ಪುಟ:ಕಥಾಸಂಗ್ರಹ ಸಂಪುಟ ೧.djvu/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

198 KANARESE SELECTIONS-PART III ಹೊತ್ತು ಕೊಂಡು ಇನ್ನು ಕೆಲವರು ಶಿಷ್ಯರ ನೆತ್ತಿಗಳಲ್ಲಿ ಹೊರಿಸಿಕೊಂಡು ಸಂತೋಷ ದಿಂದ ಧಕ್ಕರಾಜನಿಗೆ ಆಶೀPಾದವನ್ನು ಮಾಡಿ ಹೊರಟುಹೋದರು. ಆ ಬಳಿಕ ಧರರಾಜನು ಸಕಲವನ್ನೂ ತಿಳಿದವನಾಗಿಯೂ ಕೌರವ ಪಾಂಡವರೆರಡು ಕುಲಕ್ಕೂ ಅಜ್ಜನಾಗಿಯೂ ಇರುವ ಭೀತ್ಯಾಚಾರರ ಬಳಿಗೆ ಬಂದು ನಮಸ್ಕರಿಸಿ ಆತನನ್ನು ಕುರಿತು-ಎಲೈ, ಪ್ರಾಜ್ಞನೇ ! ಈ ರಾಜಸಭೆಯಲ್ಲಿ ಶಿವನಿಗೆ ಸಮಾನರಾಗಿರುವ ಅನೇಕ ಭೂಪಾಲರು ನೆರೆದಿರುವರು. ಇವರಲ್ಲಿ ಮೊದಲು ಯಾರಿಗೆ ಪೂಜೆಯನ್ನು ಮಾಡಬೇಕು ? ಎಂದು ಕೇಳಲು ಭೀಷ್ಮನು ಧರರಾಜನನ್ನು ಕುರಿತು-ಕೇಳಯ್ಯಾ, ಯುಧಿಷ್ಠಿರನೇ ! ನಕ್ಷತ್ರಗಳಲ್ಲಿ ಚಂದ್ರನಂತೆಯ ದೇವತೆಗಳಲ್ಲಿ ಶಿವನಂತೆಯ ದಿಕ್ಕಾಲರಲ್ಲಿ ದೇವೇಂದ್ರನಂತೆಯ ಪರೈತಗಳಲ್ಲಿ ಮೇರುವಿನಂತೆಯ ಸಮುದ್ರಗಳಲ್ಲಿ ಕ್ಷೀರಸಮುದ್ರ ದಂತೆಯ ಈ ಸರ್ವರಲ್ಲಿಯ ಕೃಷ್ಣನೇ ದೊಡ್ಡವನಾದುದರಿಂದ ಆತನನ್ನು ಬಿಟ್ಟರೆ ಈ ಸಭೆಯಲ್ಲಿ ಅಗ್ರಪೂಜೆಗೆ ಯೋಗ್ಯರು ಬೇರೆ ಯಾರಿದ್ದಾರೆ ? ವ್ಯಾಸರೂ ನಾರದರೂ ರೋಮಶರೂ ಇವರೇ ಮೊದಲಾದ ಸಕಲ ಮುನೀಂದ್ರರೂ ಇದ್ದಾರೆ ನೀನು ಅವರ ಬಳಿಗೆ ಹೋಗಿ ಕೃಷ್ಣನು ಅಗ್ರಪೂಜೆಗೆ ಯೋಗ್ಯನೋ ಅಲ್ಲವೋ ಎಂದು ಅವರನ್ನು ಕೇಳು ಎನ್ನಲು ಆ ಮೇಲೆ ಅವರೆಲ್ಲರೂ ಭೀಷ್ಮನು ಹೇಳಿದ ಮಾತಿಗೆ ಒಡಂಬಡಲು ಆಗ ಸಹದೇವನು ಕೃಷ್ಣನಿಗೆ ಕೈಗೊಟ್ಟು ಭಕ್ತಿ ಯಿಂದ ಕರೆದುಕೊಂಡು ಬಂದು ದಿವ್ಯ ಸಿಂಹಾಸನದಲ್ಲಿ ಕುಳ್ಳಿರಿಸಿ ಹರಿವಾಣದಲ್ಲಿ ಗಂಗಾಜಲದಿಂದ ಕೃಷ್ಣನ ಪಾದಗಳನ್ನು ತೊಳೆದು ಹದಿನಾರು ವಿಧವಾದ ಉಪಚಾ ರಗಳಿಂದ ಪೂಜಿಸಿದನು. ಆಗ ದೇವಮುನಿಗಳೂ ಬ್ರಹ್ಮರ್ಷಿಗಳೂ-ಜಯ ಜಯ ! ಎಂದು ಹೊಗಳಿದರು. ಆಕಾಶದಲ್ಲಿ ದೇವದುಂದುಭಿಗಳು ಮೊಳಗಿದುವು. ಆಗ ಅದನ್ನು ನೋಡಿ ಅರಸುಗಳೆಲ್ಲರೂ ಒಬ್ಬರ ಮುಖವನ್ನು ಒಬ್ಬರು ನೋಡಿಕೊಳ್ಳುತ್ತಾ ಕೆಲವರು ಪಾಂಡವರ ಸ್ನೇಹಕ್ಕೂ ಕೆಲವರು ಕೃಷ್ಣನ ಬಲೆಗೂ ಭಯಪಟ್ಟು ಈ ವರ್ತಮಾನವು ನಮಗೇಕೆ ? ಹೇಗಾದರೂ ಆಗಲಿ ಎಂದು ಉದಾ ಸೀನದಿಂದ ಸುಮ್ಮನಿದ್ದರು. ಅವರೊಳಗೆ ಖಳಶಿರೋಮಣಿಯಾದ ಶಿಶುಪಾಲನು ಮಹಾ ಕೋಪಿಷ್ಠನಾಗಿ ಸಹದೇವನನ್ನು ಕುರಿತು...ಏನೆಲಾ ಸಹದೇವ ! ವಸು ಧೆಯ ಮಾನಸಿಧಿಗಳ ಮುಂದೆ ಗೊಲ್ಲರ ಹುಡುಗನನ್ನು ಸಿಂಹಾಸನದ ಮೇಲೆ ಕೂರಿಸಿ ಅವನಿಗೆ ಮೊದಲು ಪೂಜೆಯೇ ? ನೀನು ಅರಿಯದವನು ಈ ಕೃತ್ಯವು ನಿಮ್ಮ ಯಾಗಕ್ಕೆ ಹಾನಿಯಲ್ಲವೇ ? ನಿಮ್ಮ ಹಿರಿಯರು ಇದೇಕೆ ಹೀಗೆ ಹೇಳಿದರು ? ಪಾಂಡು ವಿನ ಮಕ್ಕಳು ಬುದ್ದಿ ಇಲ್ಲದವರೆಂದು ಈಗ ಚನ್ನಾಗಿ ತಿಳಿಯಿತು, ಒಂದು ವೇಳೆ ಈ ಕೃಷ್ಣನು ಯದುವಂಶದಲ್ಲಿಯೇ ಹುಟ್ಟಿದವನಾದಾಗ್ಯೂ ಯದುಕುಲದವರು ಸಿಂಹಾ ಸನಕ್ಕೆ ಹೊರಗು ಎಂಬುವುದನ್ನು ಜಗತ್ತೆಲ್ಲವೂ ತಿಳಿದಿರುವುದಲ್ಲ ವೋ ? ಹೀಗೆಂದು ಪಾಂಡವರನ್ನು ನಿಂದಿಸಿ ಭೀಷ್ಮನನ್ನು ಕುರಿತು-ನೀನು ಮುದುಕನೂ ಜ್ಞಾನವೃದ್ಧನ ಆಗಿ ದನಕರುಗಳನ್ನು ಕಾಯ್ದ ಈ ಗೊಲ್ಲನಿಗೆ ಮೊದಲು ಪೂಜೆಯನ್ನು ಹೇಗೆ ಮಾಡಿ ಸಿದೆ ? ನೀನು ಸಕಲ ವೇದಪುರಾಣೇತಿಹಾಸಗಳನ್ನು ಓದಿದ್ದು ಬದಿಯಲ್ಲಿ ಹೋಮ ಕೈ ಕೈ ಕೈ # # # # # # #