ಪುಟ:ಕಥಾಸಂಗ್ರಹ ಸಂಪುಟ ೧.djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

188 KANARESE SELECTIONS-PART III ಪಟ್ಟಣದಿಂದ ಹೊರಟು ದಾರಿಯಲ್ಲಿ ಒಂದು ದಿನವಾದರೂ ನಿಲ್ಲದೆ ಪ್ರಯಾಣದ ಮೇಲೆ ಪ್ರಯಾಣದಿಂದ ಬಂದು ಇಂದ್ರಪ್ರಸ್ಥ ಪಟ್ಟಣವನ್ನು ಹೊಕ್ಕು ಸೋದರತ್ತೆ ಯಾದ ಕುಂತೀದೇವಿಗೂ ಭಾವನಾದ ಧರ್ಮರಾಜನಿಗೂ ವಂದನೆಯನ್ನು ಮಾಡಿ ತನ್ನ ಸರಿವರೆಯದವನಾದ ಭೀಮನನ್ನು ತಬ್ಬಿಕೊಂಡು ತನಗೆ ಕಿರಿಯವರಾದ ಅರ್ಜುನ ನಕುಲಸಹದೇವರು ಬಂದು ನಮಸ್ಕರಿಸಲು ಅವರಿಗೆ ಆಶೀರ್ವಾದವನ್ನು ಮಾಡಿ ಆ ತರುವಾಯ ಧರ್ಮರಾಜನು ತೋರಿಸಿದ ದಿವ್ಯ ಸಿಂಹಾಸನದಲ್ಲಿ ಕುಳಿತುಕೊಂಡನು. ಆಗ ಯುಧಿಷ್ಠಿರನು ಆಶೇಷ ಲೋಕಗಳಿಗೆ ಗುರುವಾದ ಕೃಷ್ಣನನ್ನು ದೇವೋಪಚಾರ ಗಳಿಂದ ಪೂಜಿಸಿ ಎಲ್ಲ ಲೋಕಗಳ ಯೋಗಕ್ಷೇಮವನ್ನು ಯಾವಾಗಲೂ ಪರಾಂಬರಿ ಸುತ್ತಿರುವಂಥಾ ಕೃಷ್ಣ ದೇವರ ಯೋಗಕ್ಷೇಮವನ್ನು ತಾನು ಕೇಳಿದ ಮೇಲೆ ಸಂತೋಷ ದಿಂದ ತುಂಬಿದ ಕೃಷ್ಣನನ್ನು ಕುರಿತು ಎಲೆ, ಮಹಾನುಭಾವನೇ ! ನೀನು ಸಕಲ ಪ್ರಾಣಿಗಳ ಹೃದಯಗಳಲ್ಲಿ ನಿತ್ಯವೂ ಇರುವುದರಿಂದ ಅವರ ಅಂತಸ್ಥವಾದವಿಚಾರಗಳಲ್ಲಿ ನಿಮಗೆ ತಿಳಿಯದೆ ಇರುವುದು ಒಂದೂ ಇಲ್ಲ ಆದಾಗ್ಯೂ ಬಿನ್ನ ವಿಸುತ್ತೇನೆ ; ಲಾಲಿಸು. ಯಮಲೋಕದಲ್ಲಿರುವ ನನ್ನ ತಂದೆಯಾದ ಪಾಂಡುರಾಜನು ಕಳುಹಿಸಿದ ನಾರದ ಮುನೀಂದ್ರನು ನನ್ನ ಬಳಿಗೆ ಬಂದು ಈ ಓಲಗದ ಚಾವಡಿಯಲ್ಲಿ ಎಲ್ಲರ ಮುಂದೆ ಯ-ರಾಜ ಸೂಯಯಾಗವನ್ನು ಮಾಡಿ ನಿಮ್ಮ ತಂದೆಗೆ ಸಂತೋಷವನ್ನುಂಟು ಮಾಡೆಂದು ಹೇಳಿದನು. ನನಗೆ ಅಂಥಾ ಶಕ್ತಿಯು ಇರುವುದೆಂದು ತಿಳಿದು ಹೇಳಿದನೋ ತಿಳಿಯದೆ ಹೇಳಿದನೋ ನಾನು ಅರಿಯೆನು, ಸತ್ಯಸಂಕಲ್ಪ ನಾದ ನೀನು ನನ್ನ ಹೃದಯ ದಲ್ಲಿ ಇದ್ದು ಪ್ರೇರಿಸಿದುದರಿಂದ ನಾನು ಆ ಕ್ರತುವನ್ನು ಮಾಡುತ್ತೇನೆಂದು ಒಪ್ಪಿ ಕೊಂಡೆನು, ಅದಕ್ಕೋಸ್ಕರ ನಿನ್ನನ್ನು ಬೇಗ ಕರೆಯಿಸಿದೆನು, ಈಗ ನೀನು ಆ ವಿಷಯ ದಲ್ಲಿ ನನಗೆ ಏನು ಅಪ್ಪಣೆಯನ್ನು ಕೊಡುತ್ತೀ ? ಎಂದು ಕೇಳಿದನು. ಆಗ ಕೃಷ್ಣನು ಧರ್ಮರಾಜನನ್ನು ಕುರಿತು-ಹಗೆಗಳನ್ನು ಮರ್ದಿಸುವ ನಿನ್ನ ತಮ್ಮಂದಿರ ಸಹಾಯದಿಂದಲೂ ನಿನ್ನ ಸತ್ಯದಿಂದಲೂ ಘನವಾದ ರಾಜಸೂಯಯಾಗ ವನ್ನು ಮಾಡುವುದಕ್ಕೆ ನೀನೇ ತಕ್ಕವನಲ್ಲದೆ ಮತ್ತೊಬ್ಬನೂ ಇಲ್ಲ, ಆದರೆ ಮೊದಲು ಪರಶುರಾಮನಿಂದ ಈ ಭೂಮಿಯ ಕ್ಷತ್ರಿಯರೆಲ್ಲರೂ ನಾಶವಾದ ಕಾಲದಲ್ಲಿ ಯದು ವಂಶವೂ ಇಕ್ಷಾಕುವಂಶವೂ ಈ ಎರಡೇ ಉಳಿದುವು. ಇವುಗಳಲ್ಲಿ ನೂರೊಂದು ಕುಲಗಳು ಹೆಚ್ ದುವು, ಮತ್ತು ಯಯಾತಿಯ ಮಕ್ಕಳಾದ ಯದುಭೋಜರ ವಂಶ ಗಳಲ್ಲಿ ಹನ್ನೊಂದು ಕುಲಗಳು ಆದುವು. ಈ ಕ್ಷತ್ರಿಯ ಕುಲದವರನ್ನೆಲ್ಲ ಜಯಿಸಿ ದಂಧ ಜರಾಸಂಧನೆಂಬ ಒಬ್ಬ ಅರಸು ಇದ್ದಾನೆ ಆತನ ಸಾಮರ್ಥ್ಯವನ್ನು ಹೇಳು ಶೇನೆ ; ಕೇಳು, ಆತನಿಗೆ ಬಹಳ ಗರ್ವಿಷ್ಠನೂ ಬಹಳ ಬಲಿಷ್ಠನೂ ಆದ ಜೇದಿ ದೇಶಾ ಧಿಪತಿಯಾದ ಶಿಶುಪಾಲನೆಂಬ ಮಹಾವೀರನು ದಳಪತಿಯಾಗಿ ಎಡೆಬಿಡದೆ ಆತನನ್ನು ಒಲಗಿಸುತ್ತಿರುವನು, ಮತ್ತು ಆಯುಧಗಳಿಂದ ಹತರಾಗದವರೂ ಭಯಂಕರವಾದ ರಾಕ್ಷಸಮಾಯೆಯುಳ್ಳವರೂ ಆದ ಹಂಸನು ಡಿಬಿಕನು ಎಂಬೀರ್ವರೂ ಪರಮ ಸ್ನೇಹಿ ಶರಾಗಿಯ ಮಂತ್ರಿಗಳಾಗಿಯೂ ಅವನನ್ನು ನಿರಂತರವೂ ಸೇವಿಸುವರು, ಮತ್ತು