ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೧೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

186 KANARESE SELECTIONS-PART III ಇಳಿಸುವ ಒಡ್ಡುವ ಮತ್ತು ಜಗಳವಾಡಿಸುವ ಕೆಲಸಗಳನ್ನು ತಿಳಿದವರಾಗಿ ಇರುವ ದಳ ವಾಯಿಗಳನ್ನು ಇಟ್ಟು ಕೊಂಡು ಶೂರರಿಗೆ ಅಪಮಾನವನ್ನು ಮಾಡದೆ ಹೇಡಿಗಳಿಗೆ ಬಹು ಮಾನವನ್ನು ಮಾಡದೆ ಇದ್ದೀಯಾ ? ಮತ್ತು ವೈದ್ಯಶಾಸ್ತ್ರದಲ್ಲಿ ಗಟ್ಟಿಗರಾಗಿ ವಂಚ ಕರಲ್ಲದೆ ಹಣದ ಆಸೆ ಇಲ್ಲದೆ ಎಲ್ಲರಲ್ಲಿಯೂ ಒಂದೇ ಪ್ರಕಾರವಾಗಿ ಪಶ್ಚಾತ್ತಾಪವೂ ದಯೆಯ ಉಳ್ಳ ವೈದ್ಯರನ್ನು ಇಟ್ಟು ಕೊಂಡು ಇದ್ದೀಯಾ ? ನಿನ್ನ ಸೇನಾ ಜನರಿಗೆ ನಿಬಂಧನೆ ಮಾಡಿರುವ ಸಂಬಳಗಳನ್ನು ತಿಂಗಳುಗಟ್ಟಿಯಲ್ಲಿಯ ತಡೆಯದೆ ಸಲ್ಲಿಸುತ್ತಾ ಜಗಳದಲ್ಲಿ ನಿನಗಾಗಿ ಸತ್ತು ಹೋದ ಭಟರ ಕುಟುಂಬಕ್ಕೆ ಅವರವರ ಯೋಗ್ಯತಾನು ಸಾರವಾಗಿ ಕೊಡಗಿಗಳನ್ನೂ ಮಾಸಾಶನಗಳನ್ನೂ ಕೊಟ್ಟು ಕಾಪಾಡುತ್ತೀಯಾ ? ಮತ್ತು ನಿನ್ನ ಆಜ್ಞೆಗಳು ಪಟ್ಟಣದಲ್ಲಿ ತಡೆಯಿಲ್ಲದೆ ನಡೆಯುತ್ತಾ ಇವೆಯೇ ? ಎಂದು ಇವು ಮೊದಲಾದ ರಾಜನೀತಿಗಳನ್ನು ಕುರಿತು ಪ್ರಶ್ನೆಯನ್ನು ಮಾಡಿದನು. ಅದಕ್ಕೆ ಧರ್ಮರಾಜನು-ಜೀಯಾ ಮುನೀಂದ್ರನೆ ! ತಮ್ಮಿಂದ ಕೇಳಿದ ರಾಜ ಕಾರ್ಯಗಳಲ್ಲಿ ನಿಮ್ಮ ಂಧಾ ದೊಡ ವರ ಅನುಗ್ರಹದಿಂದ ನನ್ನ ಯಥಾಶಕ್ತಿಯಾಗಿ ನಡೆಯುತ್ತೇನೆ, ನೀವು ಸಕಲ ಲೋಕಗಳಲ್ಲಿಯ ನೋಡದೇ ಇರುವುದು ಒಂದೂ ಇಲ್ಲ, ಆದರೆ ಎಲ್ಲಿಯಾದರೂ ಇಂಥಾ ಓಲಗದ ಚಾವಡಿಯನ್ನು ನೋಡಿ ಇದ್ದರೆ ಅಪ್ಪಣೆ ಕೊಡಿಸಬೇಕೆಂದು ಕೇಳಿದನು. ನಾರದನು ಅದರ ವಿಚಿತ್ರವಾದ ನಿರ್ಮಾಣ ಕೌಶಲವನ್ನು