190 KANARESE SELECTIONS --PART III ರಾಜಸೂಯ ಯಾಗವನ್ನು ನೀನು ತಡೆಯಿಲ್ಲದ ಹಾಗೆ ಮಾಡಬಹುದು, ಆದರೆ ಆ ಮಗಧದೇಶದ್ದರಸನಾದ ಜರಾಸಂಧನು ಯುದ್ಧದಲ್ಲಿ ಆಯುಧಗಳಿಂದ ಜಯಿಸದ ಹಾಗೆ ಆತನಿಗೆ ಈಶ್ವರನ ವರವುಂಟು. ಆದಾಗ್ಯೂ ಬಲಿಷ್ಟನೂ ನಿನ್ನ ತಮ್ಮ ನೂ ಆದ ಈ ಭೀಮಸೇನನು ಮಲ್ಲ ಯುದ್ಧವನ್ನು ಮಾಡಿ ಆಯಾಸವಿಲ್ಲದೆ ಅವನನ್ನು ಕೊಂದುಹಾ ಕುವನು. ರಕ್ಷಣೆಯಿಂದ ಭಗೀರಧನೂ ಸಹಾಯಸಂಪತ್ತಿನಿಂದ ಯೌವನಾಶ್ವನೂ ಬಲದಿಂದ ಭರತನೂ ತಪಸ್ಸಿನಿಂದ ಕಾರ್ತವೀರ್ಯನೂ ಬುದ್ದಿ ಯಿಂದ ಮರುತನೂ ಮೊದಲು ಸಕಲ ಸಾಮ್ರಾಜ್ಯವನ್ನೂ ಪಡೆದರು, ಈಗ ಅವೆಲ್ಲವೂ ನಿನಗಿರುವುದರಿಂದ ಆ ದುರಾತ್ಮನು ಎಷ್ಟು ಬಲಿಷ್ಠನಾದರೂ ಎಂಥಾ ಶ್ರೇಷ್ಠನಾದರೂ ಅವನ ಪಾಪ ಕರ್ಮಗಳಿಂದ ಅವನ ಐಶ್ವರ್ಯವೆಲ್ಲಾ ಮಿಂಚಿನ ಹಾಗೆ ಕಣಿಕವಾಗಿ ಹಾರಿಹೋ ಗುವುದು, ಅವನನ್ನು ಜಯಿಸುವುದು ನಿನಗೆ ಸುಲಭವಾಗಿರುವುದೆಂದು ಹೇಳಿದನು. ಆ ಸಮಯದಲ್ಲಿ ಆ ಮಾತನ್ನು ಕೇಳಿ ಭೀಮಸೇನನು ಧರ್ಮರಾಜನೊಡನೆ ಹೀಗೆಂದನು--ಪ್ರಪಂಚದಲ್ಲಿ ಎಷ್ಟು ಅಧಿಕನಾದರೂ ಒಂದು ಕೆಲಸಕ್ಕೆ ಉದ್ಯೋಗಿಸಿ ಅದನ್ನು ಮಾಡದೆ ಬಿಟ್ಟರೆ ಅವನು ಐಶ್ವರ್ಯ ಕೀರ್ತಿಗಳನ್ನು ಪಡೆಯಲಾರನು ಹೀನ ನಾದರೂ ತಾನು ಪ್ರಾರಂಭಿಸಿದ ಕೆಲಸಕ್ಕೆ ಎಷ್ಟು ಕಡೆ ಬಂದಾಗ ಚಪಲಬುದ್ದಿ ಯಿಂದ ಅದನ್ನು ಬಿಡದೆ ಪೂರಯಿಸಿದರೆ ಅವನು ಎಂಥಾ ಬಲಿಷ್ಠ ರನ್ನೂ ಜಯಿಸುವನು. ಅಧಿಕ ಪರಾಪ್ತಮಿಯ ಸಂಗಡ ಜಗಳವನ್ನು ಮಾಡಿ ಸೋತರೂ ಅವನಿಗೆ ಲೋಕದಲ್ಲಿ ಹೊಗಳುಂಟು. ಕೀಳನನ್ನು ಕೊಂದು ಗೆದ್ದಾಗ ಹೂಗಳಿಲ್ಲ, ಅದುದರಿಂದ ಈ ಕೃಷ್ಣನ ಕರುಣೆಯಿಂದಲೂ ಆರ್ಜುನನ ಸಹಾಯದಿಂದ ನಿನ್ನ ಆಶೀರ್ವಾದದಿಂ ದಲೂ ಜಗದ್ರೋಹಿಯಾದ ಜರಾಸಂಧನನ್ನು ಜಗಳದಲ್ಲಿ ಜಯಿಸಲಾಪೆನು ಮತ್ತು ಆಹವನೀಯ ಗಾರ್ಹಪತ್ಯ ದಕ್ಷಿಣಗಳೆಂಬ ಅಗ್ನಿ ತ್ರಯಗಳೋಪಾದಿಯಲ್ಲಿ ನಾವು ಮೂರು ಜನವೂ ನಿನ್ನ ಮಹಾ ಯಜ್ಞದ ಕೆಲಸವನ್ನು ವಿಘ್ನ ಎಲ್ಲದ ಹಾಗೆ ನಡೆಸು ವೆವು, ಈ ಜರಾಸಂಧನೆಂಬ ಪಶುವನ್ನು ನನ್ನ ಭುಜಬಲವೆಂಬ ಬೆಂಕಿಗೆ ಆಹುತಿಯನ್ನು ಮಾಡುವೆನು ಎಂದು ಹೇಳಿದನು ಆ ಬಳಿಕ ಅರ್ಜುನನು ರಾಜೇಂದ್ರನೇ ! ನೀನು ಎಲ್ಲಾ ಅರಸು ಗಳನ್ನೂ ಜಯಿಸು, ಲೋಕದಲ್ಲಿ ನಿನ್ನ ಹೆಸರು ಪ್ರಸಿದ್ಧವಾಗುವ ಹಾಗೆ ರಾಜಸೂಯವನ್ನು ಮಾಡು. ನನ್ನ ಭುಜವೀರ್ಯಕ್ಕೆ ತಕ್ಕ ಹಾಗೆ ಇರುವ ಈ ಗಾಂಡೀವವೆಂಬ ಬಿಲ್ಲೂ ಅಕ್ಷಯಬಾಣವುಳ್ಳ ಬತ್ತಳಿಕೆಯ ದಿವ್ಯ ಬಾಣಗಳೂ ದುರ್ಜಯಗಳಾದ ರಥಾಶ್ವ ಗಳೂ ಈ ಓಲಗದ ಚಾವಡಿಯ ಸಾರ್ಥಕವಾಗಲಿ, ಮತ್ತು ಪರಾಕ್ರಮಿಯಾದ ವನಿಗೆ ಒಳ್ಳೆಯ ಕುಲವೂ ರೂಪೂ ಗುಣವೂ ದ್ರವ್ಯವೂ ಉಂಟಾದರೆ ಸುವರ್ಣಕ್ಕೆ ಸುಗಂ ಧಮುಂಟಾದಂತೆ ಅವನಿಗೆ ಮತ್ತೂ ಪ್ರಕಾಶಮುಂದಾಗುವುದು, ಹೇಡಿಗೆ ಏನು ದೊರ ಕಿದರೂ ವ್ಯರ್ಥವಾಗುವುದು, ಈ ರಾಜಸೂಯ ನಿಮಿತ್ತವಾಗಿ ಪರಾಕ್ರಮದಿಂದ ಮಗಧನನ್ನು ಮರ್ದಿಸಿ ಸೆರೆಯಲ್ಲಿರುವ ಅರಸುಮಕ್ಕಳನ್ನು ಕಾಪಾಡಿದರೆ ಜಗತ್ತಿನಲ್ಲಿ ಅದಕ್ಕಿಂತ ಹೆಚ್ಚಾದ ಹೊಗಳೂ ಧರ್ಮವೂ ಏನಿರುವುದು ಎಂದು ಹೇಳಿದನು.
ಪುಟ:ಕಥಾಸಂಗ್ರಹ ಸಂಪುಟ ೧.djvu/೨೦೨
ಗೋಚರ