ಪುಟ:ಕಥಾಸಂಗ್ರಹ ಸಂಪುಟ ೧.djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

180 KANARESE SELECTIONS-PART III ರುವ ಧರ್ಮರಾಜನ ಸವಿಾಪಕ್ಕೆ ಹೋಗಿ--ನಾನು ವಾಸುದೇವನು ಎಂದು ಹೇಳಿ ಆತನ ಪಾದಗಳಿಗೆ ನಮಸ್ಕಾರವನ್ನು ಮಾಡಿದನು, ಆ ಬಳಿಕ ಒಲರಾಮನೂ ಹಾಗೆಯೇ ನಮಸ್ಕರಿಸಿದನು. ತರುವಾಯ ತನ್ನ ಸೋದರತ್ತೆಯಾದ ಕುಂತೀದೇವಿಯ ಪಾದಗಳಿಗೆ ರಾಮಕೃಷ್ಣರಿಬ್ಬರೂ ನಮಸ್ಕರಿಸಿದರು. ಧರ್ಮರಾಜನು ಕೃಷ್ಣಸ್ವಾಮಿಯನ್ನು ನೋಡಿ ಕುಶಲ ಪ್ರಶ್ನೆ ಯನ್ನು ಮಾಡಿ-- ಎಲ್ಯ, ಕೃಷ್ಣಸ್ವಾಮಿಯೇ ! ನಾವು ಹೀಗೆ ಗೋಪ್ಯ ವಾಗಿರುವುದು ನಿನಗೆ ಹೇಗೆ ತಿಳಿಯಿತು ? ಎನಲು ಕೃಷ್ಣಸ್ವಾಮಿಯು ನಸುನಗುತ್ತಾ -ಯಜೇಶ್ವರನು ಎಷ್ಟು ಮರೆಯಾಗಿದ್ದರೂ ತೇಜೋವಿಶೇಷದಿಂದ ಹೇಗೆ ತಾನೇ ಕಾಣಲ್ಪಡದೆ ಹೋಗುವನು ? ಆ ಲಕ್ಷ್ಯವನ್ನು ಭೇದಿಸುವುದಕ್ಕೆ ನಿಮಗೆ ಹೊರತಾಗಿ ಮಿಕ್ಕಾದ ಜನರಿಗೆ ಶಕ್ಯವೇ ? ದೈವವಶದಿಂದ ಶತ್ರುಸಂಹಾರಕರಾದ ನೀವು ಅರಗಿನ ಮನೆಯ ದಹನದ ದೆಸೆಯಿಂದ ತಪ್ಪಿಸಿಕೊಂಡು ಬಂದಿರಿ, ಪುತಾಮಾತ್ಯ ಸಹಿತನಾಗಿ ಧೃತರಾಷ್ಟ್ರನು ತನ್ನ ಮನೋರಥವನ್ನು ಪಡೆಯಲಾರದೆ ಹೋದನು, ನಮ್ಮ ಮನಸ್ಸಿ ನಲ್ಲಿ ಎಣಿಸಿದ ಪ್ರಕಾರ ನಿಮಗೆ ಶುಭಗಳು ಆಗುತ್ತಿವೆ ಇಲ್ಲಿಂದ ಮುಂದೆ ಪ್ರವೃದ್ದ ನಾದ ಯಜೇಶ್ವರನೋಪಾದಿಯಲ್ಲಿ ವೃದ್ಧಿಯನ್ನು ಹೊಂದುತ್ತೀರಿ, ಇಲ್ಲಿ ಕೂಡಿರುವೆ ಅರಸುಗಳು ನಿಮ್ಮನ್ನು ಅರಿಯದ ರೀತಿಗೆ ನಮ್ಮ ಪಾಳಯಕ್ಕೆ ಹೋಗಿ ಬರುತ್ತೇವೆ ಎಂದು ಅವರ ಅಪ್ಪಣೆಯನ್ನು ತೆಗೆದು ಕೊಂಡು ತಮ್ಮ ಪಾಳಯಕ್ಕೆ ಹೊರಟುಹೋದರು. ಅನಂತರದಲ್ಲಿ ಪಾಂಚಾಲರಾಜನ ಮಗನಾದ ಧೃಷ್ಟದ್ಯುಮ್ನ ನು ಇವರ ನಿಶ್ನ ಯವನ್ನು ತಿಳಿಯಬೇಕೆಂದು ಇವರಿಳಿದಿರುವ ಕುಂಬಾರನ ಮನೆಯ ಸುತ್ತಲೂ ಪಾಂಡ ವರಿಗೆ ತಿಳಿಯದೆ ಇರುವ ಹಾಗೆ ಬೇಹಿನವರನ್ನು ಇಟ್ಟು ತಾನೂ ಸಮೀಪದಲ್ಲಿ ಇದ್ದನು. ಆ ವೇಳೆಯಲ್ಲಿ ಭೀಮಸೇನ ಮೊದಲಾದ ನಾಲ್ಕರೂ ಭಿಕ್ಷಾನ್ನವನ್ನು ಬೇಡಿ ತಂದು ಯುಧಿಷ್ಠಿರನ ಮುಂದೆ ಇರಿಸಿದರು. ಆಗ ಕುಂತೀದೇವಿಯು ಬ್ರೌಪದಿಯನ್ನು ನೋಡಿ ಅದರಲ್ಲಿ ಮೊದಲು ಭಾಗವನ್ನು ವೈಶ್ವದೇವ ಬಲಿಹರಣಕ್ಕೆ ಕೊಡು, ಆ ಮೇಲೆ ಒಂದು ಭಾಗವನ್ನು ಬ್ರಾಹ್ಮಣರಿಗೆ ಕೊಡು, ಮತ್ತೊಂದು ಭಾಗವನ್ನು ಭಿಕ್ಷಾರ್ಧವಾಗಿ ಬಂದವರಿಗೆ ಕೊಡು ಮಿಕ್ಕ ಅನ್ನವನ್ನು ಎರಡು ಭಾಗವಂ ಮಾಡಿ ಅದರಲ್ಲಿ ಒಂದು ಭಾಗವನ್ನು ಆರು ಭಾಗಗಳಾಗಿ ಮಾಡಿ ನಮಗಿಬ್ಬರಿಗೂ ಎರಡು ಭಾಗಗಳನ್ನೂ ಇರಿಸು. ಉಳಿದ ನಾಲ್ಕು ಭಾಗಗಳನ್ನು ನಾಲ್ಕು ಮಂದಿಗೂ ಕೊಡು. ಮಿಕ್ಕೆ ಅರ್ಧ ಭಾಗವನ್ನು ಭೀಮನಿಗೆ ಕೊಡು ಯಾಕಂದರೆ ಈತನು ವೃಷಭ ಸಿಂಹ ಗಂಭೀರ ಗಮ ನನೂ ನವಯವನ ವಿಜೃಂಭಿತನೂ ಮಹಾ ವೀರನೂ ಸೂಅಶರೀರನೂ ಅಧಿಕಭೋಜನ ಪ್ರಿಯನೂ ಆಗಿದ್ದಾನೆ ಎಂದು ತಿಳಿಸಲು ಆ ರಾಜಪುತ್ರಿಯು ಸ್ವಲ್ಪವಾದರೂ ತನ್ನ ಮನಸ್ಸಿನಲ್ಲಿ ಭಯಪಡದೆ ತನ್ನ ಅತ್ತೆ ಹೇಳಿದ ಪ್ರಕಾರ ಅನ್ನ ವನ್ನು ಪಾಲು ಮಾಡಿ ಕೊಡಲು ಅವರೆಲ್ಲರೂ ಸಮುಚಿತ ಪ್ರಕಾರದಿಂದ ಭೋಜನವನ್ನು ಮಾಡಿದರು. ಆ ಬಳಿಕ ಸಹದೇವನು ಅವರಿಗೆ ಹುಲ್ಲಿನಿಂದ ಹಾಸಿಕೆಯನ್ನು ಮಾಡಿ ಹಾಸಲು ಅವರು ಅದರ ಮೇಲೆ ಕೃಷ್ಣಾಜಿನಗಳನ್ನು ಹಾಸಿಕೊಂಡು ದಕ್ಷಿಣಶಿರಸಾಗಿ ಮಲಗಿದರು. ಕುಂತೀದೇವಿಯು ಅವರಿಗೆ ಮೂಡಣ ಭಾಗದಲ್ಲಿ ಮಲಗಿಕೊಂಡಳು. ಬ್ರೌಪದಿಯು