ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೧೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೩ ನೆಯ ಭಾಗ 185 ಕೇಳಿದ ಮಾತ್ರದಲ್ಲಿಯೇ ಹಗೆಗಳ ಎದೆಯು ಸೀಳುವ ದೇವದತ್ತ ವೆಂಬ ಶಂಖವನ್ನೂ ಧರ್ಮರಾಜನಿಗ ಭೀಮನಿಗೂ ಅರ್ಜುನನಿಗೂ ಕ್ರಮವಾಗಿ ಕೊಟ್ಟು ಅವರು ಕೊಟ್ಟ ಉಡುಗೆರೆಗಳನ್ನು ತೆಗೆದುಕೊಂಡು ಹೊರಟುಹೋದನು. ಆ ಬಳಿಕ ಧರ್ಮರಾಜನು ಒಳ್ಳೆಯ ಲಗ್ನದಲ್ಲಿ ಕೃಷ್ಣನನ್ನು ಮುಂದಿಟ್ಟು ಕೊಂಡು ತಮ್ಮಂದಿರನ್ನು ಒಡಗೊಂಡು ಬ್ರಾಹ್ಮಣರೊಡನೆ ಓಲಗದ ಚಾವಡಿಯನ್ನು ಹೊಕ್ಕು ಎರಡನೆಯ ದೇವೇಂದ್ರನೋಪಾದಿಯಲ್ಲಿ ಒಡೋಲಗವನ್ನು ಕೊಡುತ್ತಾ ಧರ್ಮದಿಂದ ರಾಜ್ಯ ಪರಿಪಾಲನೆಯನ್ನು ಮಾಡುತ್ತಾ ಇದ್ದನು. ಹೀಗಿರುವಲ್ಲಿ ಕೃಷ್ಣನು ಒಂದು ದಿವಸ ಧರ್ಮರಾಜನ ಅಪ್ಪಣೆಯನ್ನು ತೆಗೆದು ಕೊಂಡು ದ್ವಾರಕಾ ಪಟ್ಟಣಕ್ಕೆ ತೆರಳಿ ದನು, ಆಮೇಲೆ ಒಂದಾನೊಂದು ದಿವಸದಲ್ಲಿ ಸೂರ್ಯನೇ ಭೂಲೋಕಕ್ಕೆ ನಡೆದು ಬರುತ್ತಾನೋ ಎಂಬಂತೆ ಬರುತ್ತಿರುವ ನಾರದಮಹರ್ಷಿಯನ್ನು ಧರ್ಮರಾಜನು ಕಂಡು ಜಗ್ಗನೆ ಎದ್ದು ತಮ್ಮಂದಿರೊಡನೆ ಎದುರುಗೊಂಡು ಅಡ್ಡಬಿದ್ದು ಕೈಯನ್ನು ಹಿಡಿದು ಚಾವಡಿಗೆ ಕರಕೊಂಡು ಬಂದು ಚಿನ್ನದ ಕಾಲುಮಣೆಯ ಮೇಲೆ ಕುಳ್ಳಿ ರಿಸಿ ಕಾಲುಗಳನ್ನು ತೊಳೆದು ಪೂಜಿಸಿ ಕೈದಾವರೆಗಳನ್ನು ಜೋಡಿಸಿ ನಿಂತು ಕೊಂಡಿ ದ್ದನು. ಆಗ ನಾರದ ಮಹಾ ಮುನಿಯು ಮೊದಲು ಧರ್ಮರಾಜನ ಕ್ಷೇಮವನ್ನು ಕೇಳಿ ಕುಳಿತು ಕೊಳ್ಳುವಂತೆ ಅಪ್ಪಣೆಯನ್ನು ಕೊಟ್ಟನು. ಆ ಪ್ರಕಾರವೇ ಕುಳಿತು ಕೊಂಡ ಧರ್ಮರಾಜನನ್ನು ನಾರದನು