ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

172 KANARESE SELECTIONS—PART III ದೌಪದಿಗೆ ಗಂಡನಾಗುವನು. ಈ ನನ್ನ ಮಾತು ಸತ್ಯವಲ್ಲದೆ ಎಂದಿಗೂ ಸಟೆಯಾಗ ಲಾರದು ಎಂದು ಹೇಳಿ ತನ್ನ ತಂಗಿಯನ್ನು ನೋಡಿ - ಎಲ್‌, ದೌಪದಿಯೇ ! ಇಲ್ಲಿ ಸ್ವಯಂವರಕ್ಕೆ ಬಂದಿರುವ ಅರಸುಗಳನ್ನು ನೋಡು ! ಇವರ ಹೆಸರುಗಳನ್ನು ಕೇಳು ! ವಿವರಿಸುತ್ತೇನೆ ಮಣಿಮಂತನು ಸಮುದ್ರಸೇನನ ಮಗನಾದ ಚಂದ್ರಸೇನನು ಕುಮಾ ರಸಮಾನನಾದ ಜರಾಸಂಧನು ಸುದಂಡನು ದಂಡನು ಪೌಂಡ್ರಕವಾಸುದೇವನು ಭಗ ದತ್ತನು ಕಳಿಂಗನು ತಾಮ್ರಲಿಸ್ತನು ಮದ್ರದೇಶಾಧಿಪತಿಯಾದ ಶಲ್ಯನು ಆತನ ಕುಮಾ ರಕರಾದ ರುಕ್ಯಾ೦ಗದ ರುಕ್ಕರಥರು ಕೌರವವಂಶವರ್ಧನನಾದ ಸೋಮದತ್ತನು ಆತನ ಮಕ್ಕಳಾದ ಭೂರಿಯ ಭೂರಿಶ್ರವನೂ ಶಲನೂ ಎಂಬ ಮರು ಮಂದಿಯು ಕಾಂಭೋಜಾಧ್ಯಕ್ಷನಾದ ಸುದಕ್ಷನು ಕುರುವಲ್ಲಭನಾದ ದೃಢಧನ್ವನು ಬೃಹಬ್ಬ ಲನು ಸುಷೇಣನು ಊಶೀರನ ಕುಮಾರನಾದ ಶಿಬಿಯು ಆಗ್ನಿ ತ್ರಯಗಳೋಪಾದಿಯಲ್ಲಿ ಪ್ರಕಾಶಿಸುತ್ತಿರುವ ಪಾಂಡ ಕೇರಳ ಜೋಳದೇಶಾಧಿಪತಿಗಳು ದಕ್ಷಿಣ ದಿಗ್ಟಾಗದಲ್ಲಿ ನಿನ್ನನ್ನು ನೋಡುವುದಕ್ಕೋಸ್ಕರ ಸಿಂಹಾಸನಗಳಲ್ಲಿ ಕುಳಿತುಕೊಂಡು ಇದ್ದಾರೆ. 'ರೋಹಿ ಣಿಯ ಮಗನಾದ ಬಲಭದ್ರನು ವಾಸುದೇವನು ಪ್ರದ್ಯುಮ್ನನು ಸಾಂಬನು ಚಾರು ದೇಷ್ಣನು ಸಾರಣನು ಗದನು ಅಕ್ರೂರನು ಸತ್ಯಕನು ಸಾತ್ಯಕಿಯು ಕೃತವರ್ಮನು ಯುಯುಧಾನನು ಹಾರ್ದಿಕನು ಸೃಧುವು ವಿಸೃಧುವು ಕಹನು ಸವಿಾಕನು ಆರಿಮೋಜ ಯನು ದಾನಪತಿಯು ಝುಲಿಯು ಪಿಂಡಾರಕನು