ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೨೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

196 KANARESE SELECTIONS-PART III ಮೊದಲಾದ ಕಾಣಿವಾಸಗಳೊಡನೆಯ ಬಂದು ಬಹಳವಾದ ಧನ ಕನಕ ರತ್ನ ವಸ್ತು ವಾಹನಾದಿಗಳನ್ನು ಧರ್ಮರಾಜನಿಗೆ ಒಪ್ಪಿಸಿ ಆತನಿಂದ ಪೂಜಿತನಾದನು, ಹಾಗೆಯೇ ಸಕಲದೇಶದ ಅರಸುಗಳೂ ಬಂದು ಅಪರಿಮಿತವಾದ ಕಪ್ಪಕಾಣಿಕೆಗಳನ್ನು ಧರ್ಮರಾ ಜನಿಗೆ ಒಪ್ಪಿಸಿ ಆತನಿಂದ ಪೂಜಿತರಾಗಿ ಆತನು ಮಾಡಿಸಿ ಕೊಟ್ಟ ಬಿಡಾರಗಳಲ್ಲಿ ಇಳಿದು ಕೊಂಡರು ಆ ಮೇಲೆ ಧರ್ಮರಾಜನು ಕೃಷ್ಣನ ಸವಿಾಪಕ್ಕೆ ಬಂದು -ನಿನ್ನ ಕಟಾಕ್ಷದಿಂದ ನನ್ನ ತಮ್ಮಂದಿರು ಸಕಲದೇಶಗಳನ್ನೂ ಜಯಿಸಿ ಕಪ್ಪ ಗಳನ್ನು ತೆಗೆದುಕೊಂಡು ಬಂದರು. ಇನ್ನು ಮೇಲೆ ನನಗೆ ರಾಜಸೂಯಯಾಗ ವನ್ನು ಮಾಡುವುದಕ್ಕೆ ಅಪ್ಪಣೆಯನ್ನು ಕೊಡು ಎಂದು ಬಿನ್ನವಿಸಿ ಆತನ ಅಪ್ಪಣೆಯ ಪ್ರಕಾರ ಯಜ್ಞವನ್ನು ಮಾಡಲಾರಂಭಿಸಿ ಸಹದೇವನನ್ನು ಕರೆದು--ನೀನು ನಮ್ಮ ಪುರೋಹಿತನಾದ ದೌಮ್ಯರು ಹೇಳಿದ ಪ್ರಕಾರ ಯಜ್ಞ ಸಾಧನಗಳಾದ ಸಾಮಗ್ರಿ ಗಳನ್ನು ಒದಗಿಸುವಂತೆ ಶಿಲ್ಪಿಗಳನ್ನೂ ಅವರು ಹೇಳಿದ ಕೆಲಸಗಳನ್ನೆಲ್ಲಾ ಸಿದ್ಧ ಪಡಿಸಿ ಕೊಡುವಹಾಗೆ ಇಂದ್ರಸೇನ ಮೊದಲಾದವರನ್ನೂ ಅರ್ಜುನನ ಸಾರಧಿಯಾದ ರುಕ್ಕ ನನ್ನೂ ನಿಯೋಗಿಸು, ಯಜ್ಞಶಾಲೆಯ ಸುತ್ತಲೂ ನಾನಾ ದೇಶಗಳಿಂದ ಬಂದಿರುವ ಅರಸುಗಳಿಗೆ ಮನೆಗಳನ್ನೂ ಸಿದ್ಧ ಪಡಿಸು. ಸಕಲಭೂಮಂಡಲಗಳಲ್ಲಿರುವ ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರಾದಿ 'ಸಕಲಜಾತಿಯವರನ್ನೂ ಕರಿಸೆಂದು ಅಪ್ಪಣೆಯನ್ನು