ಪುಟ:ಕಥಾಸಂಗ್ರಹ ಸಂಪುಟ ೧.djvu/೧೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ೩ನೆಯ ಭಾಗ 175 ಧೃಷ್ಟದ್ಯುಮ್ನ ನನ್ನು ನೋಡಿ-ಬ್ರಾಹ್ಮಣನು ಈ ಧನುಸ್ಸಿನಲ್ಲಿ ಹೆದೆಯನ್ನು ಏರಿಸ ಬಹುದೇ ? ಎಂದು ಕೇಳಲು ; ಧೃಷ್ಟದ್ಯುಮ್ಮನು ಬ್ರಾಹ್ಮಣ ಕ್ಷತ್ರಿಯರೊಳಗೆ ಯಾರಾದರೂ ಈ ಧನುಸ್ಸಿನ ಹೆದೆಯನ್ನೆ ಏರಿಸಿದರೆ ಆತನಿಗೆ ತನ್ನ ತಂಗಿಯನ್ನು ಕೊಡುತ್ತೇನೆ ಅಂದನು. ಆಮೇಲೆ ಅರ್ಜುನನು ಧನುಸ್ಸಿನ ಸವಿಾಪಕ್ಕೆ ಬಂದು ಪರ್ವತದೋಪಾದಿಯಲ್ಲಿ ಸ್ಥಿರವಾಗಿ ನಿಂತು ಆ ಧನುಸ್ಸಿಗೆ ಪ್ರದಕ್ಷಿಣ ನಮಸ್ಕಾರಗ ಳನ್ನು ಮಾಡಿ ಹಸ್ತದಿಂದ ಎತ್ತಿ ನಿಮಿಷಮಾತ್ರದಲ್ಲಿ ಹೆದೆಯನ್ನು ಏರಿಸಿ ಐದು ಬಾಣ ಗಳನ್ನು ಪ್ರಯೋಗಿಸಲು ; ಆ ಬಾಣಗಳು ಯಂತ್ರದ ರಂಧ್ರಮಾರ್ಗದಿಂದ ಹೋಗಿ ಆ ಲಕ್ಷಗಳನ್ನು ಭೂಮಿಗೆ ಕೆಡಹಿದುವು. ಆಗ ಅಂತರಿಕ್ಷದಲ್ಲಿ ಜಯ ಜಯಧ್ವನಿಯು ಕೇಳಿಸಿತು. ರಂಗಮಧ್ಯದಲ್ಲಿ ಸಮಸ್ತ ಜನಗಳೂ ಸಂತೋಷದಿಂದ ಕೋಲಾಹಲಧ್ವನಿ ಗಳನ್ನು ಮಾಡಿದರು, ದೇವತೆಗಳು ಪುಷ್ಪವೃಷ್ಟಿ ಯನ್ನು ಕರೆದರು ಬ್ರಾಹ್ಮಣರು ಉತ್ತರೀಯಗಳನ್ನು ಮೇಲಕ್ಕೆ ಹಾರಿಸಿ ಕುಣಿದಾಡಿದರು, ಸಕಲ ವಾದ್ಯಗಳೂ ಏಕ ಕಾಲದಲ್ಲಿ ಮೊಳಗಿದುವು. ಸೂತ ಮಾಗಧ ವಂದಿ ವೈ ತಾಳಿಕರು ಅರ್ಜುನನನ್ನು ಅನೇಕ ಪ್ರಕಾರವಾಗಿ ಸ್ತುತಿಸಿದರು, ಈ ರೀತಿಯಾಗಿ ಸಮಸ್ತ ಜನರ ಕೋಲಾಹಲ ಧ್ವನಿಯು ವಿಜೃಂಭಿಸಲು ; ಧರ್ಮರಾಜನು ನಕುಲಸಹದೇವರೊಡನೆ ಕೂಡಿ ತಾನಿದ್ದ ಸ್ಥಳಕ್ಕೆ ಹೊರಟು ಹೋದನು. ಪಾಂಚಾಲರಾಜನ ಮಗಳು ಲಕ್ಷ್ಯವನ್ನು ಕೆಡಹಿದ ಇ೦ದ್ರ ಸಮಾನನಾದ ಇಂದ್ರಪುತ್ರನನ್ನು ನೋಡಿ ಯಾವಾಗಲೂ ಎಡೆಬಿಡದೆ ಸಾಹಚ ರ್ಯವನ್ನು ಮಾಡುವಂಧಾವಳ ಹಾಗೆ ತನ್ನ ಪ್ರೀತಿಯಿಂದ ನಗುತ್ತಾ ನಗದೆ ಇರುವವಳ ಹಾಗೆ ಅಭಿನಯಿಸುತ್ತಾ ಕಡೆಗಣ್ಣಿನ ನೋಟದಿಂದಲೇ ನೋಡುತ್ತಾ ಬಿಳುಪಾದ ಪುಷ್ಪ ಮಾಲಿಕೆಯನ್ನು ಕೈಕೊಂಡು ನಸುನಗೆಯೊಡನೆ ಕೂಡಿ ಆತನ ಸವಿಾಪಕ್ಕೆ ಹೋಗಿ ವಿಸ್ತಾರವಾದ ವಕ್ಷದಲ್ಲಿ ಅಮೂಲ್ಯವಾದ ಪುಷ್ಪಮಾಲಿಕೆಯನ್ನು ಹಾಕಿ ಶಚೀದೇ ವಿಯು ದೇವೇಂದ್ರನನ್ನೂ ಸ್ವಾಹಾದೇವಿಯು ಅಗ್ನಿ ಯನ್ನೂ ಲಕ್ಷ್ಮಿದೇವಿಯು ಮಹಾವಿಷ್ಣುವನ್ನೂ ಸುವರ್ಚಲೆಯು ಸೂರ್ಯನನ್ನೂ ರತಿದೇವಿಯು ಮನ್ಮಧನನ್ನೂ ಪಾರ್ವತಿಯು ಪರಮೇಶ್ವರನನ್ನೂ ವರಿಸಿದ ಹಾಗೆ ವರಿಸಿದಳು. ದ್ರುಪದರಾಜನು ಆ ಅತಿಶಯವನ್ನು ನೋಡಿ ಸಂತೋಷಪಡುತ್ತಾ ತನ್ನ ಸೇನೆಯೊಡನೆ ಕೂಡಿ ಆತನಿಗೆ ಸಹಾಯವನ್ನು ಮಾಡಬೇಕೆಂದೆಣಿಸಿ ರಂಗಮಧ್ಯದಲ್ಲಿ ಬ್ರೌಪದಿಯನ್ನು ಕೈಕೊಂಡು ಬ್ರಾಹ್ಮಣರಿಂದ ಪೂಜ್ಯನಾಗಿ ಇರುವ ಅರ್ಜುನನ ಸಂಗಡಲೇ ಹೊರಟು ಹೋದನು. ತರುವಾಯ ಈ ಪ್ರಕಾರದಲ್ಲಿ ದ್ರುಪದರಾಜನು ಆ ಮಹಾನುಭಾವನಾದ ಬ್ರಾಹ್ಮಣನಿಗೆ ಕನ್ಯಕೆಯಂ ಕೊಟ್ಟುದನ್ನು ತಿಳಿದು ಸಕಲರಾದ ಅರಸುಗಳೂ ಒಬ್ಬ ರೊಬ್ಬರು ಮುಖಗಳನ್ನು ನೋಡಿಕೊಳ್ಳುತ್ತಾ-ಅಕಟಕಟಾ ! ಈ ನೃಪಾಧಮನು ನಮ್ಮೆಲ್ಲರನ್ನೂ ಕರತರಿಸಿ ಔತಣವನ್ನು ಮಾಡಿಸಿ ನಮ್ಮನ್ನು ತೃಣೀಕರಿಸಿ ಈ ಕನ್ಯಾ ರತ್ವ ವನ್ನು ಬ್ರಾಹ್ಮಣನ ಪಾಲು ಮಾಡಬೇಕೆಂಬ ಎಣಿಕೆಯಲ್ಲಿ ಇದ್ದನು ಎಂದು ಈಗ ಗೊತ್ತಾಯಿತು. ಈತನು ವೃದ್ಧನೂ ಗುಣವಂತನೂ ಪೂಜ್ಯನೂ ಆಗಿದ್ದಾನೆಂದು ನಾವು ನಂಬಬಾರದು, ಸಕಲ ರಾಜವಿರೋಧಿಯಾದ ಮತ್ತು ದುರಾತ್ಮನಾದ ಈತನನ್ನು