192 KANARESE SELECTIONS-PART III ತೇಜಃಪುಂಜಯುಕ್ತನಾಗಿರಲು ಚಂಡಕೌಶಿಕ ಮುನಿಯು ಒಂದು ದಿವಸ ಆ ಪಟ್ಟ ಣಕ್ಕೆ ಬಂದು ರಾಜನಿಂದ ಪೂಜಿತನಾಗಿ-ಕೇಳಯ್ಯಾ, ಬೃಹದ್ರಥನೇ ! ಪೂರ್ವದಲ್ಲಿ ರಾಕ್ಷಸಿಯು ನಿನಗೆ ಮಾಡಿದ ಉಪಕಾರವನ್ನು ಜ್ಞಾನದೃಷ್ಟಿಯಿಂದ ತಿಳಿದೆನು. ಮುಂದೆ ಈ ಕುಮಾರನು ಶಿವನನ್ನು ಪ್ರತ್ಯಕ್ಷನನ್ನಾಗಿ ಮಾಡಿಕೊಂಡು ಆತನಿಂದ ಲೋಕದಲ್ಲಿ ತಾನು ಅಸ್ಕಶಸ್ತ್ರಗಳಿಂದ ಹತನಾಗದಂತೆ ವರವನ್ನು ಹೊಂದುವನು. ಇವ ನೊಡನೆ ಜಗಳಕ್ಕೆ ಬಂದ ಹಗೆಗಳು ಬೆಂಕಿಯಲ್ಲಿ ಬಿದ್ದ ಮಿಡತೆಗಳ ಹಾಗೆ ನಾಶವಾ ಗುವರು. ಗರುಡನ ಗತಿಯನ್ನು ಮಿಕ್ಕ ಹಕ್ಕಿಗಳು ಜಯಿಸಲಾರದ ಹಾಗೆ ದೇಶದ ಅರಸುಗಳೆಲ್ಲಾ ಇವನ ಶೌರ್ಯವನ್ನು ಗೆಲ್ಲಲಾರರು, ತೇಜೋವಂತರಲ್ಲಿ ಸೂರ್ಯನು ಹೇಗೆ ಹೆಚ್ಚಾಗಿರುವನೋ ಹಾಗೇ ಅರಸುಗಳಲ್ಲಿ ಇವನು ಹೆಚ್ಚಾಗಿರುವನು ಕೀಳು ಹೊಳೆಗಳು ಬೆಟ್ಟಗಳನ್ನು ಹೇಗೆ ಭೇದಿಸಲಾರವೋ ಹಾಗೇ ಸಕಲ ದಿವ್ಯಾಯುಧಗಳೂ ಇವನ ಒಡಲನ್ನು ಭೇದಿಸಲಾರವು. ಎಲ್ಲಾ ಹೊಳೆಗಳೂ ಕಡಲಿನಲ್ಲಿ ಸೇರುವ ಹಾಗೆ ಪರರಾಜರ ಸಂಪತ್ತುಗಳೆಲ್ಲಾ ಬಂದು ಇವನಲ್ಲಿ ಸೇರುವುವು ಎಂಬುದಾಗಿ ಮುಂದೆ ಬರುವ ಜರಾಸಂಧನ ಅಭಿವೃದ್ದಿ ಯ ವಿಷಯವನ್ನು ಹೇಳಿ ಹೊರಟುಹೋದನು. ತರುವಾಯ ಬೃಹದ್ರಧರಾಜನು ಕೆಲವು ಕಾಲ ರಾಜ್ಯಭಾರವನ್ನು ಮಾಡಿ ಸರ್ವಫಿ ದ್ಯಾನಿಪುಣನೂ ಪ್ರಾಯದವನೂ ಆಗಿರುವ ಮಗನಿಗೆ ಪಟ್ಟಾಭಿಷೇಕವನ್ನು ಮಾಡಿ ತಾನು ಮುಮುಕ್ಷುವಾಗಿ ರಾಣಿಯೊಡನೆ ಕೂಡಿ ತಪೋವನಕ್ಕೆ ಹೋದನು. ಅನಂತರದಲ್ಲಿ ಜರಾಸಂಧನು ಮುನಿಯು ಕೊಡಿಸಿದ ಅಪ್ಪಣೆಯಂತೆ ಶಿವನನ್ನು ಪೂಜಿಸಿ ಮೆಚ್ಚಿಸಿ ವರಗಳನ್ನು ಪಡೆದು ಪರಚಕ್ರವರ್ತಿಗಳನ್ನೆಲ್ಲಾ ಜಯಿಸಿ ಮಹಾ ದುಷ್ಟನಾಗಿದ್ದಾನೆ ಇವನಿಗೆ ಸಹಾಯಕರಾಗಿದ್ದ ಹಂಸ ಡಿಬಿಕರನ್ನು ನಾನು ಭೇದೋ ಪಾಯದಿಂದ ಕೊಂದು ಹಾಕಿದ ಕಾರಣ ಈಗ ಆ ದುಷ್ಟನು ರೆಕ್ಕೆಗಳಿಲ್ಲದ ಹಕ್ಕಿಯ ಹಾಗಿದ್ದಾನೆ. ಅವನು ಮಹಾ ಪಾಪಾತ್ಮನಾಗಿರುವುದರಿಂದ ಸತ್ಯವಂತನಾದ ನಿನಗೆ ಅವನನ್ನು ಜಯಿಸುವುದು ಅಗಾಧವಲ್ಲ. ಈ ಅರ್ಜುನನ ಅಸ್ಕೆಬಲವೂ ಭೀಮನ ಭುಜ ಬಲವೂ ನನ್ನ ನೀತಿಬಲವೂ ನಿನಗಿರುವಲ್ಲಿ ಯಾವ ಕಾರ್ಯ ತಾನೇ ಅಸಾಧ್ಯವಾಗು ವುದು ? ನಿನಗೆ ನನ್ನ ಮಾತಿನಲ್ಲಿ ನಂಬಿಕೆಯ ನನ್ನಲ್ಲಿ ಭರವಸವೂ ಇದ್ದರೆ ನನ್ನೊಡನೆ ಭೀಮಾರ್ಜುನರನ್ನು ಕಳುಹಿಸು ಎಂದು ಹೇಳಿದನು, ಆಗ ಧರ್ಮರಾಜನು-ಎಲೆ, ಕೃಷ್ಣನೇ ! ನನಗೆ ಭೀಮಾರ್ಜುನರಿಬ್ಬರೂ ಎರಡು ಕಣ್ಣುಗಳು, ನೀನು ನನ್ನ ಹೃದಯವು. ಈ ಮೂರು ಮಂದಿಯನ್ನೂ ಬಿಟ್ಟು ಹೇಗಿರಲಿ ? ಎಂಬ ಇದೊಂದು ಆಲೋಚನೆಯೇ ಹೊರತು ಇನ್ನೊಂದು ಯೋಚನೆಯೂ ಇಲ್ಲ, ನೀನು ಸಹಾಯಕನಾಗಿರುವಲ್ಲಿ ಭೀಮ ಸೇನನು ಆ ಜರಾಸಂಧನನ್ನು ಜಯಿಸುವುದು ಅತಿಶಯವೇನು ! ಎಂದು ಹೇಳಿ ಭೀಮಾ ರ್ಜುರನ್ನು ಕರೆದು ಕೃಷ್ಣನ ಸ್ವಾಧೀನಕ್ಕೆ ಕೊಟ್ಟನು ಆಗ ಕೃಷ್ಣನು ಭೀಮಾರ್ಜುನರೊ ಡನೆ ಯುಧಿಷ್ಠಿರನಿಗೆ ಅಡ್ಡ ಬಿದ್ದು ಆತನ ಹರಕೆಯನ್ನು ಕೈಕೊಂಡು ಅಲ್ಲಿಂದ ಹೊರಟು ಬಹಳವಾದ ಬೆಟ್ಟಗುಡ್ಡಗಳನ್ನೂ ಎಡೆಬಿಡದೆ ದಟ್ಟವಾಗಿ ಬೆಳೆದಿರುವ ಕಾಡುಗಳನ್ನೂ ಹರಿಯುವ ಹೊಳೆಹಳ್ಳಗಳನ್ನೂ ದಾಟಿ ಸರಯೂ ನದಿಯನ್ನು ಹಾಯ್ದು ಪೂರ್ವ
ಪುಟ:ಕಥಾಸಂಗ್ರಹ ಸಂಪುಟ ೧.djvu/೨೦೪
ಗೋಚರ