ಕೊಡಿಸಿದನು. ಅನಂತರದಲ್ಲಿ ಸಹದೇವನು ಆ ಪ್ರಕಾರವೇ ಇಂದ್ರಸೇನಾದಿಗಳನ್ನೂ ಆನೇಕ ಶಿಲ್ಪಿಗಳನ್ನೂ ನಿಯೋಗಿಸಿದನು. ಅವರು ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ಎಲ್ಲರ ಕಣ್ಣಿಗೂ ಚೆಲುವಾಗಿರುವಂತೆ ಯಜ್ಞಶಾಲೆಯನ್ನು ನಿರ್ಮಿಸಿ ಅದರೊಳಗೆ ಎಲ್ಲ ಯಜ್ಞ ಸಾಮಗ್ರಿಗಳನ್ನೂ ತಂದು ಒಟ್ಟಿ ಆ ಶಾಲೆಯ ಸುತ್ತಲೂ ಬಹಳ ಗೃಹಗಳನ್ನು ಸುಂದರವಾಗಿ ನಿರ್ಮಿಸಿ ಅವುಗಳಲ್ಲಿ ಎಲ್ಲ ಸಂಭಾರಗಳನ್ನೂ ತುಂಬಿ ಮತ್ತು ಇಂದ್ರಪ್ರಸ್ಥ ಪುರದ ಸುತ್ತಮುತ್ತಲು ಬಹು ವಿಧವಾದ ನೋಟದ ಮನೆಗೆ ಳನ್ನೂ ಹೂದೋಟಗಳನ್ನೂ ಅಂದವಾದ ಭಾವಿಗಳನ್ನೂ ಕೊಳಗಳನ್ನೂ ನಿರ್ಮಿಸಿ ದರು, ಮತ್ತು ಹೆಂಡತಿ ಮಕ್ಕಳು ಅಣ್ಣ ತಮ್ಮಂದಿರು ನೆಂಟರಿಷ್ಟರು ಮೊದಲಾದ ಪರಿ ವಾರ ಜನರೊಡನೆ ಕೂಡಿ ಬಂದಿರುವ ನಾನಾ ದೇಶದ ಅರಸುಗಳೂ ದೀಪಾಂತರಗ ಇಲ್ಲಿ ವಾಸಿಸುವ ಅರಸುಗಳೂ ಹಿಮವತ್ಪರ್ವತದಲ್ಲಿರುವ ಹದಿನಾರು ಮಂದಿ ಅರಸು ಗಳೂ ಇವರೇ ಮೊದಲಾಗಿ ಚತುಸ್ಸಮುದ್ರಗಳಿಂದ ಕೂಡಿರುವ ಭೂಮಂಡಲದ ಭೂಪತಿಗಳೆಲ್ಲರೂ ವೇದ ವೇದಾಂಗಾದಿ ವಿದ್ಯಾಪಾರಂಗತರಾದ ಬ್ರಾಹ್ಮಣರಿಗೂ ಕೋಮಟಿಗರಿಗೂ ಶೂದ್ರರಿಗೂ ಮನೆಗಳನ್ನು ಕಲ್ಪಿಸಿ ಆಯಾ ಮನೆಗಳಲ್ಲಿ ಸಕಲ ಸಾಮಗ್ರಿಗಳನ್ನೂ ತುಂಬಿಸಿ ಹೇಳಿದ ಕೆಲಸವನ್ನು ಮಾಡುವುದಕ್ಕೆ ದಾಸದಾಸಿಯ ಜನಗಳನ್ನು ನೇಮಿಸಿ ಅವರವರ ಯೋಗ್ಯತಾನುಸಾರವಾಗಿ ಆಯಾ ಮನೆಗಳಲ್ಲಿ ಇಳಿಸಿ ಪರಾಂಬರಿಕೆ ತೆಗೆದು ಕೊಳ್ಳುತ್ತಾ ಬಂದನು. ಆ ಬಳಿಕ ಧರ್ಮರಾಜನು ಭೀಷ್ಮಾದಿ ಬಂಧುಜನಗಳನ್ನು ಕರೆದು ಕೊಂಡು ಬರುವುದಕ್ಕೆ ನಕುಲನನ್ನು ಕಳುಹಿಸಿದನು. ಆಗ ರಾಜಸೂಯಯಾಗವನ್ನು ನೋಡ