ಪುಟ:ಕಥಾಸಂಗ್ರಹ ಸಂಪುಟ ೧.djvu/೧೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೩ನೆಯ ಭಾಗ 171 ಹೊಂದಿ ಆ ಪಟ್ಟಣದ ಸಮೀಪದಲ್ಲಿರುವ ಶಿಂಶುಮಾರ ಪಕ್ವತದ ಹತ್ತಿರದಲ್ಲಿ ಪಾಳ್ಯಗೆ ಳನ್ನು ಬಿಡಿಸಿದರು.

  • ಆ ಬಳಿಕ ಆ ಪಟ್ಟಣದ ಈಶಾನ್ಯ ಭಾಗದ ಸಮಪ್ರದೇಶದಲ್ಲಿ ಅನೇಕವಾದ ಆರ ಮನೆಗಳೊಡನೆ ಕೂಡಿ ಕೋಟೆ ಕೊತ್ತಲುಗಳಿಂದ ಆವರಿಸಲ್ಪಟ್ಟುದಾಗಿಯ ಬಾಗಿಲುಗ ಇಲ್ಲಿ ತೋರಣಗಳಿಂದ ಒಪ್ಪಿ ವಿಚಿತ್ರವಾದ ಮೇಲುಕಟ್ಟುಗಳಿಂದ ಶೋಭಿತವಾಗಿಯ ಬಹಳವಾದ ವಾದ್ಯ ಧ್ವನಿಗಳಿಂದ ಕೂಡಿ ಚ೦ದನ ಆಗುರು ಧೂಪಗಳಿಂದ ಪರಿಮಳಿಸಿ ಗಂಧೋದಕಗಳಿಂದ ನೆನಸಲ್ಪಟ್ಟ ಪುಷ್ಪಮಾಲಿಕೆಗಳಿಂದ ಅಲಂಕೃತವಾಗಿಯ ಕೈಲಾಸ ಶಿಖರದೋಪಾದಿಯಲ್ಲಿ ಪ್ರಕಾಶವಾಗಿಯ ಸುವರ ಮಯವಾದ ಜಾಲಂದರಗಳಿಂದಲೂ ಮಣಿಗಳಿಂದ ಕೆತ್ತಲ್ಪಟ್ಟ ಭೂಮಿಗಳಿಂದಲೂ ಏರುವುದಕ್ಕೆ ಯೋಗ್ಯಗಳಾದ ಸೋಪಾ ನಗಳಿಂದಲೂ ಅನೇಕ ಪ್ರಕಾರವಾದ ಸಿಂಹಾಸನಗಳಿಂದಲೂ ದಿವ್ಯವಾದ ಮೇಲುಚಪ್ಪ ರಗಳಿಂದಲೂ ಕೂಡಿ ಹಂಸದೋಪಾದಿಯಲ್ಲಿ ವರ್ಣವುಳ್ಳುದಾಗಿಯೂ ಒಂದು ಗಾವುದ ಪರಿಯಂತರವೂ ವ್ಯಾಪಿಸುತ್ತಿರುವ ಪರಿಮಳಗಳಿಂದಲೂ ವಿಸ್ತಾರವಾದ ರಾಜಮಾರ್ಗ ಗಳಿಂದಲೂ ವಿಚಿತ್ರವಾದ ಬಾಗಿಲುಗಳಿಂದಲೂ ಒಪ್ಪಿ ನಾನಾ ಪ್ರಕಾರವಾದ ಧಾತುಗ ಳಿಂದಲೂ ಶೋಭಿತಗಳಾದ ಹಿಮವತ್ಪರ್ವತದ ಶಿಖರಗಳನ್ನು ಅನುಕರಿಸಿ ಇರುವ ಉಪ್ಪ ರಿಗೆಗಳಿಂದ ಒಪ್ಪುತ್ತಿರುವ ಸ್ವಯಂವರ ಮಂಟಪದ ಸುತ್ತಲಿರುವ ದಿವ್ಯಭವನಗಳಲ್ಲಿ ಸಕಲಭೂಷಣಭೂಷಿತರಾಗಿಯೂ ಮಹಾ ಒಲಶಾಲಿಗಳಾಗಿಯ ದಿವ್ಯಮಾಲ್ಯಾಂಬ ರಗಳನ್ನು ಧರಿಸಿದವರಾಗಿಯ ರಾಜನೀತಿಕುಶಲರಾಗಿಯ ಸ್ವದೇಶರಕ್ಷಕರಾಗಿಯೂ ಸಕಲಶುಭಕರ್ಮಧುರೀಣರಾಗಿಯೂ ಇರುವ ರಾಜಶ್ರೇಷ್ಠ ರೂ ಪರಸ್ಪರ ಸ್ಪರ್ಧೆಗಳಿಂದ ಸಿಂಹಾಸನಗಳಲ್ಲಿ ಕುಳಿತಿರುವುದನ್ನು ಗ್ರಾಮಗಳ ದೆಸೆಯಿಂದ ಬಂದಂಧಾ ಜನಗಳು ಆಶ್ಚರ್ಯದಿಂದ ನೋಡುತ್ತಿದ್ದರು. ಪಾಂಡವರೆದು ಮಂದಿಯ ನಾನಾ ದೇಶಗಳ ದೆಸೆಯಿಂದ ಬಂದ ಬ್ರಾಹ್ಮಣರೊಡನೆ ಕೂಡಿ ಒಂದು ಕಡೆಯಲ್ಲಿ ಇದ್ದುಕೊಂಡು ದ್ರುಪ ದರಾಜನ ಐಶ್ವರ್ಯಕ್ಕೆ ಆಶ್ಚರ್ಯಪಟ್ಟು ನೋಡುತ್ತಿದ್ದರು.

ಆ ಬಳಿಕ ರಂಗಮಂಟಪವು ನಿರ್ಮಾಣವಾದ ದಿವಸಕ್ಕೆ ಹದಿನಾರನೆಯ ದಿವಸ ದಲ್ಲಿ ದ್ರುಪದರಾಜನ ಮಗಳು ಪರಿಮಳೋದಕಗಳಿಂದ ಸ್ವಾನವನ್ನು ಮಾಡಿ ಶುಭ್ರವಸ್ತ್ರ ಗಳನ್ನು ಟ್ಟು ಸರ್ವಾಭರಣಭೂಷಿತೆಯಾಗಿ ಸುವರ್ಣಮಯವಾದ ವರಣಮಾಲಿಕೆಯನ್ನು ಕೈಯಲ್ಲಿ ಹಿಡಿದು ಮಂದಗಮನದಿಂದ ರಂಗಮಂಟಪದ ಮಧ್ಯಕ್ಕೆ ಬರಲು ; ಪಾಂ ಚಾಲ ಪುರೋಹಿತನಾದ ಬ್ರಾಹ್ಮಣನು ಸ್ನಾನವನ್ನು ಮಾಡಿ ಅಲಂಕೃತನಾಗಿ ಅಗ್ನಿ ಮು ಖದಲ್ಲಿ ಮಾಡಿದ ಆಜ್ಯಾಹುತಿಗಳಿಂದ ದೇವತೆಗಳನ್ನು ತೃಪ್ತಿ ಪಡಿಸಿ ಪೂಣ್ಯಾಹವಾಚನಾ ನಂತರದಲ್ಲಿ ಸಕಲ ಭೇರೀಮೃದಂಗಾದಿ ವಾದ್ಯ ಧ್ವನಿಗಳನ್ನು ನಿಲ್ಲಿಸಲು ; ದ್ರುಪದರಾ ಜನ ಮಗನಾದ ಧೃಷ್ಟದ್ಯುಮ್ನ ನು ಸಭಾಮಧ್ಯದಲ್ಲಿ ನಿಂತು ಗಂಭೀರಧ್ವನಿಯಿಂದ ಎಲೈ, ಅರಸುಗಳಿರಾ ! ಕೇಳಿರಿ, ನಿಮ್ಮಲ್ಲಿ ಭುಜಬಲಶಾಲಿಯಾದವನು ಈ ಧನುಸ್ಸಿನಲ್ಲಿ ಹೆದೆಯನ್ನು ಏರಿಸಿ ಈ ಯಂತ್ರ ರಂಧ್ರದ ದೆಸೆಯಿಂದ ಐದು ಬಾಣಗಳನ್ನು ಪ್ರಯೋ ಗಿಸಿ ಆಚೆಯಲ್ಲಿರುವ ಲಕ್ಷ್ಯವನ್ನು ಭೇದಿಸಿದವನಾದರೆ ಅವನು ನನ್ನ ತಂಗಿಯಾದ