ಪಾಂತಕ್ಕೆ ಹೋಗಿ ಅದರ ಸವಿಾಪದಲ್ಲಿ ನಾನಾ ದೇಶ ಗಳ ದೆಸೆಯಿಂದ ಬಂದಿರುವ ಅರಸುಗಳ ಪಾಳಯಗಳನ್ನು ನೋಡುತ್ತಾ ಪಾಂಡವರು ಪುರಪ್ರವೇಶವನ್ನು ಮಾಡಿ ಅಲ್ಲಿರುವ ಒಬ್ಬ ಕುಂಬಾರನ ಮನೆಯಲ್ಲಿ ಇಳಿದುಕೊಂಡು ಯಥಾಪ್ರಕಾರವಾಗಿ ಭಿಕ್ಷಾಚರಣವನ್ನು ಮಾಡುತ್ತಿರಲು ; ಅವರನ್ನು ಪಾಂಡವರು ಎಂದು ಯಾರೂ ತಿಳಿಯಲಾರದೆ ಹೋದರು. ಪಾಂಚಾಲರಾಜನಾದ ಯಜ್ಞ ಸೇನನು-- ಅಳಿಯನ ಬಲದಿಂದ ತಾನು ಕೃತಕೃತ್ಯನಾದೇನು ಎಂದು ತನ್ನ ಮನಸ್ಸಿನಲ್ಲಿ ವಾ೦ಡುಕು ಮಾರನಾದ ಧನಂಜಯನಿಗೆ ತನ್ನ ಮಗಳನ್ನು ಕೊಡಬೇಕೆಂಬ ಅಪೇಕ್ಷೆಯುಳ್ಳವನಾ ದುದರಿಂದ ಪಾಂಡವರು ವೇಷಾಂತರದಿಂದ ಲೋಕದಲ್ಲಿ ಜೀವಿಸಿರಬಹುದೆಂದಾಲೋ ಚಿಸಿ ಅರ್ಜುನನಿಗಿಂತಲೂ ಇತರರಿಗೆ ಸಾಧ್ಯವಾಗದ ಹಾಗೆ ಲಕ್ಷ್ಯ ಭೇದನವನ್ನು ಮಾಡಬೇಕೆಂದು ನಿಶ್ಚಯಿಸಿ ಹೆದೆಯನ್ನು ಏರಿಸುವುದಕ್ಕೆ ಅವಶ್ಯಕವಾದ ಧನುಶ್ಯ « ವನ್ನು ಹುಡುಕಿ ವ್ಯಾಘ್ರಪಾದನ ಮಗನಾದ ಸೃಂಜಯ ರಾಜನಿಗೆ ದೇವತೆಗಳಿಂದ ಕೊಡಲ್ಪಟ್ಟುದಾಗಿಯ ಕಬ್ಬಿಣದ ಹೆದೆಯಿಂದ ಅಲಂಕೃತವಾಗಿಯ ಅತಿದೃಢವಾ ದುದಾಗಿಯ ಇರುವ ಕಿಂಧುರವೆಂಬ ಹೆಸರುಳ್ಳ ಧನುಸ್ಸನ್ನು ತರಿಸಿ ಆಕಾಶಮಾರ್ಗದಲ್ಲಿ ಸುವರ್ಣಮಯವಾದ ಒಂದು ಮತ್ಯಂತ್ರವನ್ನು ಮಾಡಿಸಿ ಈ ಧನುಸ್ಸಿಗೆ ಹೆದೆ ಯನ್ನು ಏರಿಸಿ ಈ ಯಂತ್ರದ ಕನ್ನ ದಿಂದ ಗುರಿಯನ್ನು ಭೇದಿಸಿದವನೇ ತನ್ನ ಮಗ ಇನ್ನು ಮದುವೆ ಮಾಡಿಕೊಳ್ಳತಕ್ಕವನು ಎಂದು ಸಾರಿಸಲು ; ಆ ವೃಂತ್ತಾಂತವನ್ನು ಕೇಳಿ ನಾನಾ ದೇಶಾಧಿಪತಿಗಳಾದ ಅರಸುಗಳೂ ಮಹಾತ್ಮರಾದ ಋಷಿಗಳೂ ದುಕ್ಕೊ ಧನ ಕರ್ಣಸಹಿತರಾದ ಕೌರವರೂ ವಾಸುದೇವ ಸಹಿತರಾದ ಯಾದವರೂ ಮತ್ತು ಬ್ರಾಹ್ಮಣರೂ ಪಟ್ಟಣಕ್ಕೆ ಬಂದು ದ್ರುಪದರಾಜನಿಂದ ಪೂಜಾಸನ್ಮಾನಾದಿಗಳನ್ನು