ನೋಡಿ ಆಶ್ಚರ್ಯಪಟ್ಟು--ನಾನು ಇಂಥಾ ಸಭೆಯನ್ನು ಮನುಷ್ಯ ಲೋಕದಲ್ಲಿ ಎಲ್ಲಿ ಯ ನೋಡಲಿಲ್ಲ ಆದರೆ ಇ೦ದ್ರ ಯಮ ವರುಣ ಕುಬೇರರ ಒಡೂಲಗಗಳಿಗೆ ನಾನು ಹೋಗಿರುವುದು೦ಟು, ಆ ಸಭಾಸಾನಗಳು ಇಷ್ಟು ಚೆಲುವಾಗಿಲ್ಲ, ಇದು ಭೂಲೋಕದಲ್ಲಿ ಇರುವ ಬ್ರಹ್ಮನ ಸಭಾಮಂದಿರದಂತೆ ಹೊಳೆ ಯುತ್ತದೆ. ಇ೦ಥಾ ಸಭೆಯಲ್ಲಿ ನೀನು ದಿವ್ಯ ಸಿಂಹಾಸನದ ಮೇಲೆ ಕುಳಿತು ಧರ್ಮ ದಿಂದ ರಾಜ್ಯಗಳನ್ನು ಪರಿಪಾಲಿಸುತ್ತಾ ಸಕಲ ದೇಶದ ಅರಸುಗಳಲ್ಲಿಯೂ ಕಪ್ಪ ಕಾಣಿಕೆಗಳನ್ನು ತೆಗೆದು ಕೊಳ್ಳುತ್ತಾ ಇರುವುದನ್ನೂ ನಿನ್ನ ತಮ್ಮಂದಿರು ಲೋಕೈಕವೀ ರರಾಗಿ ನಿನ್ನಲ್ಲಿ ಭೇದವಿಲ್ಲದೆ ಒಂದೇ ಮನಸ್ಸಿನಿಂದ ನಡೆಯುವುದನ್ನೂ ಯಮಲೋಕ ದಲ್ಲಿ ಇರುವ ನಿಮ್ಮ ತಂದೆಯಾದ ಪಾಂಡು ಮಹಾರಾಜನು ಕೇಳಿ ಕೆಲವು ದಿವಸ ಗಳಲ್ಲಿ ಅಲ್ಲಿಗೆ ಹೋಗಿದ್ದ ನನ್ನನ್ನು ಕಂಡು ಕಣ್ಣೀರನ್ನು ಬಿಡುತ್ತಾ ದೈನ್ಯಪಟ್ಟು ಕೊ೦ಡು-ಹರಿಶ್ಚಂದ್ರರಾಜನು ರಾಜಸೂಯವೆಂಬ ಮಹಾಯಜ್ಞವನ್ನು ಮಾಡಿ ದುದರಿಂದ ಇಂದ್ರನ ಸಭೆಯಲ್ಲಿ ಆತನ ಅರ್ಧಾಸನದಲ್ಲಿ ಕುಳಿತು ಸಕಲಭೋಗರ ಇನ್ನೂ ಅನುಭವಿಸುತ್ತಾನೆ. ನಾನು ಅಂಥಾ ಭಾಗ್ಯಕ್ಕೆ ಪಾತ್ರನಾಗಲಿಲ್ಲ. ನನ್ನ ಐದು ಮಂದಿ ಮಕ್ಕಳೂ ದೇವತೆಗಳ ಅಂಶದಿಂದ ಹುಟ್ಟಿ ದವರಾದುದರಿಂದ ಲೋಕೈಕ ವೀರರಾಗಿ ಪ್ರಸಿದ್ದಿ ಯನ್ನು ಪಡೆದಿದ್ದಾರೆ. ಅದೂ ಅಲ್ಲದೆ ಭೂಮಿಯ ಭಾರವನ್ನು ಇಳಿಸುವುದಕ್ಕೆ ಬ್ರಹ್ಮ ಮೊದಲಾದ ದೇವತೆಗಳ ಪ್ರಾರ್ಥನೆಯಿಂದ ಯದುಕುಲದಲ್ಲಿ ಕೃಷ್ಣನೆಂಬ ಹೆಸರಿನಿಂದ ಹುಟ್ಟಿರುವ ಮಹಾವಿಷ್ಣುವು ನನ್ನ ಮಕ್ಕಳಿಗೆ ನೆಂಟನಾ ಗಿಯ ಸ್ನೇಹಿತನಾಗಿಯ ಪಾಲಕನಾಗಿಯ ಮಂತ್ರಿಯಾಗಿಯ ದೂತನಾಗಿ