ಪುಟ:ಕಥಾಸಂಗ್ರಹ ಸಂಪುಟ ೧.djvu/೨೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

194 KANARESE SELECTIONS—PART III ವುಳ್ಳ ಬಾಗಿಲಲ್ಲಿ ಹೋಗುವುದು ಹಗೆಗಳ ಮನೆಗೆ ಬರುವ ಬಾಹುವೀರ್ಯಸಂಪನ್ನರಾ ಕ್ಷತ್ರಿಯರಿಗೆ ಧರ್ಮವು, ಪುಷ್ಪಗಂಧಗಳಲ್ಲಿ ಲಕ್ಷ್ಮಿ ಇರುವ ಕಾರಣ ಅವುಗಳನ ಬಳ್ಮೆಯಿಂದ ತೆಗೆದು ಧರಿಸಿಕೊಂಡೆವು ನಿನ್ನಲ್ಲಿ ನಮಗೆ ಬೇರೆ ಕೆಲಸವಿರುವುದರಿ ಈಗ ನೀನು ಮಾಡುವ ಪೂಜೆಗಳನ್ನು ಕೈಕೊಳ್ಳದೆ ಬಿಟ್ಟೆವು ಎಂದು ಹೇಳಿದನು. ಅದನ್ನು ಕೇಳಿ ಜರಾಸಂಧನು--ನೀವು ನನಗೂ ನಾನು ನಿಮಗೂ ಎಂದಿಗೆ ದ್ರೋಹವನ್ನು ಮಾಡಿದುದಿಲ್ಲ, ನಿಷ್ಕಾರಣವಾಗಿ ನಿಮಗೂ ನನಗೂ ಹಗೆತನವು ಹೆ ಉಂಟಾಯಿತು ? ಮತ್ತು ನಾನು ದೇವತೆಗಳಿಗೂ ಮುನಿಗಳಿಗೂ ಬ್ರಾಹ್ಮಣರಿಗೆ ಭಕ್ತನಾಗಿಯೂ ಉತ್ತಮವಾದ ಕ್ಷತ್ರಿಯ ಕುಲಾಚಾರವುಳ್ಳವನಾಗಿಯೂ ಇದೆ ಎಂದು ಹೇಳಿದನು. ಅದಕ್ಕೆ ಕೃಷ್ಣನು--ಅಯ್ಯಾ ! ಈಗ ನಾವು ಯಾವನು ಹೆಚ್ಚಾ ತನ್ನ ಅಭಿವೃದ್ಧಿ ಗಾಗಿ ಎಲ್ಲಾ ನೃಪಕುಲದವರನ್ನೂ ಪಾಪಭೀತಿಯಿಲ್ಲದೆ ದಿನಂಪ್ರತಿರಿ ಲ್ಲಿಯ ಕೊಲ್ಲು ವನೋ ಅಂಥಾ ದುಷ್ಟನನ್ನು ಕೊಲ್ಲುವುದಕ್ಕೆ ಬಂದೆವು. ನೀ ಬಹಳ ಉತ್ತಮ ಕ್ಷತ್ರಿಯನೆಂದು ಹೇಳಿಕೊಂಡೆಯಲ್ಲಿ ! ನಿನ್ನ ಪ್ರಯೋಜನಕ್ಕೊಸ್ಕ ಉತ್ತಮರೂ ನಿರಪರಾಧಿಗಳೂ ಆದ ಅರಸುಮಕ್ಕಳನ್ನು ಹಿಡಿದು ಸೆರೆಯಲ್ಲಿ ಹಾ ದಿನವಹಿ ಭೈರವನಿಗೆ ನರಬಲಿಯನ್ನು ಕೊಡುವ ನಿನ್ನಂಥಾ ಅರಸುಗಳು ಪೂರ್ವದ ಯಾರಾದರೂ ಇದ್ದರೇ ? ಲೋಕದಲ್ಲಿ ಇದಕ್ಕಿಂತಲೂ ಹೆಚ್ಚಾದ ಪಾಸ ಉಂಟೇ ನೀನು ಈ ಪ್ರಕಾರವಾದ ಪಾಪಾಚರಣೆಯಿಂದ ಭೈರವ ಪೂಜೆಯನ್ನು ಮಾಡಿದರೆ ಸ। ತಿಯನ್ನು ಹೊಂದಲಾರೆ ಆದಕಾರಣ ನಿನಗೆ ಬುದ್ದಿ ಇದ್ದರೆ ನೀನು ಸೆರೆಯಲ್ಲಿ ಇಟ್ಟಿರು ಅರಸುಮಕ್ಕಳನ್ನು ನನ್ನ ಮಾತಿನ ಪ್ರಕಾರ ಬೇಗನೆ ಬಿಟ್ಟು ಕಳುಹಿಸು. ನಾ ಕೃಷ್ಣನು ಇವನು ಭೀಮನು, ಈತನು ಅರ್ಜುನನು, ಇದರ ಮೇಲೂ ನೀನೆ ಮರನಾಗಿ ಅರಸುಗಳನ್ನು ಬಿಡದೆ ಇದ್ದರೆ ಈ ಕ್ಷಣದಲ್ಲಿಯೇ ಈ ಪಾಂಡವರಿ ನಿನ್ನ ನ್ನು ಕೊಂದು ಅವರನ್ನು ಬಿಡಿಸುವರು ಎಂದು ಹೇಳಿದನು. “ ಆ ಮಾತನ್ನು ಕೇಳಿದೊಡನೆ ಜರಾಸಂಧನು ಹಸಿದ ಹೆಬ್ಬುಲಿಯಂತೆ ರೌದ್ರ ಕಾರನಾಗಿ ಎಲೋ, ಕೃಷ್ಣನೆ ! ನನ್ನನ್ನು ನೀನು ಮೊದಲು ನೋಡಿಲ್ಲವೇ ? ಲೋ ದಲ್ಲಿ ಕ್ಷತ್ರಿಯನಾಗಿ ಹುಟ್ಟಿ ದವನು ಸಕಲ ಅರಸುಗಳನ್ನೂ ಗೆದ್ದು ಪ್ರಸಿದ್ಧನಾಗಿ ಇದು ಧರ್ಮವಾಗಿಲ್ಲವೋ ? ದೇವತಾ ನಿಮಿತ್ತವಾಗಿ ನಾನು ಹಿಡಿದುತಂದಿರುವ ಆ ಸುಗಳನ್ನೂ ಎಂದಿಗೂ ಬಿಡುವುದಿಲ್ಲ, ಸನ್ನದ್ಧವಾಗಿ ನಿಂತು ನಿಮ್ಮ ಸೇನೆಯ ನಮ್ಮ ಸೇನೆಯ ಕೂಡಿ ಜಗಳವನ್ನು ಮಾಡಬೇಕೋ ? ಇಲ್ಲವೆ ನಿಮ್ಮ ಮನ ಸಂಗಡವಾಗಲಿ ಒಬ್ಬನ ಸಂಗಡವಾಗಲಿ ಯುದ್ಧ ವನ್ನು ಮಾಡಬೇಕೋ ? ನಿಮ ಇಷ್ಟವಾಗಿರುವ ಮೇರೆಗೆ ಯುದ್ಧಕ್ಕೆ ಬರುವೆನು, ಅದನ್ನು ತಿಳಿಸಿರಿ ಎಂದು ಹೇಳe ಕೃಷ್ಣನು ನಕ್ಕು-ಒಬ್ಬನೊಡನೆ ಮೂರು ಮಂದಿಯ ಕಾಡುವುದು ನ್ಯಾಯವಲ್ಲ ನಮ್ಮ ಮೂವರಲ್ಲಿ ನೀನು ಒಬ್ಬನನ್ನು ಅಪೇಕ್ಷಿಸಿದರೆ ಅವನು ಮಲ್ಲ ಯುದ್ಧವನ ಮಾಡಿ ನಿನ್ನನ್ನು ಗೆಲ್ಲುವನೆಂದು ಹೇಳಿದನು. ಜರಾಸಂಧನು ಗದ್ಯದಿಂದ-ಭೀವ ಸೇನನೊಡನೆ ಮಲ್ಲ ಯುದ್ಧವನ್ನು ಮಾಡುವೆನು ಎಂದು ಹೇಳಿ ಕೂಡಲೆ ತನ್ನ ಮ