ಕಥಾಸಂಗ್ರಹ-೩ ನೆಯ ಭಾಗ 189 ಕೌಶಿಕ ಚಿತ್ರಸೇನ ಎಂಬ ಇಬ್ಬರು ಅರಸುಗಳು ಅಗಣಿತ ಸೇನೆಗಳಿಂದ ಕೂಡಿಕೊಂಡು ಆತನಿಗೆ ಎಡಬಲದ ತೋಳುಗಳ ಹಾಗೆ ಸಹಾಯರಾಗಿ ಇರುವರು, ಮತ್ತು ಮಹಾ ಬಲಪರಾಕ್ರಮಿಯಾದ ಪ್ರಾಗೊ ತಿಷನಗರದ ಒಡೆಯನೂ ನಿನ್ನ ತಂದೆಗೆ ಸ್ನೇಹಿತನೂ ನಿನಗೆ ಬೇಕಾದವನೂ ಆಗಿರುವ ಭಗದತ್ತನೂ ಕೂಡ ಭಯದಿಂದ ಆತನನ್ನು ಓಲೈಸು ತಿರುವನು ಅ೦ಗವಂಗ ಮಹೇಂದ್ರಕಿರಾತ ಹತಿಗಳು ಪೌಂಡ್ರಕ ವಾಸುದೇವನು ದಕ್ಷಿಣ ದೇಶಾಧಿಪತಿಗಳಾದ ಪುರಜಿತ್ತನು ಕರೂಶನು ಕಭನು ನಕುಲನು ಕರುಷಣನು ಸೂಪಹಿತನು ಮಣಿದತ್ತನು ಚಕ್ರನು ಶಾಲೆಯನು ಸರ್ವ ಪಾಂಚಾಲರೂ ಶೂರಸೇನ ಪುಷ್ಕರ ಪ್ರಳಿಂದ ಕಳಿಂದ ಕುಂತಳ ಮತ್, ಅಂಧ ಈ ದೇಶಗಳ ಅರಸುಗಳೆಲ್ಲರೂ ಭದದಿಂದ ತಮ್ಮ ತಮ್ಮ ದೇಶಗಳನ್ನು ಬಿಟ್ಟು ಬಂದು ಆತನನ್ನು ಓಲಗಿಸುತ್ತಿರುವರು. ಇನ್ನೊಂದು ವಿಶೇಷವನ್ನು ಕೇಳು ದುಷ್ಟನಾಗಿಯು ನನ್ನ ಸೋದರ ಮಾವ ನಾಗಿಯೇ ಇದ್ದ ಕಂಸನು ತನ್ನ ತಂದೆಯಾದ ಉಗ್ರಸೇನನನ್ನೂ ತಂಗಿಯಾದ ದೇವಕಿ ಯನ್ನೂ ನನ್ನ ತಂದೆಯಾದ ವಸುದೇವನನ್ನೂ ನಿರ್ಬಂಧದಲ್ಲಿ ಇಟ್ಟು ಬಹಳ ತೊಂದರೆ ಪಡಿಸುತ್ತಾ ಲೋಕಕ್ಕೆ ಕಂಟಕನಾಗಿದ್ದುದರಿಂದ ಅವನನ್ನು ನಾನು ಕೊಂದು ಹಾಕಿ ದೆನು. ಅವನ ಆ ಜರಾಸಂಧನಿಗೆ ಅಳಿಯನಾದುದರಿಂದ ತನ್ನ ಹೆಣ್ಣು ಮಕ್ಕಳ ದುಃಖ ವನ್ನು ಕೇಳಿ ರೌದ್ರಾಕಾರನಾಗಿ ನನಗೆ ಬಹಳ ಉಪದ್ರವಗಳನ್ನು ಮಾಡಲಾರಂಭಿಸಿ ಹಂಸಡಿಲೀಕರೇ ಮೊದಲಾದ ಶೂರರೊಡನೆ ಕೂಡಿ ಲೆಕ್ಕವಿಲ್ಲದ ಸೇನೆಯನ್ನು ಕರಕೊಂ ಡು ನನ್ನ ಪಟ್ಟಣವಾದ ಮಧುರೆಗೆ ಬಂದು