ನೋಡಿ-ಎಲೈ, ರಾಜೇಂದ್ರನೆ ! ನಿನ್ನ ಕುಲದ ಅರಸುಗಳು ಧರ್ಮಮಾರ್ಗವನ್ನು ಬಿಡದೆ ಪ್ರಜೆಗಳನ್ನು ಕಾಪಾಡಿದ ಹಾಗೆ ನೀನೂ ಕಾಪಾಡುತ್ತಿರುವೆಯಾ ? ಜನರ ಬುದ್ದಿ ಯನ್ನೂ ಸಾಹಸವನ್ನೂ ಶಕ್ತಿಯನ್ನೂ ಜಾಣ ತನವನ್ನೂ ಪರೀಕ್ಷಿಸಿ ನೋಡಿ ಅವರವರಿಗೆ ತಕ್ಕ ಉದ್ಯೋಗಗಳನ್ನು ಕೊಟ್ಟು ಅವರ ವರಿಗೆ ಯೋಗ್ಯವಾದ ಮರ್ಯಾದೆಗಳನ್ನು ಮಾಡುತ್ತಾ ಅವರು ಮಾಡುವ ಕೆಲಸಗ ಗಳನ್ನು ಆಪ್ತ ಜನುಂದ ತಿಳಿದು ಯು ಕಾಯುಕ್ತಗಳನ್ನು ವಿಚಾರಿಸಿಕೊಳ್ಳುತ್ತಾ ಇದ್ದೀಯಾ ? ಮತ್ತು ನಿನಗೂ ದೇಶದ ಜನಗಳಿಗೂ ಪರಿವಾರದವರಿಗೂ ಹಿತನಾ ಗಿಯ ಪಕ್ಷಪಾತಗಳಿಲ್ಲದೆ ನ್ಯಾಯಾನ್ಯಾಯಗಳನ್ನು ವಿಚಾರಿಸಿ ತಪ್ಪು ಮಾಡಿದ ವನು ತನ್ನ ಮಗನಾದಾಗ ಅವನನ್ನು ಶಿಕ್ಷಿ ಸುವವನಾಗಿಯ ಸಕಲ ವೇದಶಾಸ್ತ್ರ ಗಳನ್ನೂ ರಾಜನೀತಿಗಳನ್ನೂ ಓದಿ ಐವತ್ತಾರು ದೇಶದ ಮಾತುಗಳನ್ನೂ ಬರಹಗಳನ್ನೂ ಕಲಿತು ನಿರಾಲಸ್ಯವಾಗಿ ಕೋಪವಿಲ್ಲದೆ ಸಾಮದಾನ ಭೇದದಂಡಗಳೆಂಬ ಚತುರು ಪಾಯಗಳನ್ನು ಬಲ್ಲವನಾಗಿರುವ ನಿಮ್ಮ ವಂಶಾನುಕ್ರಮವಾಗಿ ಬಂದಂಧ ಮಂತ್ರಿ ಕುಲದಲ್ಲಿ ಹುಟ್ಟಿ ದಂಧ ಬ್ರಾಹ್ಮಣನನ್ನು ಮಂತ್ರಿಯನ್ನಾಗಿ ನೀನು ಮಾಡಿಕೊಂಡು ಆತನೊಡನೆ ಏಕಾಂತದಲ್ಲಿ ಆರು ಕಿವಿಗಳಿಗೆ ಕೇಳಿಸದಂತೆ ಮಂತ್ರಾಲೋಚನೆಯನ್ನು ಮಾಡಿ ಮೊದಲು ನಿರ್ಣಯಿಸಿ ಆ ಹಿಂದೆ ಯಾವ ರಾಜಕಾರ್ಯವನ್ನಾದರೂ ಮಾಡು ತೀಯಾ ? ಮತ್ತು ನಾನಾವಿಧ ಶಸ್ತ್ರವಿದ್ಯೆಗಳಲ್ಲಿ ಜಾಣರಾಗಿಯ ಆಸಮಾನವಾದ ಬಲವುಳ್ಳವರಾಗಿಯ ಒಡೆಯನ ಕೆಲಸಕ್ಕಾಗಿ ತಮ್ಮ ಪ್ರಾಣವನ್ನು ಸಮಯದಲ್ಲಿ ಹುಲ್ಲಿಗಿಂತಲೂ ಕಡೆ ಎಂದು ಭಾವಿಸುವ ಭಟರಿಂದ ಕೂಡಿದ ಸೇನೆಯನ್ನು ನಡೆಸುವ