ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೨೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ೩ನೆಯ ಭಾಗ 197 ಬೇಕೆಂಬ ಆಶೆಯಿಂದ ಬಹು ಧನಗಳನ್ನು ತೆಗೆದು ಕೊಂಡು ಹಸ್ತಿನಾವತಿಯಿಂದ ಇಂದ್ರಪ್ರಸ್ಥ ಪಟ್ಟಣಕ್ಕೆ ಬಂದ ಭೀಷ್ಮ ಧೃತರಾಷ್ಟ್ರ, ವಿದುರ ದ್ರೋಣ ಕೃಪ ಅಶ್ವ ತಾ ಮ ಬಾಹಿಕ ಸೋಮದತ್ತ ಭೂರಿಶ್ರವ ಶಕುನಿ ಸೈಂಧವ ದುಕ್ಕೋಧನ ದುಶ್ಯಾ ಸನ ಮೊದಲಾದವರನ್ನು ಧರ್ಮರಾಜನು ಬಹಳ ಪ್ರೀತಿ ಗೌರವಗಳಿಂದ ಪೂಜಿಸಿ ಅವರೆದುರಿಗೆ ವಿನೀತನಾಗಿ ನಿಂತು ನಿಮ್ಮ ಸಹಾಯದಿಂದ ಈ ಮಹಾ ಯಜ್ಞವನ್ನು ಮಾಡಲಾರಂಭಿಸಿದ್ದೇನೆ, ನೀವೆಲ್ಲರೂ ಈ ಭಾರವನ್ನು ಹೊತ್ತು ಕೊಂಚ ವಾದರೂ ನ್ಯೂನತೆ ಇಲ್ಲದ ಹಾಗೆ ಈ ಕೆಲಸವನ್ನು ನೆರವೇರಿಸಬೇಕೆಂದು ಬೇಡಿಕೊಂಡು ಅವ ರಿಂದ ಅನುಮತಿಯನ್ನು ಹೊಂದಿದನು, ಆ ಮೇಲೆ ಕೃಷ್ಣನ ಅನುಮತಿಯಿಂದ ಚಿನ್ನ ಬೆಳ್ಳಿ ರತ್ನ ಗಳನ್ನು ಕೊಡುವ ಕೆಲಸದಲ್ಲಿ ಕೃಪಾಚಾರ್ಯ ಕೃತವರ್ಮರನ್ನೂ ಇದು ಆಯಿತು ಇದು ಆಗಲಿಲ್ಲ ವೆಂದು ವಿಚಾರಿಸಿಕೊಳ್ಳುವ ಕೆಲಸದಲ್ಲಿ ಭೀಷ್ಮ ದ್ರೋಣ ರನ್ನೂ ನವಧಾನ್ಯಗಳನ್ನು ಒದಗಿಸುವುದೂ ಅವುಗಳನ್ನು ಉಚಿತವಾಗಿ ವೆಚ್ಚ ಮಾಡು ವುದೂ ಈ ಕೆಲಸದಲ್ಲಿ ವಿದುರನನ್ನೂ ನಾನಾ ದೇಶಗಳಿಂದ ಅರಸುಗಳು ತಂದ ಧನಕನಕ ವಸ್ತು ವಾಹನಗಳನ್ನು ಉಚಿತವಾದ ಸ್ಥಳಗಳಲ್ಲಿ ಸೇರಿಸಿ ಪ್ರಕೃತವಿದ್ದ ಹಾಗೆ ಅವುಗ ಳನ್ನು ಉಪಯೋಗಿಸುವ ಕಾರ್ಯದಲ್ಲಿ ಕೌರವನನ್ನೂ ಭಕ್ಷ್ಯಭೋಜ್ಯ ವಿನಿಯೋಗ ಮಾಡಿಸುವಲ್ಲಿ ದುಶ್ಯಾಸನನನ್ನೂ ನಿಯೋಗಿಸಿ ತಾನು ಯಜ್ಞಕ್ಕೆ ದೀಕ್ಷಿತನಾಗಿ ಬ್ರಾಹ್ಮಣರ ಗುಂಪಿನೊಡನೆ ಮಹದೈಶ್ವರ್ಯದಿಂದ ಯಜ್ಞಶಾಲೆಯನ್ನು ಹೊಕ್ಕನು. ಆ ಯಜ್ಞ ಶಾಲೆಯಲ್ಲಿ ವೇದ ಘೋಷಗಳಿಂದಲೂ ಬ್ರಾಹ್ಮಣರ ಆಶೀಲ್ಯಾದ ನಿಗಳಿಂದಲೂ ಅನೇಕವಾದ ವಾದ್ಯನಾದಗಳಿಂದಲೂ ಒಬ್ಬರ ಮಾತು ಮತ್ತೊಬ್ಬರಿಗೆ ತಿಳಿಯದ ಹಾಗೆ ಇದ್ದಿತು. ಆ ಸಮಯದಲ್ಲಿ ವೇದಮರಿಗಳಾದ ಪೈಲ ದೌಮ್ಯರು ಹೊರತಾಗಿ ಯಾಜ್ಞವಲ್ಯ ಋಷಿಯು ಅಧ್ಯಯ್ಯುವಾಗಿಯ ಬೈಪಾಯನನು ಬ್ರಹ್ಮ ಸ್ಥಾನಾಪನ್ನ ನಾಗಿಯ ಸುನಾಮನು ಉದ್ದಾತೃವಾಗಿಯೂ ಮಿಕ್ಕಿ ಮಹಾ ಮುನಿಗಳೆ ಲ್ಲರೂ ಬ್ರಾಹ್ಮಣ್ಯರಾಗಿಯ ನಾರದಾದಿ ಮಹಾ ಮುನೀಂದ್ರರು ಸದಸ್ಯರಾಗಿ ಭೀಷ್ಮಾದಿ ರಾಜರ್ಷಿಗಳು ಸಭಾಸದರಾಗಿಯೂ ಕುಳಿತು ಕೊಂಡಿರಲು ಆ ಮಹಾ ಯಜ್ಞವು ಸ್ವಲ್ಪವಾದರೂ ಮಂತ್ರಲೋಪ ಕೈಯಲೋಪ ಮೊದಲಾದುವುಗಳುಂಟಾ ಗದಂತೆ ಸಕಲ ಜನ ಸಮ್ಮತಿಯಿಂದ ನಿಷ್ಟ ವಾಗಿ ಬೆಳೆಯಿತು. - ಆ ಯಜ್ಞದಲ್ಲಿ ಅಗ್ನಿ ಮುಖದಲ್ಲಿ ವಿಸ್ತಾರವಾದ ಮಂತ್ರಾಹುತಿಗಳಿಂದ ಸಕಲ ದೇವತೆಗಳ ಸಂಪೂಕ್ತವಾದ ದಕ್ಷಿಣೆಗಳಿಂದ ಸರ್ವ ಬ್ರಾಹ್ಮಣರೂ ಯೋಗ್ಯ ವಾದ ಮನ್ನಣೆಗಳಿಂದ ಎಲ್ಲಾ ಅರಸುಗಳೂ ಇಷ್ಟವಾದ ಭೋಜನ ವಸ್ತ್ರಾಭರಣ ಮೊದಲಾದುವುಗಳಿಂದ ಭೂಮಿಯ ಪ್ರಜೆಗಳೂ ಬೇಡಿದ ವಸ್ತುಗಳ ಲಾಭದಿಂದ ಸಕಲ ಯಾಚಕರೂ ತಣಿದರು, ಮತ್ತು ಧಮ್ಮರಾಜನು ಯಜ್ಞವನ್ನು ಮಾಡಿಸುವುದಕ್ಕೆ ನೇಮಿಸಲ್ಪಟ್ಟಿದ್ದ ಅಧ್ವರಿ ಬ್ರಹ್ಮ ಉದ್ಧಾತೃ ಹೋತೃಸದಸ್ಯರು ಈ ಮೊದಲಾದ ಬ್ರಾಹ್ಮಣ ಸಮೂಹಕ್ಕೆ ಬಹಳವಾಗಿ ಧನಕನಕಾದಿ ವಸ್ತುಗಳನ್ನು ಕೊಡಲು ಅವರು ಅವುಗಳನ್ನು ಹೊರೆಗಳಾಗಿ ಕಟ್ಟಿ ಕೊಂಡು ಅವುಗಳನ್ನು ಕೆಲವರು ಹೆಗಲುಗಳಲ್ಲಿ