ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

174 KANARESE SELECTIONSPART III ಕಡಮೆಯಾಗುವಹಾಗೆ ಹೆದೆಯನ್ನು ಏರಿಸಿ ಆ ಧನುಸ್ಸಿನಿಂದ ಪೆಟ್ಟು ತಿಂದು ಪರಾಭವ ವನ್ನು ಹೊಂದಿದನು. ಅನಂತರದಲ್ಲಿ ಸೂರ್ಯನ ಮಗನಾದ ಕರ್ಣನು ಧನುಸ್ಸಿನ ಸಮಿಾಪಕ್ಕೆ ಬಂದು ಕೂದಲಿನ ಪ್ರಮಾಣವು ತಗ್ಗಾಗುವ ಹಾಗೆ ಹೆದೆಯನ್ನು ಏರಿಸಿ ಆ ಧನುಸ್ಸಿನ ಪೆಟ್ಟಿನಿಂದ ಪರಾಜಯವನ್ನು ಹೊಂದಿ ಹೊರಟುಹೋದನು, ಈ ಪ್ರಕಾ ರವಾಗಿ ಸಕಲರಾದ ಅರಸುಗಳೂ ಆ ಧನುಸ್ಸಿನ ದೆಸೆಯಿಂದ ಪರಾಭವವನ್ನು ಹೊಂದಿದರು. ತರುವಾಯ ಬ್ರಾಹ್ಮಣರ ಮಧ್ಯದಲ್ಲಿ ಅರ್ಜುನನು ಎದ್ದು ಧೈರ್ಯದಿಂದ ಶೀಘ್ರವಾಗಿ ಬರುತ್ತಿರಲು ; ಇಂದ್ರಧ್ವಜದೋಪಾದಿಯಲ್ಲಿ ಬರುವ ಇಂದ್ರನ ಮಗ ನನ್ನು ನೋಡಿ ಅಲ್ಲಿರುವ ಬ್ರಾಹ್ಮಣರೂ ಬ್ರಹ್ಮಚಾರಿಗಳೂ ಕೃಷ್ಣಾ ಜಿನೋತ್ತರೀಯಗಳನ್ನು ಹಾರಿಸುತ್ತಾ ಸಂತೋಷದಿಂದ ಕೋಲಾಹಲವನ್ನು ಮಾಡಿದರು, ಕರ್ಣ ಶಲ್ಯರು ಮೊದಲಾದವರಿಗೂ ಚಾಪವಿದ್ಯಾವಿಶಾರದರಾಗಿಯ ಮಹಾ ಬಲಪರಾಕ್ರಮಶಾಲಿ ಗಳಾಗಿಯೂ ಇರುವ ಮಹಾ ವೀರರಿಗೂ ಹೆದೆಯನ್ನು ಏರಿಸುವದಕ್ಕೆ ಆಶಕ್ಯವಾದ ಈ ಧನುಸ್ಸಿಗೆ ಅಸ್ತ್ರ ವಿದ್ಯಾಹೀನನಾಗಿ ಸ್ವಭಾವದಿಂದ ದುರ್ಬಲನಾಗಿರುವ ಈ ಬ್ರಹ್ಮ ಚಾರಿಯಿಂದ ಹೇಗೆ ಹೆದೆಯನ್ನು ಏರಿಸುವುದಕ್ಕೆ ಶಕ್ಯವಾಗುವುದು ? ಒಂದು ವೇಳೆ ಇವನು ಸಾಹಸದಿಂದ ಏರಿಸಿದರೆ ಈ ಸಭೆಯಲ್ಲಿರುವ ಅರಸುಗಳಿಗೆ ನಾವಿಷ್ಟು ಮಂದಿ ಯ ವಿರೋಧಿಗಳಾಗುತ್ತೇವೆ. ಈತನು ಗರ್ವಾತಿಶಯದಿಂದಲೂ ಸಂತೋಷದಿಂದಲೂ ಬ್ರಾಹ್ಮಣಚಾಪಲ್ಯದಿಂದಲೂ ಮುಂದೆ ಬರುವ ಹಾನಿಯನ್ನು ನೋಡದೆ ಈ ಧನುಸ್ಸನ್ನು ಎತ್ತುವುದಕ್ಕೆ ತೊಡಗಿ ಇದ್ದಾನೆ, ಇದನ್ನು ನಾವು ವಿಚಾರಿಸಿ ನಿಲ್ಲಿಸದೇ ಹೋದರೆ ನಾವು ಪರಿಹಾಸಯೋಗ್ಯರಾಗಿಯ ಅಪ್ರಯೋಜಕರಾಗಿಯ ಹೋಗುತ್ತೇವೆ ಎಂದು ಗುಜುಗುಜನೆ ಮಾತಾಡುತ್ತಿದ್ದರು, ಮತ್ತು ಕೆಲವರು ಬ್ರಾಹ್ಮಣರು ತೇಜೋವಿರಾಜ ಮಾನನಾಗಿಯ ಯೌವ್ವನವಿಜೃಂಭಿತನಾಗಿಯೂ ಆನೆಯ ಸೊಂಡಿಲುಗಳೋಪಾದಿ ಯಲ್ಲಿರುವ ಭುಜಗಳುಳ್ಳವನಾಗಿಯೂ ಬಲಿತಿರುವ ಮುಡುಹುಗಳುಳ್ಳವನಾದಿಯ ಧೈರ್ಯದಲ್ಲಿ ಹಿಮವತ್ಪರ್ವತಕ್ಕೆ ಸಮಾನನಾಗಿಯ ಇರುವ ಈತನ ಉತ್ಸಾಹಶಕ್ತಿ ಯನ್ನು ನೋಡುವುದರಲ್ಲಿ ಈತನು ಕಾರ್ಯವನ್ನು ಸಾಧಿಸಬಹುದು ಎಂದು ತೋರು ತದೆ. ಅಶಕ್ತನಾದರೆ ಇಂಥಾ ಕಾರ್ಯಕ್ಕೆ ಹೋಗುವನೇ ? ಸ್ಥಾವರ ಜಂಗಮಾತ್ಮ ಕವಾದ ಈ ಲೋಕದಲ್ಲಿ ಬ್ರಾಹ್ಮಣರಿಗೆ ಅಸಾಧ್ಯವಾದುದೇನಾದರೂ ಉಂಟೇ ? ಬ್ರಾಹ್ಮಣರು ಉದಕಾಹಾರಿಗಳಾಗಿಯ ವಾಯುಭಕ್ಷಕರಾಗಿಯ ಫಲಾಹಾರಿಗಳಾ ಗಿಯ ಇದ್ದು ಕೊಂಡು ವ್ರತಶೀಲರಾದುದರಿಂದ ಶರೀರದಲ್ಲಿ ಬಲಹೀನರಾದರೂ ಬ್ರಹ್ಮ ತೇಜಸ್ಸಿನಲ್ಲಿ ಬಲವಂತರಾಗಿರುವರೆಂದು ಪ್ರಸಿದ್ದಿ ಯಾಗಿರುವುದು, ಈತನ ದೆಸೆ ಯಿಂದ ಅವಮಾನವೂ ಜನಾಪಹಾಸವೂ ಬಹುಜನದ್ವೇಷವೂ ಯಾಕೆ ಬಂದೀತು ? ಬ್ರಾಹ್ಮಣನು ಯಾವ ಕಾರ್ಯವನ್ನು ಮಾಡಿದರೂ ತಡೆಯುವವರುಂಟೇ ? ಎಂದು ಹೇಳುತ್ತಿದ್ದರು. ಆ ಕಾಲದಲ್ಲಿ ಇವನ ಬೆಡಗನ್ನು ನೋಡಿ ಮನಸ್ಸಿನಲ್ಲಿ ಚಿಂತಿಸುತ್ತಾ ರಾಜ ಕುಮಾರರೆಲ್ಲಾ ಒಬ್ಬರ ಮುಖವನ್ನು ಒಬ್ಬರು ನೋಡುತ್ತಿದ್ದರು. ಆಗ ಅರ್ಜುನನು