ಕಥಾಸಂಗ್ರಹ-೩ ನೆಯ ಭಾಗ 183 ರುವ ಸಂಶಯಗಳೆಲ್ಲವೂ ಹೋದುವು. ದೈವಸಂಕಲ್ಪವನ್ನು ತಪ್ಪಿಸುವುದಕ್ಕೆ ಯಾರಿಂ ದಲೂ ಶಕ್ಯವಲ್ಲ. ಈ ಅರ್ಧಕ್ಕೆ ಸಮ್ಮತಿಸಿದೆನು ಅಂದನು. ಆ ಬಳಿಕ ವ್ಯಾಸನು ಯುಧಿಷ್ಠಿರನನ್ನು ನೋಡಿ ಚಂದ್ರನು ರೋಹಿಣೀ ಸಹಿತ ನಾಗಿ ಇರುವುದರಿಂದ ಈ ಶುಭದಿವಸದಲ್ಲಿ ವಿಹಿತ ಪ್ರಕಾರದಿಂದ ನೀವು ಐದು ಮಂ ದಿಯ ಕ್ರಮವಾಗಿ ಪಾಣಿಗ್ರಹಣವನ್ನು ಮಾಡಿರಿ ಎಂದು ಕಟ್ಟು ಮಾಡಿದನು ಆ ಒಳಿಕ ಯಜ್ಞಸೇನನ ಮಗನಾದ ದೃಷ್ಟದ್ಯುಮ್ನ ನೊಡನೆ ಕೂಡಿ ಮದುವೆಗೆ ತಕ್ಕ ಸಾಧನಗಳನ್ನು ಜೊತೆಗೊಳಿಸಿ ದೌಪದೀದೇವಿಗೆ ಮಂಗಳಮಜ ನಾನಂತರದಲ್ಲಿ ಬಹು ವಿಧರನ್ನಾಭರಣಗಳಿಂದ ಅಲಂಕಾರ ಮಾಡಿಸಿದನು, ಆತನ ನೆಂಟರಿಷ್ಟ ರೂ ಮಿತ್ರಾ ಮಾತ್ಯರುಗಳೂ ಆ ಪಟ್ಟಣದಲ್ಲಿರುವ ಪ್ರಜೆಗಳೂ ವೇದವೇದಾಂಗಪಾರಂಗತರಾದ ಬ್ರಾಹ್ಮಣರು ಗಳೂ ನಾನಾದೇಶಗಳಿಂದ ಒಂದ ಯಾಚಕರುಗಳೂ ಆ ವಿವಾಹಮಂಟಪ ದಲ್ಲಿ ನೆರೆದು ಕುಳಿತಿದ್ದರು. ಆ ಬಳಿಕ ಕುಂತೀದೇವಿಯ ಮಕ್ಕಳು ಮಂಗಳಸ್ನಾನ ವನ್ನು ಮಾಡಿ ಕಂಕಣಗಳನ್ನು ಕಟ್ಟಿ ಕೊಂಡು ದಿವ್ಯಚಂದನಗಳನ್ನೂ ದಿವ್ಯಮಾಲ್ಯ ಗಳನ್ನೂ ದಿವ್ಯಾಂಬರಗಳನ್ನೂ ನವರತ್ನ ಖಚಿತಗಳಾದ ಕುಂಡಲಗಳನ್ನೂ ಧರಿಸಿ ಯಜ್ಞೆ ಶ್ವರನಿಗೆ ಸಮಾನವಾದ ತೇಜಸ್ಸುಳ್ಳ ತಮ್ಮ ಪುರೋಹಿತನಾದ ಭೌಮ್ಯ ನನ್ನು ಮುಂದಿಟ್ಟು ಕೊಂಡು ಜೈಪ್ಪಾ ನುಕ್ರಮವಾಗಿ ಸರ್ವಾಲಂಕಾರಶೋಭಿತವಾದ ವಿವಾಹಮಂಟಪ ವನ್ನು ಹೊಕ್ಕರು. ಆಗ ಪುರೋಹಿತನು ಯಕ್ಷೇಶ್ವರನಲ್ಲಿ ಹೋಮವನ್ನು ಮಾಡಿ ಮೊದಲು ಧರ್ಮರಾಜನನ್ನು ಬ್ರೌಪದೀಸಮೇತನಾಗಿ ಹಸೆಯ ಮಣೆಯಲ್ಲಿ ಕುಳ್ಳಿರಿಸಿ ಯಥಾಶಾಸ್ತ್ರವಾಗಿ ಹೋಮ ಕ್ರಿಯೆಗಳನ್ನು ಮಾಡಿಸಿ ಅಗ್ನಿ ಪ್ರದಕ್ಷಿಣವನ್ನು ಮಾಡಿ ಸಿದನು, ಆಗ ಧರ್ಮರಾಜನು ಅನೇಕ ಧನಕನಕಗೋವಸ್ತ್ರ ವಾಹನಾದಿಗಳಿಂದ ಜನ ರನ್ನು ತಣಿಸಿ ದ್ರುಪದರಾಜನ ಅಪ್ಪಣೆಯಿಂದ ರೌಮ್ಯ ಸಹಿತನಾಗಿ ಅವನ ಮನೆಯಿಂದ ಹೊರಟು ಹೋದನು, ಆ ಬಳಿಕ ಭೀಮಾರ್ಜುನ ನಕುಲಸಹದೇವರುಗಳೂ ಕ್ರಮವಾಗಿ ಒಂದೊಂದು ದಿವಸದಲ್ಲಿ ಒಬ್ಬೊಬ್ಬರು ಆ ಬ್ರೌಪದೀದೇವಿಯ ಪಾಣಿಗ್ರಹಣವನ್ನು ಮಾಡಿದರು, ಆ ಬಳಿಕ ಪಾಂಚಲರಾಜನು ಮಹಾರಧರಾದ ಪಾಂಡವರಿಗೆ ಸುವರ್ಣ ಭೂಷಿತಗಳಾಗಿಯ ನಾಲ್ಕು ಕುದುರೆಗಳನ್ನು ಕಟ್ಟಿರುವಂಥಾವುಗಳಾಗಿಯೂ ಕನಕ ಮಾಲಿಕೆಗಳಿಂದ ಅಲಂಕೃತಗಳಾಗಿಯೂ ಇರುವ ನೂರು ರಧಗಳನ್ನೂ ಪದ್ಮ ಕುಲದಲ್ಲಿ ಹುಟ್ಟಿ ಚಿನ್ನದ ಕಟ್ಟುಗಳಿಂದ ಕೂಡಿರುವ ಕೊಂಬುಗಳುಳ್ಳವುಗಳಾಗಿ ಪರ್ವತಗಳೋ ಪಾದಿಯಲ್ಲಿ ಇರುವ ನೂರು ಆನೆಗಳನ್ನೂ ಚಿನ್ನದ ಹಲ್ಲಣಗಳೊಡನೆ ಕೂಡಿ ನವರತ್ನ ಮಾಲಿಕಾಲಂಕೃತಗಳಾಗಿ ಮನೋವೇಗವಳ್ಳ ಹನ್ನೆರಡು ವರುಷ ಪ್ರಾಯದ ಸಾವಿರ ಉತ್ತಮಾಶ್ಯಗಳನ್ನೂ ದಿವ್ಯಾಂಬರಾಭರಣಕುಸುಮಮಾಲಿಕಾಲಂಕೃತೆಯರಾಗಿ ಯೌವ ನದಿಂದ ಕೂಡಿರುವ ನೂರು ಮಂದಿ ದಾಸಿಯರನ್ನೂ ಮತ್ತು ಚಿನ್ನದ ಪಾತ್ರೆಗ ಇನ್ನೂ ಚಿನ್ನದ ಮಂಚಗಳನ್ನೂ ಚಿನ್ನದ ಮಣಿಗಳನ್ನೂ ಕಣ್ಣಿಗೆ ಪ್ರಿಯವಾದ ಅನೇಕ ವಸ್ತು ವಿಶೇಷಗಳನ್ನೂ ಅನೇಕ ಗೋಧನಗಳನ್ನೂ ದಿವ್ಯಾಂಬರಗಳನ್ನೂ ದಿವ್ಯ ಭೂಷಣ ಗಳನ್ನೂ ಒಂದೊಂದು ಲಕ್ಷ ಮೋಹರಗಳನ್ನೂ ಪ್ರತ್ಯೇಕ ಪ್ರತ್ಯೇಕವಾಗಿಯೂ ಪ್ರೀತಿ
ಪುಟ:ಕಥಾಸಂಗ್ರಹ ಸಂಪುಟ ೧.djvu/೧೯೫
ಗೋಚರ