ಪುಟ:ಕಥಾಸಂಗ್ರಹ ಸಂಪುಟ ೧.djvu/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

176 KANARESE SELECTIONS-PART III ಮಗನೊಡನೆ ಕೊಂದರೂ ದೋಷವಿಲ್ಲ, ದೇವಕುಮಾರಕರ ಹಾಗಿರುವ ಅನೇಕ ರಾಜಕುಮಾರಕರು ಬಂದು ನೆರೆದಿರುವಲ್ಲಿ ಈತನ ಮಗಳಿಗೆ ಯೋಗ್ಯನಾದ ಒಬ್ಬ ವರನೂ ಇಲ್ಲದೆ ಹೋದನೇ ? ಸ್ವಯಂವರವು ಕ್ಷತ್ರಿಯರಿಗಲ್ಲದೆ ಬ್ರಾಹ್ಮಣರಿಗೆ ಸಲ್ಲದು, ನಮಗೆ ಬ್ರಾಹ್ಮಣರ ಗೊಡವೆ ಏತಕ್ಕೆ ! ಅವರು ಅಜ್ಞಾನದಿಂದ ಇಂಥಾ ರಾಜವಿರೋಧವನ್ನು ಮಾಡಿದರೂ ಅವರನ್ನು ನಿಗ್ರಹಿಸುವುದು ನಮಗೆ ಧರ್ಮವಲ್ಲ. ನಮಗಿರುವ ಪುತ್ರ ಮಿತ್ರ ಧನಗಳೂ ರಾಜ್ಯವೂ ಪ್ರಾಣಗಳೂ ಬ್ರಾಹ್ಮಣರ ಪೂಜಾ ನಿಮಿತ್ತವಾದುದರಿಂದ ಅವರಿಗೆ ಹಿಂಸೆಯನ್ನು ಮಾಡಬಾರದು, ನಮಗೆ ಅವಮಾನಕ್ಕೆ ಕಾರಣವಾದ ಈ ಕನ್ಯಕೆಯ ತಂದೆಯನ್ನು ಎಳ್ಳು ಬಳ್ಳಷ್ಟಾಗಿ ಛೇದಿಸಿ ಈ ಹೊತ್ತು ಮೊದಲುಗೊಂಡು ಯಾರಾದರೂ ಅರಸುಗಳಿಗೆ ಅವಮಾನಕರಗಳಾದ ಕಾರ್ಯಗಳನ್ನು ಅಜ್ಞಾನದಿಂದಲಾದರೂ ಮಾಡದೆ ಇರುವ ಹಾಗೆ ಮಾಡಬೇಕು ಎಂದು ತಮ್ಮ ತಮ್ಮೊ ಳಗೆ ನಿಶ್ಚಯಿಸಿ ದ್ರುಪದರಾಜನನ್ನು ಸಂಹರಿಸಬೇಕೆಂದು ಹಿಡಿಯುವುದಕ್ಕೆ ಹೋಗಲು; ದ್ರುಪದನು ಭಯದಿಂದ ಕಾರ್ಪಣ್ಯದಿಂದಾದರೂ ಪ್ರಾಣರಕ್ಷಣೆಯನ್ನು ಮಾಡಿ ಕೊಂಡು ಕಲಹವಿಲ್ಲದೆ ಇರಬೇಕೆಂದು ಯೋಚಿಸಿ ಸುಮ್ಮನಿರಲು ; ಇದನ್ನು ನೋಡಿ ಭೀಮಾರ್ಜುನರಿಬ್ಬರೂ ಮದದಾನೆಗಳೋಪಾದಿಯಲ್ಲಿ ನಿಂತು ನಾನಾ ಪ್ರಕಾರವಾದ ಆಯುಧಗಳನ್ನೂ ಕೈತೊಡಪುಗಳನ್ನೂ ಕವಚಗಳನ್ನೂ ಧರಿಸಿ ತಮ್ಮ ಮೇಲೆ ಬೀಳು ವಂಧ ರಾಜಕುಮಾರಕರ ಮೇಲೆ ಕಾಣಿಸಿಕೊಂಡರು ಭೀಮಸೇನನು ವಿಚಿತ್ರವಾದ ಸಾಹಸದಿಂದ ತನ್ನ ಭುಜಬಲವನ್ನು ತೋರಿಸುತ್ತಾ ಅತಿವೇಗದಿಂದ ಓಂದು ಮಹಾ ವೃಕ್ಷವನ್ನು ಕಿತ್ತು ಕೊಂಡು ಮದದಾನೆಯಂತೆಯ ಯಮನಂತಯ ಬಂದು ಅರ್ಜುನನ ಸಮೀಪದಲ್ಲಿ ನಿಂತನು. ಆ ಸಮಯದಲ್ಲಿ ಅಲ್ಲಿರುವ ಬ್ರಾಹ್ಮಣೋತ್ತಮರು ಕೃಷ್ಣಾಜಿನಗಳನ್ನು ಹಾರಿ ಸುತ್ತಾ ಕೈಯ್ಯಲ್ಲಿರುವ ಜಲಪಾತ್ರೆಗಳನ್ನು ಎತ್ತಿ ಎತ್ತಿ ಹಾಕುತ್ತಾ ಅರ್ಜುನನಿಗೆ ಎಲೈ, ಬ್ರಾಹ್ಮಣಕುಮಾರನೇ ! ನೀನು ಮನಸ್ಸಿನಲ್ಲಿರುವ ಭಯವನ್ನು ಬಿಡು. ಸಮಯ ಬಂದಾಗ ನಾವು ನಿನಗೆ ಸಹಾಯವಾಗಿ ಒಂದು ಶತ್ರುಗಳನ್ನು ಜಯಿಸುತ್ತೇವೆ ಎನಲು; ಅರ್ಜುನನು ನಸುನಗುತಾ-ನೀವು ಯುದ್ಧಕ್ಕೆ ಬರಬೇಡಿರಿ ಪಾರ್ಶ್ವಗಳಲ್ಲಿ ಇದ್ದು ಕೊಂಡು ನೋಡುತ್ತಿರಿ ! ನನ್ನ ಶರಪರಂಪರೆಗಳಿಂದ ಈ ಶತ್ರುಗಳ ಸಮಹವನ್ನು ಗರುಡ ಮಂತ್ರಗಳಿಂದ ಸರ್ಪಗಳನ್ನು ತಡೆಯುವ ಮೇರೆಗೆ ನಾನೊಬ್ಬನೇ ತಡೆಯು ತೇನೆ ಎಂದು ಹೇಳಿ ಆ ಲಕ್ಷ್ಯವನ್ನು ಕೆಡಹುವುದಕ್ಕೆ ತಂದಿದ್ದ ಮಹಾ ಧನುಸ್ಸನ್ನೆ ಕೈಗೆ ತೆಗೆದುಕೊಂಡು ಅದಕ್ಕೆ ಹೆದೆಯನ್ನು ಏರಿಸಿ ಭೀಮನೊಡನೆ ಕೂಡಿ ಧೈರ್ಯ ಗೊಂಡು ಪರ್ವತದ ಹಾಗೆ ಚಲಿಸದೆ ನಿಂತು ಕೋಪಾವೇಶದಿಂದ ಯುದ್ಧಕ್ಕೆ ಬಂದಿ ರುವ ಕರ್ಣನೇ ಮೊದಲಾದ ಮಹಾ ಯೋಧಿಗಳ ಎದುರಿನಲ್ಲಿ ಬಂದು ನಿಂತನು. ಆ ರಾಜಕುಮಾರಕರು ಯುದ್ಧ ಮುಖದಲ್ಲಿ ಜಯಿಸಬೇಕೆಂದು ಕಾಣಿಸಿಕೊಂಡವನು ಬ್ರಾಹ್ಮಣನಾದರೂ ಕೊಲ್ಲುವುದು ಯುಕ್ತವೆಂದು ನಿಶ್ಚಯಿಸಿ ಯುದ್ಧ ಸನ್ನದ್ಧರಾಗಿ ಬಂದು ನಿಂತರು. ಆಗ ಸೂರ್ಯನ ಮಗನಾದ ಕರ್ಣನು ಹೆಣ್ಣಾನೆಯ ನಿಮಿತ್ತವಾಗಿ