ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

182 KANARESE SELECTIONS-PART III ಹಾಗೆ ಮಾಡಿದನು. ಸುಖಾಸನದಲ್ಲಿ ಕುಳಿತಿರುವ ಆ ಬ್ರಾಹ್ಮಣನನ್ನು ನೋಡಿ ಯುಧಿ ಸ್ಥಿರನುಪಾಂಚಾಲರಾಜನು ತನ್ನ ಮಗಳಾದ ಬ್ರೌಪದಿಗೆ ಸ್ವಧರ್ಮೋಚಿತವಾದ ಮಾರ್ಗದಿಂದ ಪರಾಕ್ರಮವೇ ಶುಲ್ಕ ವಾಗುವ ಹಾಗೆ ಕಲ್ಪಿಸಲು ಆತನು ಮಾಡಿದ ಪ್ರತಿಜ್ಞೆಯನ್ನು ನೆರವೇರಿಸಿ ಈ ಕುಮಾರಕನು ಕನ್ಯಾರತ್ನ ವನ್ನು ಕೈಕೊಂಡನು, ನೀವು ಸಂಕೇತವನ್ನು ಮಾಡುವಾಗ ವರ್ಣವೂ ಜೀವನೋಪಾಯವೂ ವಿದ್ಯಾ ವಿಶೇಷವೂ ಕುಲವೂ ಗೋತ್ರವೂ ಇಂಥಾದುದಾಗಿರಬೇಕೆಂದು ನಿಶ್ಚಯಿಸಿರಲಿಲ್ಲವಲ್ಲ ! ಈ ಧನು ಸ್ಸಿನಲ್ಲಿ ಹೆದೆಯನ್ನು ಏರಿಸಿ ಲಕ್ಷ್ಯವನ್ನು ಕೆಡಹಿದಂಥಾವನೇ ಈ ಕನ್ಯಕೆಗೆ ವರನಾಗತ ಕವನು ಎಂದು ಮೊದಲೇ ಹೇಳಿದವರಾದುದರಿಂದ ಈತನು ಹಾಗೆ ಮಾಡಿ ರಾಜಪುತ್ರಿ ಯನ್ನು ಕೈಕೊಂಡನು. ಇನ್ನು ಆದ ಕಾರ್ಯಕ್ಕೆ ನಿಮ್ಮ ರಾಜನು ಪಶ್ಚಾತ್ತಾಪ ಪಟ್ಟು ಪ್ರಯೋಜನವೇನು ? ಆದರೂ ಆತನ ಮನೋರಥವು ಸಫಲವಾದೀತು.* ಈ ರಾಜವೆ ತ್ರಿಯು ಉಚಿತವಾದ ವರನನ್ನು ಹೊಂದಿದ್ದಾಳೆ ಈ ಧನುಸ್ಸಿನಲ್ಲಿ ಹೆದೆಯನ್ನು ಏರಿಸಿ ಲಕ್ಷವನ್ನು ಭೇದಿಸುವುದಕ್ಕೆ ಸಾಧಾರಣ ಮನುಷ್ಯರಿಗೆ ಶಕ್ಯವಲ್ಲದೆ ಇದ್ದುದ ರಿಂದ ನಿಮ್ಮ ರಾಜನು ಈ ಕನ್ಯಾ ವಿಷಯವಾಗಿ ಚಿಂತಿಸುವುದಕ್ಕೆ ಕಾರಣವಿಲ್ಲವೆಂದು ಹೇಳಿ ಕಳುಹಿಸಲು ಪುರೋಹಿತನು ದ್ರುಪದರಾಜನ ಬಳಿಗೆ ಬಂದು ಧರ್ಮರಾಜನು ಹೇಳಿದ ಮಾತನ್ನು ಹೇಳಲಾಗಿ, ಆ ಮಾತಿನ ಭಾವದಿಂದ-ಇವರು ಪಾಂಡವರೇ ಸರಿ ಎಂದು ನಿಶ್ಚಯಿಸಿಕೊಂಡು