178 KANARESE SELECTIONS-PART III ಕೊಂಡು ಯುದ್ಧಕ್ಕೆ ಬರಲು ಬಾಣಸಹಿತವಾದ ಈ ಧನುಸ್ಸನ್ನು ಪುನಃ ಖಂಡಿಸಿ ಬಹು ಬಾಣಗಳನ್ನು ಆತನ ಮೇಲೆ ಪ್ರಯೋಗಿಸಲು ಕರ್ಣನು ಆ ಬಾಣಗಳಿ೦ದ ಪೆಟ್ಟು ತಿಂದು ಓಡಿಹೋಗಿ ಮುಹೂರ್ತ ಮಾತ್ರ ವಿಶ್ರಮಿಸಿಕೊಂಡಿದ್ದು ತಿರಿಗಿ ಧನುಸ್ಸ ನ್ಯೂ ಬಾಣಗಳನ್ನೂ ತೆಗೆದು ಕೊಂಡು ಅರ್ಜುನನ ಸಮೀಪಕ್ಕೆ ಬಂದು ಅನೇಕವಾದ ಬಾಣವೃಷ್ಟಿಯನ್ನು ಸುರಿಸಲು ಪುನಃ ಅರ್ಜುನನು ಮತ್ತೊಂದು ಬಾಣದಿಂದ ಆತನ ಧನುಸ್ಸನ್ನು ಖಂಡಿಸಿದನು. ಆಗ ಆತನು--ಬ್ರಹ್ಮ ತೇಜಸ್ಸನ್ನು ಗೆಲ್ಲುವುದಕ್ಕೆ ಎಂಥವ ನಿಗೂ ಶಕ್ಯವಲ್ಲ ಎಂದು ಯುದ್ದವನ್ನು ಬಿಟ್ಟು ಓಡಿಹೋದನು. ಇತ್ತಲಾ ಶಲ್ಯನೂ ಭೀಮಸೇನನೂ ಒಬ್ಬರಿಗೊಬ್ಬರು ಕಾಣಿಸಿಕೊಂಡು ಮದಿ ಸಿದ ಆನೆಗಳ ಹಾಗೆ ಒಬ್ಬನ ಮೇಲೆ ಒಬ್ಬನು ಬಿದ್ದು ಮುಟ್ಟಿ ಪ್ರಹಾರಗಳಿಂದಲೂ ಮೊಣ ಕಾಲುಗಳ ಸೆಟ್ಟುಗಳಿಂದಲೂ ನೋಯಿಸುತ್ತಾ ಹೋಗುತ್ತಿರುವ ಸಮಯದಲ್ಲಿ ಭೀಮ ಸೇನನು ತನ್ನ ಎರಡು ಭುಜಗಳಿಂದಲೂ ಶಲ್ಯನನ್ನು ಬಿಗಿದು ಎತ್ತಿ ಮೇಲಕ್ಕೆ ಹಾರಿಸಿ ಭೂಮಿಯಲ್ಲಿ ಕೆಡಹಿದನು, ಆಗ ಅಲ್ಲಿ ಇರುವ ಬ್ರಾಹ್ಮಣರೆಲ್ಲರೂ ಅಟ್ಟಹಾಸಗಳನ್ನು ಮಾಡಿದರು. ಅರ್ಜುನನಿಂದ ಕರ್ಣನೂ ಭೀಮನಿಂದ ಶಲ್ಯನೂ ಪರಾಜಿತರಾಗಿ ಪಲಾ ಯಮಾನರಾಗಲು ಸಕಲರಾದ ಅರಸುಗಳೂ ಅದನ್ನು ನೋಡಿ--ಈ ಬ್ರಾಹ್ಮಣ ಕುಮಾ ರಕರು ಇಬ್ಬರೂ ಯಾರೋ ” ಎಲ್ಲಿ ಹುಟ್ಟಿದರೋ ? ತಿಳಿಯಬೇಕು. ಲೋಕದಲ್ಲಿ ಪರಶು ರಾಮನು ದ್ರೋಣಾಚಾರ್ಯನು ಕೃಪಾಚಾರ್ಯನು ದೇವಕಿಯ ಮಗನಾದ ಕೃಷ್ಣನು ಕುಂತಿಯ ಮಗನಾದ ಅರ್ಜುನನು ಇವರೇ ಹೊರತಾಗಿ ಕರ್ಣನ ಮುಂದೆ ನಿಲ್ಲು ವಂ ಥಾವರು ಯಾರಾದರೂ ಉಂಟೇ ? ಮದ್ರದೇಶಾಧಿಪತಿಯಾದ ಶಲ್ಯನನ್ನು ಬಲರಾಮ ಭೀಮಸೇನದ ಹೊರತಾಗಿ ಮತ್ತೊಬ್ಬನು ಜಯಿಸುವುದಕ್ಕೆ ಸಮರ್ಥನೇ ? ಅದರಿಂದ ಇವರ ಸ್ವರೂಪವನ್ನು ತಿಳಿದ ಮೇಲೆ ಯುದ್ಧವನ್ನು ಮಾಡುವಣ ಎಂದು ಒಬ್ಬರೊಬ್ಬರು ಮಾತಾಡಿಕೊಳ್ಳುತ್ತಿರುವ ಸಮಯದಲ್ಲಿ ವಾಸುದೇವನು--ಧರ್ಮಮಾರ್ಗವನ್ನು ತಪ್ಪದೆ ಕನ್ಯಾಪರಿಗ್ರಹವನ್ನು ಮಾಡಿದ ಇವರೊಡನೆ ನಿಮಗೆ ಕಲಹವು ಯಾಕೆಂದು ನಿಲ್ಲಿಸಿಬಿಡಲು ಅವರು ತಮ್ಮ ತಮ್ಮ ಸ್ಥಾನಗಳಿಗೆ ಹೊರಟುಹೋದರು. ನೋಡುವುದಕ್ಕೆ ಬಂದಿದ್ದ ಜನರುಸ್ವಯಂವರದ ರಂಗಸ್ಥಳದಲ್ಲಿ ಎಲ್ಲಿ ನೋಡಿ ದರೂ ಬ್ರಾಹ್ಮಣರೇ ಹೆಚ್ಚಿದರು ಎಂತಲೂ ಪಾಂಚಾಲರಾಜನ ಮಗಳು ಬ್ರಾಹ್ಮಣ ಕುಮಾರಕನನ್ನೇ ವರಿಸಿದಳು ಎಂತಲೂ ನಾನಾ ಪ್ರಕಾರವಾಗಿ ನುಡಿಯುತ್ತಾ ತಮ್ಮ ತಮ್ಮ ಮನೆಗಳಿಗೆ ಹೋದರು, ಆ ಬಳಿಕ ಭೀಮಾರ್ಜುನರು ಕೃಷ್ಣಾಜಿನೋತ್ತರೀಯ ಗಳೊಡನೆ ಬ್ರಾಹ್ಮಣಶ್ರೇಷ್ಟರು ತಮ್ಮನ್ನು ಸುತ್ತಿ ಕೊಂಡು ಬರಲು ಜನಸಮೂಹದ ಮಧ್ಯದಿಂದ ಹೊರಟು ಗಾಯವಡೆದ ಶರೀರವುಳ್ಳವರಾಗಿ ಆ ದ್ರುಪದರಾಜನ ಮಗ ಳನ್ನು ಕರೆದು ಕೊಂಡು ಕುಂಬಾರನ ಮನೆಗೆ ಬರುತ್ತಿದ್ದರು, ಅಲ್ಲಿ ಕುಂತೀದೇವಿಯು ಭಿಕ್ಷಾ ಸಮಯಕ್ಕೆ ತನ್ನ ಮಕ್ಕಳು ಬಾರದೆ ಇರುವುದರಿಂದ ಮನಸ್ಸಿನಲ್ಲಿ ವೈರಾನುಬಂ ಧದಿಂದ ಕೂಡಿರುವ ಧೃತರಾಷ್ಟ್ರನ ಮಕ್ಕಳಿಂದ ಪ್ರೇರಿತರಾದ ಮಾಯಾಬಲಸಮೇತ ರಾದ ರಾಕ್ಷಸರ ದೆಸೆಯಿಂದ ನನ್ನ ಮಕ್ಕಳು ಯಾವ ವಿಪತ್ತನ್ನು ಹೊಂದಿದರೋ ?
ಪುಟ:ಕಥಾಸಂಗ್ರಹ ಸಂಪುಟ ೧.djvu/೧೯೦
ಗೋಚರ