ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೧೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೩ನೆಯ ಭಾಗ 179 ಎಂದು ಪುತ್ರವಾತ್ಸಲ್ಯದಿಂದ ಚಿಂತಿಸಿರುವ ಸಮಯದಲ್ಲಿ ಮೂರನೆಯ ಜಾವದಲ್ಲಿ ಮೇಘಮಂಡಲದಿಂದ ಸುತ್ತಲ್ಪಟ್ಟ ಸೂರ್ಯನೋಪಾದಿಯಲ್ಲಿ ಬ್ರಾಹ್ಮಣರಿಂದ ಬಳಸ ಲ್ಪಟ್ಟ ಅರ್ಜುನನು ಭೀಮನೊಡನೆ ಕೂಡಿ ಭಾರ್ಗವನೆಂಬ ಕುಂಬಾರನ ಮನೆಗೆ ಬಂದು -ನಮ್ಮ ಸಾಮರ್ಥ್ಯದಿಂದ ಇದೊಂದು ಭಿಕ್ಷವನ್ನು ತಂದೆವು ಎಂದು ತಿಳಿಸಲು ಆ ಕುಂತಿಯು ದೌಪದೀ ಸಹಿತರಾದ ಆ ಕುಮಾರಕರನ್ನು ನೋಡುವುದಕ್ಕಿಂತ ಮುಂಚೆ --ಎಲೆ, ಮಕ್ಕಳಿರಾ ! ಅದನ್ನು ನೀವೆಲ್ಲರೂ ಅನುಭವಿಸಿರೆಂದು ಪ್ರಮಾದವಶದಿಂದ ನುಡಿದು ಆ ಬಳಿಕ ಕನ್ಯಾರತ್ನವನ್ನೂ ಕುಮಾರಕರನ್ನೂ ನೋಡಿ--ಅಕಟಕಟಾ ? ಅನುಚಿತವಾಗಿ ನುಡಿದೆನು ! ಎಂದು ಧರ್ಮ ಭಂಗಕ್ಕೆ ಭಯ ಪಡುತ್ತಾ ನಾಚಿಕೆಯಿಂದ ತಲೆಯನ್ನು ಬಗ್ಗಿಸಿಕೊಂಡಿರುವ ದೌಪದಿಯ ಹಸ್ತವನ್ನು ಹಿಡಿದು ಯುಧಿಷ್ಠಿರನ ಸವಿಾಪಕ್ಕೆ ಕರಕೊಂಡು ಹೋಗಿ ಈ ದ್ರುಪದರಾಜನ ಮಗಳನ್ನು ಕರೆತಂದು ನಿನ್ನ ಒಡಹುಟ್ಟಿದ ಭೀಮಾರ್ಜುನರು-ಭಕ್ಷೆ ಯನ್ನು ತಂದೆವು ಎಂದು ನನ್ನೊಡನೆ ಹೇಳಿದರು. ನಾನು ನೀವೆಲ್ಲರೂ ಅನುಭವಿಸಿರಿ ಎಂದು ಅವಿಚಾರವಶದಿಂದ ನುಡಿದೆನು, ಈ ರಾಯನ ಮಗಳಿಗೆ ಅಧರ್ಮ ಬಾರದೆ ಇರುವ ಹಾಗೂ ನನ್ನ ವಾಕ್ಯವು ಸಟೆಯಾಗದೆ ಇರುವ ಹಾಗೂ ಉಪಾಯವನ್ನು ತಿಳಿಸೆನಲು ಆಗ ಧರ್ಮರಾಜನು ಮುಹೂರ್ತ ಮಾತ್ರ ಯೋಚಿಸಿ ಕುಂತೀದೇವಿಗೆ ಸಮಾಧಾನವನ್ನು ಮಾಡಿ ಅರ್ಜುನನನ್ನು