ಪುಟ:ಕಥಾಸಂಗ್ರಹ ಸಂಪುಟ ೧.djvu/೨೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೩ನೆಯ ಭಾಗ 199 ವನ್ನು ಮಾಡಿದಹಾಗಾಯಿತು, ಆದುದರಿಂದ ನಿನ್ನನ್ನು ಶುದ್ಧ ಮೂಢನೆಂದು ತಿಳಿಯ ಬೇಕು, ಒಂದು ವೇಳೆ ಹಿರಿಯವನೆಂದು ಪೂಜಿಸಬೇಕಾಗಿದ್ದರೆ ಇವನಪ್ಪನಾದ ವಸು ದೇವನಿರುವನಲ್ಲ ವೇ ? ಲೋಕದಲ್ಲಿ ಹೆತ್ತವನೂ ಹೆಣ್ಣು ಕೊಟ್ಟವನೂ ಇಬ್ಬರೂ ತಂದೆ ಗಳಾಗಿರುವುದರಿಂದ ಪಾಂಡವರಿಗೆ ಹೆಣ್ಣು ಕೊಟ್ಟ ಮಾವನಾದ ದ್ರುಪದರಾಜನಿಗಾ ದರೂ ಪೂಜೆಯನ್ನು ಮಾಡಿದಿರಾ ? ಆಚಾರ್ಯನೆಂದು ಪೂಜಿಸಬೇಕಾದರೆ ಇವರಿಗೆ ಧನುರ್ವಿದ್ಯೆಯನ್ನು ಹೇಳಿದ ದ್ರೋಣಾಚಾರ್ಯನನ್ನಾದರೂ ಪೂಜಿಸಿದಿರಾ ? ವೇದ ವ್ಯಾಸ ಮುನಿಶ್ರೇಷ್ಠನೂ ಅಶ್ವತ್ಥಾಮನ ಕೃಪಾಚಾರ್ಯನೂ ನಿಮಗೆ ಸೋದರ ಮಾವನಾದ ಶಲ್ಯನೂ ಇನ್ನೂ `ಸಕ ದೇಶಾಧೀಶ್ವರರೂ ಇರುವಲ್ಲಿ ಇವರೆಲ್ಲರಿಗೂ ಅವಮಾನವನ್ನು ಮಾಡಿ ಜಾರ ಚೋರರಿಗೆಲ್ಲಾ ಗುರುವಾದ ಈ ಕೃಷ್ಣನಿಗೆ ಅಗ್ರವೂ ಜೆಯನ್ನು ಮಾಡಿದುದು ಒಲು ಚೆನ್ನಾ ಯಿತು ! ಹೀಗೆ ಅಯೋಗ್ಯವಾದ ಕೆಲಸವನ್ನು ಮಾಡಿದುದರಿಂದ ಎಲ್ಲಾ ಅರಸುಗಳೂ ಕೂಡಿ ನಿಮ್ಮ ಐವರನ್ನೂ ನಿಮಗೆ ಬುದ್ದಿ ಯನ್ನು ಹೇಳಿದ ಭೀಷ್ಟ ನನ್ನೂ ಪೂಜೆ ಮಾಡಿಸಿಕೊಂಡ ಈ ಖಳನಾದ ಗೊಲ್ಲನನ್ನೂ ಕಡಿದು ಭೂತಗಣಗಳಿಗೆ ತಿನ್ನ ಬಡಿಸದೆ ಬಿಡುತ್ತಾರೆಯೇ ? ಎಂದು ನಾನಾ ಪ್ರಕಾರವಾಗಿ ದರ್ಭಾಷೆಗಳನ್ನು ಆಡುತ್ತಾ ಇರಲು ಅದನ್ನು ಕೇಳಿ ಶಿಶುಪಾಲನಿಗೆ ಸಹಾಯವಾಗಿ ದುಷ್ಟರಾದ ಅರಸುಗಳೆಲ್ಲ ರೂ ಯುದ್ಧಕ್ಕೆ ಸನ್ನದ್ಧರಾದರು.