ಆನಂತರದಲ್ಲಿ ಇವರನ್ನು ಪ್ರಸ್ತದ ಭೋಜನಕ್ಕೆ ಕರಿಸಿ ಭೋಜ ನಾದಿಗಳಿಂದ ಸತ್ಕರಿಸಿ ವಿವಾಹಮಂಟಪವನ್ನು ಮಾಡಿಸಿ ಧರ್ಮರಾಜನನ್ನು ನೋಡಿ ಈ ಹೊತ್ತು ಶುಭದಿವಸವಾದುದರಿಂದ ಮಹಾನುಭಾವನಾದ ಧನಂಜಯನು ಈ ಕನ್ಯಕೆಯ ಪಾಣಿಗ್ರಹಣವನ್ನು ಮಾಡುವುದಕ್ಕೆ ಅಪ್ಪಣೆ ಮಾಡೆನಲು ಧರ್ಮರಾ ಜನು ನಮ್ಮ ತಾಯಿಯ ಅಪ್ಪಣೆಯ ಪ್ರಕಾರ ಈ ಕನ್ಯಾರತ್ನ ವನ್ನು ನಾವು ಐದು ಜನವೂ ಅಗ್ನಿ ಸಾಕ್ಷಿ ಕವಾಗಿ ಪರಿಗ್ರಹಿಸಬೇಕು ಅಂದನು. ಆಗ ದ್ರುಪದರಾಜನು-ಒಬ್ಬ ಕನ್ಯಕೆಯನ್ನು ಐದು ಜನವೂ ಮದುವೆಯಾ ಗುವುದು ಹೇಗೆ ? ಎಂದು ಯೋಚಿಸುತ್ತಿರುವಲ್ಲಿ ವ್ಯಾಸಮುನೀಶ್ವರನು ದ್ರುಪದರಾಜ ನಲ್ಲಿಗೆ ಬಂದು ಆತನಿಂದ ಪೂಜಿತನಾಗಿ ಅವನನ್ನು ಕುರಿತು-ಎಲೈ, ಅರಸೆ ! ನಿನ್ನ ಮನಸಿನಲಿ ರುವ ಸಂಶಯವನ್ನು ಬಿಡು ! ಪೂರ್ವದಲ್ಲಿ ಗೌತಮವಂಶದಲ್ಲಿ ಹುಟಿದ ಜಟಿಲನೆಂಬ ಮಹಾತ್ಮನ ಮಗಳು ತಪೋಧನರಾಗಿ ಆತ್ಮತತ್ವಜ್ಞರಾದ ಏಳು ಮಂದಿ ಮುನಿಕುಮಾರಕರನ್ನು ವರಿಸಿದಳು. ಅದಲ್ಲದೆ ಪ್ರಚೇತಸರೆಂಬ ಹನ್ನೆರಡು ಮಂದಿ ಅಣ್ಣ ತಮ್ಮಂದಿರು ಒಬ್ಬ ಕನ್ಯಕೆಯನ್ನು ವರಿಸಿದರು, ಮತ್ತು ಇವಳ ತಾಯಿಯಾದ ನಿನ್ನ ಪಟ್ಟ ಮಹಿಷಿಯು ತನ್ನ ಮಗಳಿಗೆ ಐದು ಮಂದಿ ಗಂಡಂದಿರಾಗಬೇಕೆಂದು ಪೂರ್ವಜನ್ಮದಲ್ಲಿ ಬಯಸಿದ ಪ್ರಕಾರ ಯಾಜೋಪಯಾಜರೆಂಬವರು ಅದೇ ರೀತಿಯಲ್ಲಿ ಅನುಗ್ರಹಿಸಿರುವ ಕಾರಣ ಈ ಐದು ಮಂದಿಯ ಈಕೆಗೆ ಗಂಡಂದಿರಾಗುವುದು ಧರ್ಮವು ಎಂದು ನೀಲಾಯನಿಯ ಕಥೆಯನ್ನು ಹೇಳಲು ದ್ರುಪದರಾಜನು ಕೃಷ್ಣ ದೈಪಾಯನನನ್ನು ನೋಡಿ ನಿಮ್ಮ ಮಾತುಗಳನ್ನು ಕೇಳಿದ ಬಳಿಕ ನನ್ನ ಮನಸ್ಸಿನಲ್ಲಿ