ಕಥಾಸಂಗ್ರಹ-೬ನೆಯ ಭಾಗ 193 ಕೋಸಲ ಮಿಥಿಲಾದೇಶಗಳನ್ನು ಕಳೆದು ಗಂಗಾನದಿಯನ್ನು ಅತಿಕ್ರಮಿಸಿ ನಿತ್ಯ ಪ್ರಯಾಣಗಳಿಂದ ಮಗಧದೇಶವನ್ನು ಹೊಕ್ಕು ಅಲ್ಲಿ ಪ್ರಸಿದ್ಧ ಮಾಗಿರುವ ಗೋರಧ ವೆಂಬ ಬೆಟ್ಟವನ್ನು ಏರಿ ಗಿರಿವ್ರಜ ಪರ್ವತವನ್ನು ನೋಡಿ ಅಪೂರ್ವವಾದ ಅದರ ಚಂದಕ್ಕೂ ಸಮೃದ್ಧಿಗೂ ಆಶ್ಚರ್ಯಪಟ್ಟು ಭೀಮಾರ್ಜುನರೊಡನೆ--ಗೋರಥ ಋಷಭ ನೈಹಾರ ಋಷಗಿರಿ ಚೈತ್ರಕಾರಿ ಎಂಬ ಐದು ಪರ್ವತಗಳು ಭಟರ ಹಾಗೆ ಈ ಪರ್ವತದ ಸುತ್ತಲೂ ಇರುವುದರಿಂದ ಈ ಪಟ್ಟಣಕ್ಕೆ ಗಿರಿಜವೆಂಬ ಹೆಸರಾಯಿತು, ಮೊದಲು ಈ ಸ್ಥಳದಲ್ಲಿ ಗೌತಮ ಮಹಾಮುನಿಯು ತನ್ನ ತಪೋ ಮಹಿಮೆಯಿಂದ ಹದಿನಾರು ಮಂದಿ ಋಷಿಗಳನ್ನು ಸೃಷ್ಟಿಸಿದನು. ಅವರ ಅನುಗ್ರಹದಿಂದಲೂ ಈ ದುರ್ಗದ ಬಲ ದಿಂದಲೂ ಇಲ್ಲಿನ ಅರಸುಗಳನ್ನು ಯಾರೂ ಗೆಲ್ಲಲಾರರು ಎಂದು ಹೇಳುತ್ತಾ ಬಾಗಿಲು ಗಳಲ್ಲಿ ಹೋಗದೆ ಚೈತ್ರಗಿರಿಯ ಶಿಖರವನ್ನು ಏರಿ ಅಲ್ಲಿ ಇದ್ದ ಮೂರು ಭೇರಿಗಳನ್ನು ಕಂಡು ಮೊದಲು ಮಾಗಧರು ಮಾನುಷಾದವೆಂಬ ಎತ್ತನ್ನು ಕೊಂದು ಅದರ ಚರ್ಮ ದಿಂದ ಇವುಗಳನ್ನು ಮಾಡಿ ಇದ್ದಾರೆ. ಈ ಪಟ್ಟಣಕ್ಕೆ ಹಗೆಗಳಾದವರು ಹೊಕ್ಕರೆ ಇವು ಋಷಿಗಳ ಮಹಿಮೆಯಿಂದ ತಮ್ಮಿಂದ ತಾವೇ ಶಬ್ದಗಳನ್ನು ಮಾಡುವುವು ಎಂದು ತಿಳಿಸಿದನು. ತರುವಾಯ ಮೂರು ಮಂದಿಯ ತಮ್ಮ ಗಟ್ಟಿಯಾದ ಮುಷ್ಟಿಗಳಿಂದ ಅವುಗಳನ್ನು ಒಡೆದು ಅಲ್ಲಿನ ಬಾಗಿಲಿಂದ ಹೋಗಿ ಗ್ರಾಮ ಪ್ರವೇಶವನ್ನು ಮಾಡಿ ಹೂವಾಡಿಗನ ಮನೆಗೂ ಗಂದಿಗನ ಮನೆಗೂ ನುಗ್ಗಿ ಬಲಾತ್ಕಾರದಿಂದ ಹೂವಿನ ಮಾಲಿಕೆಗಳನ್ನೂ ಪರಿಮಳದ್ರವ್ಯಗಳನ್ನೂ ತೆಗೆದು ಅಲಂಕರಿಸಿಕೊಂಡು ರಾಜವೀಧಿಯಲ್ಲಿ ಬಂದು ಯಾವಾಗಲೂ ಬ್ರಾಹ್ಮಣರು ಹೋಗುವುದಕ್ಕೆ ಪ್ರತಿಬಂಧಕವಿಲ್ಲದ ಜರಾ ಸಂಧನ ಮಂದಿರದ ಗೋವಾಸವನ್ನು ಸಿಂಹಗಳು ಹಿಮವತ್ಪರ್ವತದ ಗುಹೆಯನ್ನು ಹೊಗುವ ಹಾಗೆ ಬ್ರಾಹ್ಮಣ ವೇಷಗಳಿಂದ ಹೊಕ್ಕರು. ಆಗ ಅರ್ಧರಾತ್ರಿಯಲ್ಲಿಯಾದರೂ ಅಭ್ಯಾಗತರಾಗಿ ಬ್ರಾಹ್ಮಣರು ಒಂದರೆ ಆ ಕ್ಷಣದಲ್ಲಿಯೇ ಎದುರೊ೦ಡು ಹೋಗಿ ಅವರನ್ನು ಕರೆದುಕೊಂಡು ಬಂದು ಪೂಜೆ ಯನ್ನು ಮಾಡುವಂಧ ಪದ್ದತಿಯನ್ನು ಅನುಸರಿಸಿರುವ ಜರಾಸಂಧನು ಈ ಮರು ಮಂದಿಯನ್ನೂ ಬ್ರಾಹ್ಮಣರೆಂದೇ ತಿಳಿದು ಎದುರಾಗಿ ಬಂದು ಕರತಂದು ಪೀಠಗಳ ಮೇಲೆ ಕುಳ್ಳಿರಿಸಿ ಸಂತೋಷದಿಂದ ಪೂಜೆಗಳನ್ನು ಮಾಡಲು ಇವರು ಅವುಗಳನ್ನು ಕೈಕೊಳ್ಳದೆ ಗರ್ವದಿಂದ ನಿಂತಿರುವುದನ್ನು ನೋಡಿ ಕಪಟಿಗಳೆಂದು ತಿಳಿದು ಇವರನ್ನು ಕುರಿತು-ಅಯ್ಯಾ ! ನೀವು ಸ್ವಾ ತಕರಾಗಿದ್ದರೆ ಬಿಯಿಂದ ಪುಷ್ಪಗಂಧಗಳನ್ನು ತೆಗೆದುಕೊಂಡು ಹೋಗುವುದಕ್ಕೆ ಅಡ್ಡಿಯಾಗಿರುವಬಾಗಿಲಲ್ಲಿ ಒ೦ದು ನನಗೆ ಆಪಕಾರ ವನ್ನು ಮಾಡಿದುದಲ್ಲದೆ ನಾನು ಮಾಡುವ ಪೂಜೆಯನ್ನೂ ಕೈಕೊಳ್ಳದೆ ಇರುವುದೇನು? ನೀವು ವೇಷಧಾರಿಗಳಂತಿರುವಿರಿ, ನಿಮ್ಮಲ್ಲಿ ವೇಷದಿಂದ ಬ್ರಾಹ್ಮಣತ್ವವೂ ಉದ್ದವಾ ಗಿಯ ದಪ್ಪವಾಗಿಯೂ ಇರುವ ತೋಳುಗಳೂ ಅಗಲವಾದ ಎದೆಗಳೂ ಉಳ್ಳ ರಾಜ ಲಕ್ಷಣಗಳಿಂದ ಕ್ಷತ್ರಿಯತ್ವವೂ ತೋರುತ್ತದೆ ಎಂದು ಹೇಳಿದನು. ಅದಕ್ಕೆ ಕೃಷ್ಣನುಎಲೈ, ಅರಸೇ ! ನಾವು ಕ್ಷತ್ರಿಯ ಜಾತಿಯ ಸ್ಮಾ ತಕರಾಗಿರುವೆವು, ಮತ್ತು ಆಟಂಕ 13
ಪುಟ:ಕಥಾಸಂಗ್ರಹ ಸಂಪುಟ ೧.djvu/೨೦೫
ಗೋಚರ