ನೋಡಿ--ನೀನು ಭುಜಬಲದಿಂದ ಈ ರಾಜಕನ್ಯಕೆಯನ್ನು ಗೆದ್ದು ತಂದೆ. ಆದುದರಿಂದ ಯಜೇಶ್ವರನ ಸವಿಾಪದಲ್ಲಿ ಶಾಸ್ಕೂಕ್ತ ಪ್ರಕಾರವಾಗಿ ಇವಳನ್ನು ಮದುವೆ ಮಾಡಿಕೋ ಎನಲು ಅರ್ಜುನನು ಎಲೈ, ಮಹಾನುಭಾವನೇ ! ನನ್ನನ್ನು ಅಪ್ರಯೋಜಕನನ್ನು ಮಾಡಬೇಡ. ಈ ಕಾರ್ಯವು ಯಾರಿಗೂ ಸಮ್ಮತವಾಗಲಾರದು. ಮೊದಲು ನೀನು ಆ ಬಳಿಕ ಭೀಮನ ಆ ಮೇಲೆ ನಾನೂ ಆನಂತರದಲ್ಲಿ ನಕುಲಸಹದೇವರೂ ಮದುವೆಯಾಗುವುದು ಯುಕ್ತವು, ಭೀಮನೂ ನಾನೂ ನಕುಲಸಹದೇವರೂ ಪಾಂಚಾಲ ರಾಜನ ಮಗಳೂ ಈ ನಾವೆಲ್ಲರೂ ನಿನ್ನ ಅಧೀನರಾದುದರಿಂದ ಧರ್ಮಯುಕ್ತವಾಗಿಯ ಕೀರ್ತಿಕರವಾ ಗಿಯೂ ದ್ರುಪದರಾಜನಿಗೆ ಸಮ್ಮತವಾದ ಕಾರ್ಯವನ್ನು ಕಟ್ಟು ಮಾಡಬೇಕು ಎಂದು ನುಡಿಯಲು ಯುಧಿಷ್ಠಿರನು ತನ್ನ ಮನಸ್ಸಿನಲ್ಲಿ--ನಾನು ಮೊದಲಾದ ಪಂಚಪಾಂಡ ವರಲ್ಲಿಯ ಪಾಂಚಾಲರಾಜನಿಗೆ ಅನುರಾಗವು ಹುಟ್ಟಿರುವುದರಿಂದಲೂ ಸಕಲ ಲೋಕಾಶ್ಚರ್ಯಕರವಾಗಿ ಬ್ರಹ್ಮದೇವನಿಂದ ನಿರ್ಮಿತವಾಗಿರುವ ಈ ಪಾಂಚಾಲ ರಾಜನಮಗಳ ರೂಪಾತಿಶಯಕ್ಕೆ ನಮ್ಮೆಲ್ಲರ ಮನಸ್ಸುಗಳು ಕರಗಿರುವುದರಿಂದಲೂ ವ್ಯಾಸನವಚನವನ್ನೂ ಸ್ಮರಿಸಿ ತಮ್ಮಂದಿರಿಗೆ ಪರಸ್ಪರ ದ್ವೇಷಗಳು ಹುಟ್ಟಬಾರದೆಂದು ಎಣಿಸಿ ಭೀಮಸೇನಾದಿಗಳನ್ನು ನೋಡಿ--ನಮ್ಮ ಐದು ಮಂದಿಗೂ ಈ ದೌಪದಿಯು ಪತ್ನಿ ಯಾಗತಕ್ಕವಳು ಅಂದನು. ಆ ವಾಕ್ಯವನ್ನು ಕೇಳಿ ತಮ್ಮಂದಿರೆಲ್ಲರೂ ಆ ಅರ್ಥವನ್ನು ಕುರಿತು ತಮ್ಮ ಮನ ಸ್ಸಿನಲ್ಲಿ ಆಲೋಚಿಸುತ್ತಿರುವಾಗ ಯದುಶ್ರೇಷ್ಠನಾದ ವಾಸುದೇವನು ಬಲರಾಮಸಹಿತ ನಾಗಿ ಆ ಕುಂಬಾರನ ಮನೆಗೆ ಬಂದು ಆಜಾನುಬಾಹುವಾಗಿ ತಮ್ಮಂದಿರೊಡನೆ ಕೂಡಿ