184 KANARESE SELECTIONS-PART III ಪೂರ್ವಕವಾಗಿಯ ಕೊಟ್ಟನು. ಆ ಪಾಂಡವರು ಅಂಥಾ ಐಶ್ವರ್ಯವನ್ನು ಹೊಂದಿ ಇಂದ್ರನಿಗೆ ಸರಿಯಾದ ಸಂಪತ್ತುಳ್ಳವರಾಗಿ ದ್ರುಪದನ ಪಟ್ಟಣದಲ್ಲಿಯೇ ಇಷ್ಟ ವಾದ ಭೋಗಗಳನ್ನು ಅನುಭವಿಸುತ್ತಾ ಬ್ರೌಪದಿಯ ಕುಲಶೀಲವಿನಯಾಚಾರನಡತೆಗಳಿಗೆ ಸಂತೋಷಪಡುತ್ತಾ ಸುಖದಿಂದಿದ್ದರು. ಆಗ ದ್ರುಪರಾಜನ ಪಟ್ಟದ ಹೆಂಡತಿಯರು ಬಂದು ತಮ್ಮ ತಮ್ಮ ಹೆಸರುಗಳ ನ್ನು ಹೇಳಿಕೊಂಡು ಕುಂತೀದೇವಿಗೆ ನಮಸ್ಕಾರಗಳನ್ನು ಮಾಡಿದರು. ಬ್ರೌಪದೀದೇವಿ ಯು ಕೈಯ್ಯಲ್ಲಿ ಕಟ್ಟಿದ ಕಂಕಣವುಳ್ಳವಳಾಗಿ ಕುಂತಿಗೆ ನಮಸ್ಕರಿಸಿ ಕೈ ಕಟ್ಟಿ ಕೊಂಡು ನಿಂತಿರಲು ಕುಂತೀದೇವಿಯು ಬಹಳ ಸಂತೋಷದಿಂದ-ವಾಸುದೇವನಿಗೆ ಲಕ್ಷ್ಮಿ ದೇವಿಯೋಪಾದಿಯಲ್ಲಿ ನೀನು ಪಾಂಡುಕುಮಾರಕರಿಗೆ ಪ್ರಿಯವನ್ನು ಮಾಡುತ್ತಾ ಆಯುಷ್ಯಂತರಾಗಿ ಬಹು ಪರಾಕ್ರಮಿಗಳಾದ ಮಕ್ಕಳನ್ನು ಪಡೆದು ಕುರುಜಾಂಗಲ ಮೊದಲಾದ ದೇಶಗಳ ಪಟ್ಟಣಗಳಲ್ಲಿ ಪತಿಗಳೊಡನೆ ಪಟ್ಟಾಭಿಪಿಕೆಯಾಗಿಯೂ ಅಶ್ವ ಮೇಧಾದಿ ಯಾಗಗಳನ್ನು ಮಾಡುವ ನಿನ್ನ ಪತಿಯಾದ ಯುಧಿಷ್ಠಿರನಿಗೆ ಯಜ್ಞ ಪತ್ನಿ ಯಾಗಿಯ ಸಕಲ ಸುಖ ಸಾಮ್ರಾಜ್ಯವನ್ನು ಅನುಭವಿಸು ಎಂದು ಹರಿಸಿದಳು. ಆ ಬಳಿಕ ವಾಸುದೇವನು ಪಾಂಡವರಿಗೆ ಮುತ್ತುಗಳೂ ವಜ್ರಗಳೂ ಮೊದಲಾದ ನವರತ್ನ ಖಚಿತವಾದ ಚಿನ್ನದ ಒಡವೆಗಳನ್ನೂ ನಾನಾ ದೇಶಗಳಲ್ಲಿ ಹುಟ್ಟಿದ ಅಮೂಲ್ಯವೂ ಮೃದುವೂ ಆದ ವಿಚಿತ್ರವಾಗಿರುವ ವಸ್ತ್ರಗಳನ್ನೂ ಕಂಬಳಿಗಳನ್ನೂ ಮಣೆಗಳನ್ನೂ ಪಾತ್ರೆಗಳನ್ನೂ ರೂಪಯೌವನದಾಕ್ಷಿಣ್ಯಗಳಿಂದ ಕೂಡಿ ನಾನಾ ದೇಶಗಳಲ್ಲಿ ಹುಟ್ಟಿದ ದಾಸಿಯ ಜನಗಳನ್ನೂ ಮಾವುತರು ತಿದ್ದಿದ ಭದ್ರಗಜಗಳನ್ನೂ ಅನೇಕ ಭೂಷ ಣಾಲಂಕೃತಗಳಾದ ಉತ್ತಮಾಶ್ಯಗಳನ್ನೂ ದಂತಗಳಿಂದಲೂ ಚಿನ್ನ ಗಳಿಂದಲೂ ಮಾಡಿದ ಒಳ್ಳೆಯ ಕುದುರೆಗಳಿಂದ ಕೂಡಿರುವ ತೇರುಗಳನ್ನೂ ಮೊಹರಗಳನ್ನೂ ಚಿನ್ನದ ರಾಶಿಗ ಇನ್ನೂ ಪ್ರೀತಿಯಿಂದ ಕಳುಹಿಸಲು ಪಾಂಡವರು ಗೌರವದಿಂದ ಅದೆಲ್ಲ ವನ್ನೂ ಅಂಗೀ। ಕರಿಸಿ ವಾಸುದೇವನ ಮನಸ್ಸಿಗೆ ಸಂತೋಷವನ್ನು ಉಂಟುಮಾಡಿ ದ್ರುಪದರಾಜನ ಪಟ್ಟಿ ಣದಲ್ಲಿದ್ದರು. 9, DHARMARAJA'S KAJASUYA SACRIFICE, ೯, ಧರ್ಮರಾಜನು ಮಾಡಿದ ರಾಜಸೂಯಯಾಗವು ವೈಶಂಪಾಯನ ಮುನೀಂದ್ರನು ಜನಮೇಜಯರಾಜನನ್ನು ನೋಡಿಕೇಳ ಯಾ, ರಾಜೇಂದ್ರನೇ ! ಲೋಕೈಕವೀರನಾದ ಅರ್ಜುನನು ಕೃಷ್ಣನ ಅಪ್ಪಣೆಯಿಂದ ಖಾಂಡವ ವನದಹನದಲ್ಲಿ ಕಾಪಾಡಿದ ರಕ್ಕಸರ ಬಡಗಿಯಾದ ಮಯನು ಪ್ರತ್ಯುಪಕಾರ ವಾಗಿ ಇ೦ದ್ರ ಯಮ ವರುಣ ಕುಬೇರರ ಓಲಗದ ಚಾವಡಿಗಳಿಗಿಂತ ನಾಲ್ಕು ಮಡಿ ಚಂದವಾದ ಒಂದು ಓಲಗದ ಚಾವಡಿಯನ್ನೂ ಜಗಳದಲ್ಲಿ ಯಾವ ಹಗಗ ೪೦ದಲೂ ಮುರಿಯಲಾಗದೆ ಇರುವ ಒಂದು ತೋರವಾದ ಗದೆಯನ್ನೂ ಧ್ವನಿಯನ್ನು
ಪುಟ:ಕಥಾಸಂಗ್ರಹ ಸಂಪುಟ ೧.djvu/೧೯೬
ಗೋಚರ