ಪುಟ:ಕಥಾಸಂಗ್ರಹ ಸಂಪುಟ ೧.djvu/೧೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೩ನೆಯ ಭಾಗ 181 ಅವರ ಕಾಲ ದೆಸೆಯಲ್ಲಿ ದರ್ಭೆಯನ್ನು ಹಾಕಿಕೊಂಡು-ಇವರು ಭಿಕ್ಷವನ್ನು ಬೇಡು ವಂಥಾ ಬ್ರಾಹ್ಮಣರು ಎಂದು ಸ್ವಲ್ಪವಾದರೂ ತನ್ನ ಮನಸ್ಸಿನಲ್ಲಿ ವಿಕಲ್ಪವಿಲ್ಲದೆ ಮಲಗಿದಳು. ಮಹಾ ಶೂರರಾದ ಇವರು ದಿವ್ಯಾಸ್ತಗಳ ತೆರವನ್ನೂ ಆನೆಗಳ ಪ್ರಕಾರ ವನ್ನೂ ರಥಗಳ ಚ೦ದವನ್ನೂ ಖಡ್ಗಗಳ ಸೊಬಗನ್ನೂ ಗದಾ ವಿಶೇಷಗಳ ಸೊಗಸನ್ನೂ ಕೊಡಲಿಗಳ ಸ್ಥಿತಿಯನ್ನೂ ನಾನಾ ಪ್ರಕಾರವಾಗಿ ಒಬ್ಬರಿಗೊಬ್ಬರು ಹೇಳಿಕೊಳ್ಳುತ್ತಾ ಹೊತ್ತು ಕಳೆಯುತ್ತಿರುವ ಸಮಯದಲ್ಲಿ ಹೊಂಚಿ ಕೇಳುತ್ತಿದ್ದ ದೃಷ್ಟದ್ಯುಮ್ನನು ಬೇಹಿನವರೊಡನೆ ನೋಡಿ ಕೇಳಿ ಅದನ್ನೆಲ್ಲಾ ತಿಳಿಸುವುದಕ್ಕೆ ತಂದೆಯ ಸವಿಾಪಕ್ಕೆ ಬಂದು ಸೇರಿದನು. ಪಾಂಚಾಲರಾಜನು ಮುಖದಲ್ಲಿ ದೈನ್ಯವನ್ನು ತೋರಿಸುತ್ತಾ ಪಾಂಡವರು ಎಂದು ತಿಳಿಯದೆ ಇರುವುದರಿಂದ ತನ್ನ ಮಗನನ್ನು ನೋಡಿ--- ಏನೈಯ್ಯಾ, ಮಗನೇ ! ನಮ್ಮ ಬ್ರೌಪದೀದೇವಿಯು ಸ್ಮಶಾನದಲ್ಲಿ ಪುಷ್ಪಮಾಲಿಕೆ ಬಿದ್ದ ಹಾಗೆ ಹೀನಜಾತಿಯಲ್ಲಿ ಒಬ್ಬರನ್ನಾದರೂ ವರಿಸದೆ ಇರುವಂಥಾವಳು ಈಗ ಎಲ್ಲಿ ಇದ್ದಾಳೆ ? ಆ ಕನ್ಯಾರತ್ನ ವನ್ನು ಅರ್ಜುನನ ವಶಕ್ಕೆ ಒಪ್ಪಿಸಿ ನಾನು ಸುಖವಾಗಿ ನಿದ್ದೆಗೈದೇನೇ ? ನಾನು ಮಾಡಿದ ಯಂತ್ರ ಲಕ್ಷವನ್ನು ಭೇದಿಸಿ ಆ ಬ್ರೌಪದಿಯನ್ನು ಕರೆದು ಕೊಂಡು ಹೋದಂಥಾವನನ್ನು ಯಾರೆಂದು ತಿಳಿದೆ ? ವಿಚಿತ್ರವೀರ್ಯನ ಮೊಮ್ಮಕ್ಕಳಾದ ಪಾಂಡವರು ದೈವಸಂಕಲ್ಪ ದಿಂದ ಬದುಕಿ ಇದ್ದಾರೆಯೇ ? ನಾನು ಮಾಡಿದ ಯಜ್ಞದ ಮಹಿಮೆಯಿಂದಲೂ ಬ್ರೌಪದಿಯ ಭಾಗ್ಯ ವಿಶೇಷದಿಂದಲೂ ಈ ಲಕ್ಷವನ್ನು ಭೇದಿಸಿದಂಧಾವನು ಅರ್ಜು ನನು ಎಂದು ತಿಳಿಯಬಹುದೇ ? ಎಂದು ಕೇಳಿದಂಥಾ ದ್ರುಪದರಾಜನನ್ನು ನೋಡಿ ಧೃಷ್ಟದ್ಯುಮ್ನನು ಸಂತೋಷಪಟ್ಟು ತಾನು ಕಂಡು ಕೇಳಿದುದನ್ನೆಲ್ಲಾ ತಂದೆಗೆ ತಿಳಿಸಿ ಅವರು ಪಾಂಡವರೇ ಸರಿ ಎಂದು ನಿಶ್ಚಯಿಸಿದ್ದೇನೆ ಅಂದನು. - ದ್ರುಪರಾಜನು ಈ ಮಾತನ್ನು ಕೇಳಿ ಸಂತೋಷಪಟ್ಟು ತನ್ನ ಪುರೋಹಿತನನ್ನು ಕರೆದು--ನೀನು ಅವರ ಸಮೀಪಕ್ಕೆ ಹೋಗಿ--ನೀವು ಯಾರು ? ಪಾಂಡುಕುಮಾ ರರೇ ? ಎಂದು ಕೇಳಿ ಬಾ ಎನಲು ಆತನು ಅವರ ಬಳಿಗೆ ಹೋಗಿ ಅವರನ್ನು ನೋಡಿ ಪಾಂಚಾಲರಾಜನಾದ ದ್ರುಪದನು ನಿಮ್ಮ ಸ್ವರೂಪವನ್ನು ತಿಳಿಯಬೇಕೆಂದು ಇದ್ದಾನೆ. ಈ ಲಕ್ಷವನ್ನು ಕೆಡಹಿದಂಥಾವನನ್ನು ನೋಡಿ ಆತನ ಸಂತೋಷವು ಅಭಿವೃದ್ದಿ ಯಾ ಗುತ್ತಿದೆ ? ನೀವು ಯಾವ ಕಾರ್ಯಕ್ಕೂ ಭಯ ಪಡಬೇಡಿರಿ, ನಿಮ್ಮ ಜಾತಿಕುಲಾಚಾರ ಗಳನ್ನು ವಿಶದವಾಗಿ ಹೇಳಬೇಕು, ನಿಮಗೆ ವಿರೋಧಿಗಳಾದವರ ಶಿರಸ್ಸಿನಲ್ಲಿ ಪಾದ ವನ್ನು ಇರಿಸಿ ಪುತ್ರಸಹಿತನಾದ ನಮ್ಮರಸಿಗೆ ಸಂತೋಷವನ್ನು ಕಲ್ಪಿಸಿದಿರಿ, ಪಾಂಡು ರಾಜನು ಪರಮಮಿತ್ರನಾದುದರಿಂದ ತನ್ನ ಮಗಳಾದ ಬ್ರೌಪದಿಯು ಆತನಿಗೆ ಸೊಸೆ ಯಾಗಬೇಕು. ಆಜಾನುಬಾಹುವಾದ ಅರ್ಜುನನು ತನಗೆ ಅಳಿಯನಾಗಬೇಕು ಎಂದು ಅಭಿಲಾಷೆಯು ನಮ್ಮ ರಾಜನಿಗೆ ಬಹಳವಾಗಿ ಇದೆ ಎನಲು ಯುಧಿಷ್ಠಿರನು ಆ ವಾಕ್ಯವನ್ನು ಕೇಳಿ ಸವಿಾಪದಲ್ಲಿ ರುವ ಭೀಮನನ್ನು ನೋಡಿ ಈ ದ್ರುಪದರಾಜಪರೋ ಹಿತನನ್ನು ಉಚಿತಪ್ರಕಾರವಾಗಿ ಅರ್ತ್ಯಪಾದ್ಯಾದಿಗಳಿಂದ ಪೂಜಿಸು ಎನಲು ಆತನು