ಕಥಾಸಂಗ್ರಹ-೩ನೆಯ ಭಾಗ 195 ಈ " ಈ ಕ ನಾದ ಸಹದೇವನೆಂಬುವನಿಗೆ ತನ್ನ ರಾಜ್ಯದ ಪಟ್ಟಾಭಿಷೇಕವನ್ನು ಮಾಡಿ ಯುದ್ಧ ರಂಗಸ್ಥಳದಲ್ಲಿ ಬಂದು ನಿಂತನು. ಆಗ ಭೀಮಸೇನನೂ ಬಂದು ಎದುರಾಗಿ ನಿಂತನು? ಬಳಿಕ ಇಬ್ಬರೂ ತೋಳುಗಳನ್ನು ತಟ್ಟಿಕೊಂಡು ಒಬ್ಬರನ್ನೊಬ್ಬರು ತಗಲಿ ನಾನಾ ಚಮತ್ಕಾರಗಳಿಂದ ಹದಿನೈದು ದಿವಸಗಳ ವರೆಗೂ ಜಗಳವನ್ನು ಮಾಡುತ್ತಿದ್ದರು. ಹೀಗಿರುವಲ್ಲಿ ಭೀಮಸೇನನು ತನ್ನ ತಂದೆಯಾದ ವಾಯುವನ್ನು ನೆನೆದು ಕೃಷ್ಣನ ಅನುಗ್ರಹದಿಂದ ಬಹುಸಾಹಸವನ್ನು ಮಾಡಿ ಜರಾಸಂಧನನ್ನು ಹಿಡಿದುಕೊಂಡು ಮೇಲಕ್ಕೆ ಎತ್ತಿ ಚಕ್ರಾಕಾರವಾಗಿ ತಿರುಗಿಸಿ ಮೂಗಿನಲ್ಲಿಯ ಬಾಯಿಯಲ್ಲಿಯ ಕಿವಿಗಳ ಕನ್ನ ಗಳಲ್ಲಿಯ ರಕ್ತಧಾರೆಗಳು ಸುರಿಯುವ ಹಾಗೆ ಭೂಮಿಯಲ್ಲಿ ಬಡಿದು ಅಂಗಾಂಗಗಳನ್ನೆಲ್ಲ ಮುರಿದು ಕಾಲುಗಳಿಂದ ಚನ್ನಾಗಿ ಹೊಸಕಿ ಕೊಂದ ಹಾಕಿದನು. ಆಗ ಕೃಷ್ಣನು ಆತನ ಮಗನಾದ ಸಹದೇವನಿಗೆ ಅಭಯದಾನವನ್ನು ಮಾಡಿ ಜರಾಸಂಧನು ಸೆರೆಯಲ್ಲಿ ಹಾಕಿದ್ದ ದೊರೆಗಳನ್ನೆಲ್ಲಾ ಬಿಡಿಸಿ ಅವರನ್ನು ಕುರಿತು ನೀವು ಚಕ್ರವರ್ತಿಯಾದ ಧರ್ಮರಾಜನು ಮಾಡುವ ರಾಜಸೂಯಯಾಗಕ್ಕೆ ನಿಮ್ಮಲ್ಲಿ ರುವ ಅಮೂಲ್ಯ ವಸ್ತುಗಳನ್ನು ತೆಗೆದು ಕೊಂಡು ಬರಬೇಕು ಈಗ ನಿಮ್ಮ ನಿಮ್ಮ ಪಟ್ಟಿ ಣಕ್ಕೆ ಹೋಗಿರಿ ಎಂದು ಅಪ್ಪಣೆಯನ್ನು ಕೊಟ್ಟು ಅವರನ್ನು ಕಳುಹಿಸಿದನು, ಆ ಮೇಲೆ ಜರಾಸಂಧನ ಮಗನಾದ ಸಹದೇವನು ಕೊಟ್ಟ ಕೈಗಾಣಿಕೆಯನ್ನು ತೆಗೆದುಕೊಂಡು ಆತನಿಗೂ ಧರ್ಮರಾಜನ ಯಜ್ಞಕ್ಕೆ ಬರುವಂತೆ ಅಪ್ಪಣೆಕೊಟ್ಟು ಆ ಜರಾಸಂಧನ ರಥ ವನ್ನು ತೆಗೆದುಕೊಂಡು ಗರುಡನನ್ನು ನೆನಸಿ ಒರಮಾಡಿ ಅವನನ್ನು ಸಾರಥ್ಯದಲ್ಲಿ ನಿಯೋಗಿಸಿ ಭೀಮಾರ್ಜುನರು ಸಹಿತವಾಗಿ ಕೃಷ್ಣನು ಇಂದ್ರಪ್ರಸ್ಥಕ್ಕೆ ಬಂದು ಧರ್ಮ ರಾಜನನ್ನು ಕಂಡು ಮರು ದಿವಸ ಅಲ್ಲಿ ಇದ್ದು ಆ ಮೇಲೆ ಧರ್ಮರಾಜನ ಅಪ್ಪಣೆ ಯನ್ನು ತೆಗೆದು ಕೊಂಡು ಅಲ್ಲಿಂದ ಹೊರಟು ದ್ವಾರಕಾ ಪಟ್ಟಣಕ್ಕೆ ಬಂದು ಜರಾ ಸಂಧನನ್ನು ಕೊಂದುಹಾಕಿದ ಸುದ್ದಿಯನ್ನು ತನ್ನ ವರಿಗೆಲ್ಲ ಹೇಳಲು ಅವರೆಲ್ಲರೂ ಸಂತೋಷಪಟ್ಟ ರು. ಇತ್ತಲಾ ಧರ್ಮರಾಜನು ದಿಗಿಜಯಾರ್ಧವಾಗಿ ಮೂಡಣದಿಕಿಗೆ ಭೀಮಸೇನ ನನ್ನೂ ಬಡಗಣ ದಿಕ್ಕಿಗೆ ಅರ್ಜುನನನ್ನೂ ಪಡುವಣ ದಿಕ್ಕಿಗೆ ನಕುಲನನ್ನೂ ತೆಂಕಣ ದಿಕ್ಕಿಗೆ ಸಹದೇವನನ್ನೂ ಕಳುಹಿಸಲು ಆ ನಾಲ್ಕು ಮಂದಿಯ ಸಕಲಸೇನಾಸ ಮೇತರಾಗಿ ತಮತಮಗೆ ಕಟ್ಟು ಮಾಡಿದ ದಿಕ್ಕುಗಳಿಗೆ ಹೋಗಿ ಆಯಾ ದಿಕ್ಕಿನ ಅರಸು ಗಳನ್ನು ಗೆದ್ದು ಅವರುಗಳಿಂದ ಅನೇಕ ದ್ರವ್ಯ ವಸ್ತು ವಾಹನ ಮೊದಲಾದುವುಗಳನ್ನು ಕಪ್ಪವಾಗಿ ತೆಗೆದುಕೊಂಡು ತಿರಿಗಿ ಇಂದ್ರಪ್ರಸ್ಥಕ್ಕೆ ಬಂದು ತಾವು ತಾವು ತಂದ ಮಿತಿ ಯಿಲ್ಲದ ಧನಕನಕಾದಿ ಸಮಸ್ತ ಪದಾರ್ಥಗಳನ್ನು ಯುಧಿಷ್ಠಿರನಿಗೆ ಒಪ್ಪಿಸಲು ಆ ಬಳಿಕ ಕಪ್ಪದ ಪದಾರ್ಧಗಳಿಂದ ಇಂದ್ರಪ್ರಸ್ಥ ಪಟ್ಟಣವೆಲ್ಲಾ ತುಂಬಿ ಶೋಭಿಸು ತಿದ್ದಿತು. ಆಗ ಶ್ರೀ ಕೃಷ್ಣನು ದ್ವಾರಕಾ ಪಟ್ಟಣದಿಂದ ವಸುದೇವ ಬಲರಾಮ ಅಕ್ಷರ ಸಾತ್ಯಕಿ ಮೊದಲಾದ ಬಂಧುಗಳೊಡನೆಯಡಿ ದೇವಕಿ ರೋಹಿಣಿ ರುಶ್ಮಿಣಿ ಸತ್ಯಭಾಮೆ
ಪುಟ:ಕಥಾಸಂಗ್ರಹ ಸಂಪುಟ ೧.djvu/೨೦೭
ಗೋಚರ