ಪುಟ:ಕಥಾಸಂಗ್ರಹ ಸಂಪುಟ ೧.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ_೩ನೆಯ ಭಾಗ 177 ಮತ್ತೊಂದಾನೆಯೊಡನೆ ಹೋರುವ ಮದದಾನೆಯ ಚ೦ದದಿ೦ದ ಅರ್ಜುನನೊಡನೆ ಹೋರಿದನು, ಮದ್ರ ದೇಶಾಧಿಪತಿಯಾದ ಮತ್ತು ಮಹಾ ಬಲಶಾಲಿಯಾದ ಶಲ್ಯನು ಭೀಮನೊಡನೆ ಯುದ್ಧವನ್ನು ಮಾಡುತ್ತಿದ್ದನು ದುಯ್ಯೋಧನನೇ ಮೊದಲಾದ ಅರ ಸುಗಳು ಮಿಕ್ಕಾದ ಬ್ರಾಹ್ಮಣರೊಡನೆ ಕೂಡಿ ಮೆಲ್ಲ ಮೆಲ್ಲನೆ ವಿರೋಧದಿಂದ ಮೃದು ವಾದ ಬಾಣಗಳನ್ನು ಪ್ರಯೋಗಿಸುತ್ತಿದ್ದರು. ಅರ್ಜುನನು ತನ್ನ ಮೇಲೆ ಕಾಣಿಸಿಕೊಂಡ ಕರ್ಣನ ಮೇಲೆ ಮೂರು ಬಾಣಗಳನ್ನು ಪ್ರಯೋಗಿಸಲು ಅತಿತೀಕ್ಷ್ಯವಾದ ಆತನ ಬಾಣಗಳ ಪೆಟ್ಟುಗಳಿಂದ ಕರ್ಣನು ಮರ್ಥೆಯನ್ನು ಹೊಂದಿ ಅತಿ ಪ್ರಯತ್ನದಿಂದ ಎಚ್ಚತ್ತು ತಿರಿಗಿ ಆತನ ಮೇಲೆ ಕಾಣಿಸಿಕೊಂಡನು. ಹೀಗೆ ಮಹಾ ವೀರರಿಬ್ಬರೂ ಪರಸ್ಪರಜಯಾಭಿಲಾಷಿಗಳಾಗಿ ಅಪರಿಮಿತ ಪರಾ ಕ್ರಮವಿಜೃಂಭಣದಿಂದ--ನೀನು ತೋರಿಸುವಂಥಾ ಪರಾಕ್ರಮಕ್ಕೂ ನಾನು ತೋರಿ ಸುವಂಥಾ ಪರಾಕ್ರಮಕ್ಕೂ ವ್ಯತ್ಯಾಸವನ್ನು ನೋಡು ಎಂದು ಶೂರರಾಡುವ ಮಾತನ್ನು ಆಡುತ್ತಾ ಹೋರುತ್ತಿರುವ ಸಮಯದಲ್ಲಿ ಕರ್ಣನು ಅರ್ಜುನನ ಅಸದೃಶ ಭುಜಬಲವ ನ್ನು ನೋಡಿ ಕೋಪಾಟೋಪವಿಜೃಂಭಿತನಾಗಿ ವೇಗವುಳ್ಳಂಧ ಆತನ ಬಾಣಗಳಿಗೆ ಸ್ವಲ್ಪ ವಾದರೂ ಭಯಪಡದೆ ಸೈನ್ಯವು ಸಂತೋಷಪಡುವಂತೆ ಸಿಂಹನಾದವನ್ನು ಮಾಡಿ ಎಲೈ, ಬ್ರಾಹ್ಮಣೋತ್ತಮನೇ ! ನಿನ್ನ ಭುಜಬಲಕ್ಕೂ ಧೈರ್ಯಕ್ಕೂ ನಿನ್ನ ಶಸ್ತ್ರಾಸ್ತ್ರ ಕೌಶಲಕ್ಕೂ ಮೆಚ್ಚಿದೆನು, ನೀನು ಮರ್ತಿಮತ್ತಾಗಿ ಪ್ರತ್ಯಕ್ಷವಾದ ಧನುರ್ವೇದವೋ ಪರಶುರಾಮನೋ ? ಇಂದ್ರನೋ ? ಉಪೇಂದ್ರನೋ ? ತಿಳಿಯಲಿಲ್ಲ, ಇವರೊಳಗೆ ಯಾರೋ ಒಬ್ಬನು ತನ್ನ ದಿವ್ಯರೂಪವನ್ನು ಮರೆಮಾಡಿಕೊಂಡು ಬ್ರಾಹ್ಮಣರೂಪದಿಂದ ಬಂದಿರುವನಾಗಿ ನಿಶ್ಚಯಿಸಿದ್ದೇನೆ. ನಾನು ಕೋಪಿಸಿಕೊಂಡು ಯುದ್ದದಲ್ಲಿ ನಿಂತರೆ ದೇವೇಂದ್ರನೂ ಆತನ ಮಗನಾದ ಅರ್ಜುನನೂ ಹೊರತಾಗಿ ಮತ್ತೊಬ್ಬರೂ ನನ್ನ ಎದುರಿಗೆ ನಿಲ್ಲಲಾರರು, ಪಾಂಡವರು ಆ ಹೊತ್ತೇ ಅರಗಿನ ಮನೆಯಲ್ಲಿ ಬೆಂದುಹೋ ದರು, ನೀನು ಪಿನಾಕಪಾಣಿಯಾದ ಪರಮೇಶ್ವರನೋ ಯಾರೋ ತಿಳಿಸು. ನಾನು ಸಕಲ ಧನುರ್ಧರರೊಳಗೆ ಶ್ರೇಷ್ಟನಾದ ಕರ್ಣನು. ಧನುರ್ವೇದದಲ್ಲಿಯ ಬ್ರಹ್ಮಾಸ್ತ್ರ ಪ್ರಯೋಗದಲ್ಲಿಯೂ ಸಹ ಗುರುವಿನ ಉಪದೇಶ ಪ್ರಭಾವದಿಂದ ಶಿಕ್ಷಿತನಾಗಿದ್ದರೂ ಬಾಹುಬಲವಿಜೃಂಭಿತನಾದ ನಿನ್ನಲ್ಲಿ ನನ್ನ ಬಾಹುಬಲವನ್ನು ಕಾಣಿಸುವುದಿಲ್ಲ ಎಂದು ಅರ್ಜುನನನ್ನು ಕೆಣಕಲಾರದೆ ನುಡಿಯಲು ಅರ್ಜುನನು ಕರ್ಣನನ್ನು ನೋಡಿ ಎಲೈ, ಸೂತನಂದನನೇ ! ನಾನು ರೂಪನ್ನು ಹೊಂದಿ ಬಂದಿರುವ ಧನುರ್ವೇದವೂ ಪ್ರತಾ ಪಶಾಲಿಯಾದ ಪರಶುರಾಮನೂ ಮಹೇಶ್ವರನೂ ಇಂದ್ರನೂ ಅಲ್ಲ, ಗುರುವಿನ ಉಪ ದೇಶದಿಂದ ಬಹ್ಮಾಸ್ತ್ರದಲ್ಲಿ ಸಮರ್ಧನಾದ ದ್ವಿಜನು, ಈ ಮಹಾ ಯುದ್ಧ ದಲ್ಲಿ ನಿನ್ನನ್ನು ಜಯಿಸುವುದಕ್ಕೆ ಎಣಿಸಿ ಇದ್ದೇನೆ. ನೀನು ಪ್ರಾಣಗಳನ್ನು ತಪ್ಪಿಸಿಕೊಂಡು ಎಲ್ಲಿಗಾದರೂ ಹೊರಟುಹೋಗು. ನಾನು ನಿನ್ನನ್ನು ಜೀವಸಹಿತವಾಗಿ ಬಿಡುವುದಿಲ್ಲ, ಇಲ್ಲದಿದ್ದರೆ ನಾನು ಪರಾಜಿತನಾದೆನು ಎಂದು ಹೇಳಿ ಸುಖವಾಗಿ ಹೋಗು ಎಂದು ನುಡಿದು ಕರ್ಣನ ಧನುಸ್ಸನ್ನು ಖಂಡಿಸಿದನು, ಆ ಬಳಿಕ ಕರ್ಣನು ಮತ್ತೊಂದು ಧನುಸ್ಸನ್ನು ತೆಗೆದು 12