ಪುಟ:ಕಥಾಸಂಗ್ರಹ ಸಂಪುಟ ೧.djvu/೧೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೩ನೆಯ ಭಾಗ 173 ದ್ದಣಗಳೂ ಇಂದ್ರ ಯಮ ಕುಬೇರ ಮೊದಲಾದ ಅಷ್ಟದಿಕಾಲಕರೂ ದಿವ್ಯ ವಿಮಾನ ಗಳನ್ನು ಏರಿ ಬಂದು ಆಕಾಶದಲ್ಲಿ ನೆರೆದರು, ಮತ್ತು ದೈತ್ಯರು ಗರುಡರು ಗಂಧರ್ವರು ದೇವರ್ಷಿಗಳು ಪನ್ನ ಗರು ಯಕ್ಷರು ಚಾರಣರು ವಿಶ್ವಾವಸುವ ನಾರದನು ಪರ್ವತನು ಮೊದಲಾದ ದೇವಮುನಿಗಳೂ ಅಪ್ಪರೋಜನಗಳೂ ಬಂದರು, ಆ ಸಮಯದಲ್ಲಿ ಬಲ ರಾಮ ವೃದ್ದಿ ಅಂಧಕರು ಮೊದಲಾದ ಯಾದವರು ಮಾತ್ರ ಕೃಷ್ಣನ ಅಪ್ಪಣೆಯಿಂದ ಆ ಯಂತ್ರಲಕ್ಷ್ಯವನ್ನು ಭೇದಿಸುವುದಕ್ಕೆ ಹೋಗದೇ ನೋಡುತ್ತಿದ್ದರು. ಆಗ ವಾಸು ದೇವನು ಮದವಿಜೃಂಭಣದಿಂದ ಸಮರಸನ್ನದ್ಧರಾಗಿ ಮದದಾನೆಗಳೋಪಾದಿಯಲ್ಲಿ ಕಾಣಿಸುತ್ತಾ ಬೂದಿ ಮುಚ್ಚಿದ ಕೆಂಡಗಳಂತಿರುವ ಪಾಂಡವರೆದು ಮಂದಿಯನ್ನೂ ನೋಡಿ ಸಂತೋಷಿಸಿ ಕ್ಷಣಮಾತ್ರ ತನ್ನ ಮನಸ್ಸಿನಲ್ಲಿ ಆಲೋಚನೆಯನ್ನು ಮಾಡಿ ನಿಶ್ಚಯಿಸಿ ಅಣ್ಣನಾದ ಬಲಭದ್ರನನ್ನು ಕುರಿತು ಎಲೈ, ಮಹಾನುಭಾವನೇ ಬ್ರಾಹ್ಮ ಣರ ಸಭೆಯಲ್ಲಿ ಬ್ರಾಹ್ಮಣವೇಷದಿಂದಿರುವ ಈ ಪಾಂಡವರನ್ನು ನೋಡು, .ಈತನು ಧರರಾಜನು ; ಈತನು ಭೀಮಸೇನನು ; ಈತನೇ ಅರ್ಜುನನು : ಇವರಿಬ್ಬರೂ ನಕುಲ ಸಹದೇವರು ಎಂದು ತಿಳಿಸಲು ; ಆ ಬಲರಾಮನು ಮೆಲ್ಲ ಮೆಲ್ಲನೆ ಇವರ ರೂಪರೇಖಾ ಲಕ್ಷಣಗಳನ್ನು ನೋಡಿ--ಇವರು ಪಾಂಡುಕುಮಾರರು ಹೌದು ಎಂದು ನಿಶ್ಚಯಿಸಿ ಸಂತೋಷಪಟ್ಟನು. ಆಗ ಲಕ್ಷಭೇದನಕ್ಕೆ ಹೊರಟಿದ್ದ ರಾಜಕುಮಾರಕರೆಲ್ಲರೂ ದೌಪದಿಯಲ್ಲಿ ನೆಟ್ಟ ಕಣ್ಣುಳ್ಳಂಥಾವರಾಗಿ ಪ್ರೌಪದಿಯು ತಮ್ಮನ್ನು ವರಿಸಬೇಕೆಂಬ ಅಭಿಲಾಷೆಯಿಂದ ಒಬ್ಬರೊಬ್ಬರಾಗಿ ತಮ್ಮ ವಿಕ್ರಮಗಳನ್ನು ತೋರಿಸಿ ಧನುಸ್ಸಿನಲ್ಲಿ ಹೆದೆಯನ್ನು ಏರಿಸು ವುದಕ್ಕೆ ಕೈಲಾಗದೆ ಗರ್ವವನ್ನು ಬಿಟ್ಟು ಹಿಂದು ಮುಂದು ತೋರದೆ ಸಿಕ್ಕಿ ಕೊಂಡು ಧನುರ್ವೆಗದಿಂದ ಪೆಟ್ಟು ತಿಂದು ಭೂಮಿಯಲ್ಲಿ ಹೊರಳುತ್ತಾ ತೊಟ್ಟ ಭೂಷಣಗಳು ತುಮುರಾಗಲು ; ಉಟ್ಟ ವಸ್ತ್ರಗಳು ಜಾರಿ ಬೀಳಲು ; ಸುತ್ತಿದ ಹೂಮಾಲೆಗಳೆಲ್ಲಾ ಕೆದರಿ ಸುರಿಯಲು ; ಬ್ರೌಪದಿಯಲ್ಲಿರುವ ಆಶೆಯನ್ನು ಬಿಟ್ಟು ನಾಚಿಕೆಯಿಂದ ದುಃಖಪಡುತ್ತಿದ್ದರು, ಆ ಸಮಯದಲ್ಲಿ ಶಿಶುಪಾಲನು ಮಹಾ ಧನುಸ್ಸಿನ ಸವಿಾಪಕ್ಕೆ ಬಂದು ಆ ಧನುಸ್ಸನ್ನು ತೆಗೆದುಕೊಂಡು ಹೆದೆಯನ್ನು ಏರಿಸುವಾಗ ಉದ್ದಿನ ಕಾಳಿ ನಷ್ಟು ಪ್ರಮಾಣವು ಸಾಲದೇಹೋಗಲು ; ಸಿಡಿದ ಆ ಧನುಸ್ಸಿನ ವೇಗದಿಂದ ಪೆಟ್ಟು ಬಿದ್ದು ಭೂಮಿಯಲ್ಲಿ ಮೊಣಕಾಲುಗಳಿಂದ ನಿಂತು ಸಾಧನೆಯ ಬಲುಮೆಯಿಂದ ಬೀಳದೆ ಆಚೆಗೆ ತೊಲಗಿದನು, ಆ ಬಳಿಕ ಮಹಾ ಪರಾಕ್ರಮಶಾಲಿಯ ಮದದಾನೆ ಯಂತೆ ನಡೆಯುಳ್ಳವನೂ ಕಂಬುಗ್ರೀವನೂ ಕೆಂಪಾದ ಕಣ್ಣುಗಳುಳ್ಳವನೂ ಮಹಾ ವೇಗವಂತನೂ ಆದ ಜರಾಸಂಧನು ಧನುಸ್ಸಿನ ಸವಿಾಪಕ್ಕೆ ಬಂದು ಹೆಸರುಕಾಳಷ್ಟು ಮಾತ್ರ ಗುರಿ ತಪ್ಪುವಹಾಗೆ ಹೆದೆಯನ್ನು ಏರಿಸಲು ; ಆ ಧನುಸ್ಸು ಅವನನ್ನು ಬೀಸಿ ಹೊಡೆದುದರಿಂದ ಆತನು ಭೂಮಿಯಲ್ಲಿ ಬೀಳುವಾಗ ಕೈಗಳನ್ನು ಅನಿಸಿಕೊಂಡು ನಿಂತು ನಾಚಿಕೆಪಟ್ಟು ರಂಗಸ್ಥಳದ ದೆಸೆಯಿಂದ ಆಚೆಗೆ ಹೋದನು, ಆ ಮೇಲೆ ಮದ್ರದೇಶಾ ಧಿಪತಿಯಾದ ಶಲ್ಯನು 'ಧನುಸ್ಸಿನ ಸವಿಾಪಕ್ಕೆ ಬಂದು ಸಾಸುವೇಕಾಳು ಪ್ರಮಾಣವು