ಎಂಬ ಯಾದವವಂಶದವರು. ಮತ್ತು ಭಗೀರಧನು ಬೃಹತ್ ಕೃತ್ರನು ಸಿಂಧು ದೇಶಾಧಿಪತಿಯಾದ ಜಯದ್ರಧನು ಬಾಹ್ಲಿಕ ದೇಶಾಧೀಶ್ವರನಾದ ಬೃಹದ್ರಧನು ಶಕುನಿ ಪುತ್ರನಾದ ಉಲೂಕನು ಚಿತ್ರಾ ಗದನು ಶುಭಾಂಗದನು ಪರಾಕ್ರಮ ಧುರೀಣನಾದ ವತ್ವರಾಜನು ಕೋಸಲದೇಶಾಧಿ ಪತಿಯು ಕರ್ಣನು ಕರ್ಣಪುತ್ರನಾದ ವೃಷಸೇನನು ಬಲಶಾಲಿಯಾದ ಬೃಹತ್ಥೇನನು ದುರ್ಜಯನು ದಮ ಘೋಷನ ಮಗನಾದ ಮತ್ತು ಜೇದಿದೇಶಾಧಿಪತಿಯಾದ ಯುದ್ಧ ದಲ್ಲಿ ಯಮನಿಗೆ ಸಮಾನನಾದ ಶಿಶುಪಾಲನು ; ಮತ್ತು ಇಲ್ಲಿರುವ ನಾನಾ ದೇಶಾದೀ ಶ್ವರರೂ ನಿನ್ನ ನ್ನು ಮದುವೆ ಮಾಡಿಕೊಳ್ಳಬೇಕೆಂದು ಬಂದು ಇದ್ದಾರೆ ಆಕಾಶಮಾ ರ್ಗದಲ್ಲಿ ತೋರುವ ಮತ್ಸ ಯಂತ್ರವನ್ನು ಇವರಲ್ಲಿ ಯಾವನು ವಿದ್ಯಾ ಕೌಶಲದಿಂದ ಭೇದಿಸುವನೋ ಆತನನ್ನು ವರಿಸು ಎಂದು ಹೇಳಿದನು. ಆ ಬಳಿಕ ರಾಜಕುಮಾರಕರು ಕಡಗ ಕಿರೀಟ ತೋಳಬಂದಿ ಚೌಕಳಿ ಮೊದ ಲಾದ ದಿವ್ಯಾಭರಣಗಳಿಂದ ಅಲಂಕೃತರಾಗಿ ರೂಪ ಬಲ ಕುಲ ಶೀಲ ಯೌವನಧರ್ಮ ಈ ಮೊದಲಾದುವುಗಳಿಂದ ವಿಜೃಂಭಮಾಣರಾಗಿ ಸಕಲ ಶಾಸ್ತ್ರ ಬಲವೂ ತಮ್ಮಲ್ಲಿಯೇ ಉಂಟು ಎಂದು ಗರ್ವಿತರಾಗಿಯ ಮನ್ನಧ ಬಾಣ ಪೀಡಿತರಾಗಿಯ ಹಿಮವತ್ಪರ್ವ ತದಲ್ಲಿ ಹುಟ್ಟಿದ ಮದದಾನೆಗಳೋಪಾದಿಯಲ್ಲಿ ಮದಿಸಿ ದೌಪದೀದೇವಿಯು ನಮಗಾ ಗಬೇಕು ತಮಗಾಗಬೇಕು ? ಎಂದು ತವಕ ಪಡುತ್ತಾ ಧನುಸ್ಸನ್ನು ಎತ್ತಿ ಲಕ್ಷಭೇದ ವನ್ನು ಮಾಡುವುದಕ್ಕೆ ಹೊರಟರು, ಆ ಸ್ವಯಂವರವನ್ನು ನೋಡುವದಕ್ಕೆ ಏಕಾದಶ ಇನ್ನು ಮುನ್ನ ಶುಕ ಕದ ಗಾ ಗwಾರಿತ.ಶ೧ ೦೩ಷ ಮಸಗಲದ ೧೬ ತಿ ೨೦ಗೆ೦ವತೆಗb raಗ ರದ ಮಕ