  • ಇತ್ತ ಸಾತ್ಯಕಿ ಅರ್ಜುನ ಭೀಮ ನಕುಲ ದೃಷ್ಟದ್ಯುಮ್ಮ ಮೊದಲಾದವರು ಯುದ್ಧ ಸನ್ನದ್ಧರಾದರು. ಅದನ್ನು ಕಂಡು ಧರ್ಮರಾಜನು ಮೂಗಿನಲ್ಲಿ ಬೆರಳಿಟ್ಟು ತಲೆ ಯನ್ನು ಅಲ್ಲಾಡಿಸುತ್ತಾ ಭೀಷ್ಮನ ಬಳಿಗೆ ಬಂದು-ಸಮುದ್ರದಿಂದ ಸುತ್ತಲ್ಪಟ್ಟ ಭೂಮಿಯ ಅರಸುಗಳೆಲ್ಲರೂ ಯುದ್ಧಕ್ಕೆ ಬರುತ್ತಾರಲ್ಲಾ ! ಇನ್ನೇನು ಗತಿ ? ಈ ವರೆಗೂ ಯಜ್ಞವು ತಡೆಯಿಲ್ಲದೆ ನಡೆಯಿತು. ಅವಧೃತಸ್ನಾನವಾಗುವಷ್ಟರಲ್ಲಿಯೇ ಇಂಥಾ ವಿಪತ್ತು ಬಂದೊದಗಿತಲ್ಲಾ ! ಎಂದು ಬಹಳವಾಗಿ ಚಿ೦ತಪಡುವುದನ್ನು ಸಹ ದೇವನು ಕೇಳಿ--ಈ ಬಣಗುಗಳಾದ ಅರುಸುಗಳ ಗುಂಗಿಗೆ ಬೆದರಿ ಯಾಕೆ ಕಳವಳ ಪಡುತ್ತೀರಿ? ಒಂದು ನಿಮಿಷ ಮಾತ್ರ ಸುಮ್ಮನೆ ಇರಿ ಎಂದು ಧರ್ಮರಾಜನಿಗೆ ಹೇಳಲು ಸಹದೇವನು ಹೇಳಿದಂತೆ ಭೀಷ್ಮನು ಧರ್ಮರಾಜನಿಗೆ ಸಮಾಧಾನವನ್ನು ಮಾಡುತ್ತಿರು ವಷ್ಟ ರಲ್ಲಿಯೇ ಕೃಷ್ಣನ ಚಕ್ರವು ಬಂದು ಶಿಶುಪಾಲನ ತಲೆಯನ್ನು ಕಡಿದುಹಾಕಲು ಕೂಡಿದ್ದ ಅರಸುಗಳೆಲ್ಲರೂ ಸುಮ್ಮನಾಗಿ ಬಂದು ಧರ್ಮರಾಜನಿಗೆ ವಿಧೇಯರಾದರು. ಆ ಮೇಲೆ ಧರ್ಮರಾಜನು ದೇಶದ ಅರಸುಗಳಿಗೆಲ್ಲಾ ಸತ್ಕಾರವನ್ನು ಮಾಡಿ ಅವರೆಲ್ಲ ರನ್ನೂ ಅವರ ಸ್ಥಳಗಳಿಗೆ ಕಳುಹಿಸಿ ಅನಂತರದಲ್ಲಿ ಕೃಷ್ಣನೇ ಮೊದಲಾದ ಯಾದವರೊ ಡನೆಯ ಭೀಷ ನೇ ಮೊದಲಾದ ಕೌರವರೊಡನೆಯ ಬಹಳ ಸಂತೋಷದಿಂದ ಅವ ನೃತಸ್ನಾನವನ್ನು ಮಾಡಿ ಬಹು ಸಂಭ್ರಮದಿಂದ ಪಟ್ಟಣವನ್ನು ಸೇರಿದನು.