ಮುತ್ತಿಗೆಯನ್ನು ಹಾಕಿದನು, ನಾವು ಕೂಡ ಮಹಾ ವೀರರಾದ ಯದು ವೃಪ್ತಿ ಭೋಜ ಅಂಧಕ ಸೈನ್ಯಗಳೊಡನೆ ಹೊರಟು ಜಗಳವನ್ನು ಮಾಡುತ್ತಾ ಆ ಜರಾಸಂಧನು ನನ್ನಿಂದ ಸಾಯುವವನಲ್ಲವೆಂದು ತಿಳಿದು ಸಹಾಯಹೀನನಾಗುವಂತೆ ಮಾಡಬೇಕೆಂದು ನೆನೆದು ಉಪಾಯದಿಂದ ಹೊಯ್ತಲ್ಲಿ ಹಂಸನು ಹತನಾದನೆಂದು ಡಿಬಿಕನಿಗೆ ತಿಳಿಯಪಡಿಸಿದೆನು, ಆ ಮಾತನ್ನು ಕೇಳಿ ಅವನು ದುಃಖಪಟ್ಟು ಹಂಸನಿಲ್ಲದೆ ನಾನು ಇರಬಾರದೆಂದು ದುಃಖದಿಂದ ಕಡಲಲ್ಲಿ ಬಿದ್ದು ಕಾಲ ನರಮನೆಗೆ ಹೋದನು, ಆ ಸುದ್ದಿಯನ್ನು ಹಂಸನು ಕೇಳಿ ತಮ್ಮನ ಮೇಲಣ ಹೆಚ್ಚಾದ ಸ್ನೇಹದಿಂದ ವಿಷವನ್ನು ಕುಡಿದು ತಾನೂ ಸತ್ತನು. ಆ ಮೇಲೆ ಜರಾಸಂಧನು ಸಹಾ ಯಹೀನನನಾಗಿ ವ್ಯಸನದಿಂದ ಮುತ್ತಿಗೆಯನ್ನು ತೆಗೆದು ತನ್ನ ಪಟ್ಟಣಕ್ಕೆ ಹೋದನು. ನಾವು ಅವನ ಭಯದಿಂದ ಮಧುರಾ ಪಟ್ಟಣವನ್ನು ಬಿಟ್ಟು ಕಡಲ ನಡುವೆ ದ್ವಾರಕೆ ಎಂಬ ದುರ್ಗವನ್ನು ಮಾಡಿಕೊಂಡು ಅಲ್ಲಿ ಇರುತ್ತೇವೆ. ಮತ್ತು ಆ ಜರಾಸಂಧನ ಕೆಟ್ಟ ನಡತೆಗಳಾವುವಂದರೆ-ಆತನು ಮಹಾ ಪಾಪಾ ತನಾಗಿ ಅನೇಕರಾದ ಅರಸುಮಕ್ಕಳನ್ನು ಹಿಡಿದು ಕೊಂಡು ಬಂದು ಗಿರಿವ ಜವೆಂಬ ಪುರದಲ್ಲಿ ಸೆರೆಹಾಕಿ ಆ ದೇವರಿಗೆ ತಾನು ಭೈರವ ಪೂಜೆಯನ್ನು ಮಾಡುತ್ತಾ ಪಾಪಕೆ ಹೆದರದೆ ಪ್ರತಿದಿನವೂ ಒಂದೊಂದು ನರಬಲಿಯನ್ನು ಕೊಡುತ್ತಾ ಇದ್ದಾನೆ, ಅಂಥಾ ಕೂರ ಕಾರ್ಯವನ್ನು ಮಾಡುವ ಆ ಕೆಟ್ಟ ಜರಾಸಂಧನೊಬ್ಬನನ್ನು ಮಾತ್ರ ನೀನು ಯುದ್ಧದಲ್ಲಿ ಕೊಂದು ಹಾಕಿದರೆ ಸಮಸ್ತ ಸಾಮ್ರಾಜ್ಯವೂ ನಿನ್ನನ್ನು ಸೇರುವುದು.
ಪುಟ:ಕಥಾಸಂಗ್ರಹ ಸಂಪುಟ ೧.djvu/೨೦೧
ಗೋಚರ