ಪುಟ:ಕಥಾಸಂಗ್ರಹ ಸಂಪುಟ ೧.djvu/೨೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಧಾಸಂಗ್ರಹ-೩ನೆಯ ಭಾಗ 191 ಹೀಗೆ ಶೌರ್ಯವಚನಗಳನ್ನು ನುಡಿದ ನರವೃಕೋದರರ ನುಡಿಗೆ ನಾರಾಯ ಣನು ಸಂತೋಷಪಟ್ಟು--ಅಯ್ಯಾ ! ಪ್ರಪಂಚದಲ್ಲಿ ಮನುಷ್ಯನಿಗೆ ಬುದ್ದಿಯ ಧೈರ್ಯವೂ ಇದ್ದರೆ ಪರೋಪಕಾರದಲ್ಲಿ ಮನವನ್ನಿಟ್ಟು ಪರಾಕ್ರಮವನ್ನು ತೋರಿಸಿ ದರೆ ಅದಕ್ಕೆ ದೈವವೂ ಸಹಾಯವಾಗುವುದು. ಆದುದರಿಂದ ನಾವು ಮೂರು ಮಂದಿಯ ವಿನಯದಿಂದಲೂ ಪರಾಕ್ರಮದಿಂದಲೂ ಸಾಹಸದಿಂದ ಜರಾಸಂಧ ನನ್ನು ತಗಲಿ ಹೊಳೆಯು ತನ್ನ ವೇಗದಿಂದ ಮರವನ್ನು ಬೇರು ಸಹಿತವಾಗಿ ಕೀಳುವ ಹಾಗೆ ಅವನನ್ನು ನಿರ್ಮಲ ಮಾಡುವೆವು ಅಂದನು. ಆಗ ಧರ್ಮರಾಜನು-ಎಲೆ, ದನುಜಮರ್ದನನೇ ! ಪ್ರಪಂಚದಲ್ಲಿ ನಿನಗೆ ಹಗೆಯಾದವರು ನಿನ್ನೊಡನೆ ಜಗಳವನ್ನು ಮಾಡಿ ಬೆಂಕಿಯಲ್ಲಿ ಬಿದ್ದ ಮಿಡತೆಯ ಹಾಗೆ ನಾಶವಾಗದೆ ಬದುಕಿ ಸುಖದಿಂದ ಇರುವುದುಂಟೇ ? ಅಂಧಾ ಭು ಜವಿಕ್ರಮವನ್ನು ಜರಾಸಂಧನು ಹೇಗೆ ಪಡೆದನು ? ಅವನ ಹುಟ್ಟು ವಿಕೆಯ ಸ್ಥಿತಿಯು ಹೇಗೆ ? ನನಗೆ ಹೇಳಬೇಕೆಂದು ಕೇಳಲು ಮುರಾ ರಿಯು-ಕೇಳ್ಳೆಯ್ಯಾ, ಯುಧಿಷ್ಠಿರನೆ ! ಬೃಹದ್ರಥನೆಂಬ ಅವನ ತಂದೆಯು ಮಗಧ ದೇಶಕ್ಕೆ ಒಡೆಯನಾಗಿಯೂ ಬಹು ಗಟ್ಟಿಗನಾಗಿಯ ಮರಕ್ಷೌಹಿಣೀ ಸೈನ್ಯವು. ಳ್ಳವನಾಗಿಯ ಸೀಮೆಯನ್ನು ಕಾಪಾಡುತ್ತಿದ್ದು ಕಾಶೀರಾಜನ ಇಬ್ಬರು ಕುವರಿಯ ರನ್ನು ಮದುವೆಯಾಗಿ ಅತ್ಯಂತ ಸೌಖ್ಯವನ್ನು ಅನುಭವಿಸುತ್ತಾ ಮಕ್ಕಳಿಲ್ಲದೆ ಹೋದು ದರಿಂದ ಪುತ್ರಕಾಮೇಷ್ಟಿಯನ್ನು ಮಾಡಿದನು. ಆ ಮೇಲೂ ಸಂತಾನವಾಗದಿರಲು ಸಂತತಿ ಇಲ್ಲದ ಸಂಪತ್ತು ಹೆಣಕ್ಕೆ ತೊಡಸಿದ ಚಿನ್ನದ ಒಡವೆಯಂತೆ ವ್ಯರ್ಧವೆಂದು ಎಣಿಸಿ ಸಕಲ ಸಂಪತ್ತುಗಳನ್ನೂ ಬಿಟ್ಟು ಬಿಟ್ಟು ಇಬ್ಬರು ಹೆಂಡಿರೊಡನೆ ಕೂಡಿ ಕಾಡಿಗೆ ಹೋಗಿ ಅಲ್ಲಿ ಮೋಕ್ಷಾ ಪೇಕ್ಷೆಯಿಂದ ಒಂದು ಮರದ ಕೆಳಗೆ ಉರಿಯುವ ಬೆಂಕಿಯಂತೆ ತೇಜೋವಂತನಾಗಿ ತಪಸ್ಸು ಮಾಡುತ್ತಿರುವ ಗೌತಮಕುಲಸಂಭವನಾದ ಚಂಡಕೌಶಿ ಕನೆಂಬ ಮುನಿಯನ್ನು ನೋಡಿ ಸಂತೋಷಪಟ್ಟು ಪ್ರದಕ್ಷಿ ಣನಮಸ್ಕಾರಾದಿಗಳನ್ನು ಮಾಡಿ ಬಹಳ ಭಯಭಕ್ತಿಗಳಿಂದ ಕೂಡಿದವರಾಗಿ ಅನೇಕ ದಿವಸಗಳ ವರೆಗೂ ಆತ ನನ್ನೇ ಆಶ್ರಯಿಸಿ ಸೇವೆಯನ್ನು ಮಾಡುತ್ತಾ ಬಂದನು, ಆ ಮುನೀಂದ್ರನು ರಾಯನ ಭಕ್ತಿಗೆ ಮೆಚ್ಚಿ ನಿನಗೆ ಬೇಕಾದುದನ್ನು ಬೇಡಿಕೊ ; ಕೊಡುವೆನೆಂದು ಹೇಳಲು ಆಗ ಬೃಹದ್ರಧರಾಜನು ಆತನಿಗೆ ಸಾಷ್ಟಾಂಗ ವಂದನೆಯನ್ನು ಮಾಡಿಯಾ, ಮುನೀಂ ದ್ರನೆ ! ನನಗೆ ಸಮಸ್ತ ಸಂಪತ್ತುಗಳೂ ಉಂಟಾಗಿ ಸಂತಾನದ ಸಮೃದ್ಧಿಯು ಮಾತ್ರ ಇಲ್ಲದುದರಿಂದ ಉಳಿದುದೆಲ್ಲವೂ ವ್ಯರ್ಥವೆಂದು ತಿಳಿದು ತಪಸ್ಸು ಮಾಡಬೇಕೆಂದು ಇಲ್ಲಿಗೆ ಬಂದೆನು, ನೀವು ಕರುಣವಿಟ್ಟು ನನಗೆ ಮಕ್ಕಳಾಗುವಂತೆ ಅನುಗ್ರಹಿಸಿದರೆ ಕೃತಾರ್ಧನಾಗುವೆನೆಂದು ಬೇಡಿಕೊಂಡನು. ಆಗ ಹಾಗೆಯೇ ಆಗಲೆಂದು ಅನುಗ್ರಹಿಸಿದ ಮುನೀಂದ್ರನ ವರದಿಂದ ಅವನಿಗೆ ಕಾಲಕ್ರಮವಾಗಿ ಒಬ್ಬ ಮಗನು ಹುಟ್ಟಲು ಆ ಶಿಶುವಿಗೆ ಜರಾಸಂಧನೆಂಬ ಹೆಸ ರಿಕ್ಕಿ ಅವನನ್ನು ಬಹು ಪ್ರೀತಿಯಿಂದ ಕಾಪಾಡುತ್ತಾ ಬಂದನು. ಅವನು ಬಿದಿಗೆಯ ಚಂದ್ರನಂತೆ ದಿನದಿನಕ್ಕೆ ಹೆಚ್ಚಾಗಿ ಬೆಳೆಯುತ್ತಾ ಬೇಸಿಗೆಯ ನಡುವಗಲ ಸೂರ್ಯನಂತೆ