200 KANARESE SELECTIONS-PART III 10, THE ROMANCE OF NALA AND DAMAYANTI. ೧೦, ನಳನೂ ದಮಯಂತಿಯ. ಮಹಾಮೇರು ಪದ್ವ ತದ ತೆಂಕಣ ದಿಕ್ಕಿನಲ್ಲಿರುವ ಜಂಬೂ ದ್ವೀಪದಲ್ಲಿ ಐವ ತಾರು ದೇಶಗಳುಂಟು, ಅವುಗಳೊಳಗೆ ನಿಷಧವೆಂಬ ದೇಶವು ನಿರ್ಮಲವಾದ ಜಂಭ ರಿತಗಳಾಗಿರುವ ಹೊಳೆ ತೊರೆ ಕಟ್ಟೆ ಕಾಲುವೆ ಮೊದಲಾದುವುಗಳಿಂದಲೂ ಬತ್ತ ಗೋಧಿ ಮೊದಲಾದ ಎಲ್ಲ ಪೈರುಗಳಿಂದ ಕೂಡಿ ಶೋಭಿಸುವ ಗದ್ದೆ ಹೊಲಗಳಿಂದಲೂ ಪುಸಿ ಸುಗಂಧವನ್ನು ಬೀರುತ್ತಿರುವ ಮಲ್ಲಿಕಾಮಾಲತ್ಯಾದಿ ಲತೆಗಳಿಂದಲೂ ಕೋಮಲವಾಗಿ ಬೆಳೆದು ಫಲಗಳಿಂದ ಕೂಡಿ ಒಪ್ಪುತ್ತಿರುವ ಅಡಿಕೆ ತೆಂಗು ಬಾಳೆ ಕಿತ್ತಲೆ ಮೊದಲಾದ ಮರಗಳುಳ್ಳ ಉದ್ಯಾನಗಳಿಂದಲೂ ಒಂದು ಬಳಿಯಲ್ಲಿಯಾದರೂ ಪಾಳಿಲ್ಲದೆ ಒಕ್ಕಲುಗಳಿಂದ ತುಂಬಿರುವ ಹಳ್ಳಿ ಊರು ಪಟ್ಟಣಗಳಿಂದಲೂ ಕೂಡಿ ಎಲ್ಲೆಲ್ಲಿಯ ರಮಣೀಯವಾಗಿರುವುದು ಆ ದೇಶದಲ್ಲಿ ವೀರಸೇನನೆಂಬ ಒಬ್ಬ ಅರಸು ಧರದಿಂದ ದೊರೆತನವನ್ನು ಮಾಡಿಕೊಂಡು ತನ್ನ ದೇಶದ ಜನರನ್ನೂ ತನ್ನ ಪರಿವಾರಗ ಇನ್ನೂ ಮಕ್ಕಳಿಗಿಂತ ಹೆಚ್ಚಾಗಿ ಕಾಪಾಡುತ್ತಿದ್ದನು. ಹೀಗಿರುವಲ್ಲಿ ಆತನ ಪಟ್ಟದ. ಹೆಂಡತಿಯಲ್ಲಿ ಬಹಳ ಸುಂದರನಾದ ಒಬ್ಬ ಗಂಡು ಮಗನು ಹುಟ್ಟಿ ಬಿದಿಗೆಯ ಚಂದ್ರ ನಂತೆ ದಿನದಿನಕ್ಕೆ ಬೆಳೆಯುತ್ತಾ ಇದ್ದನು. ಆತನಿಗೆ ತಂದೆಯು ಜಾತಕರವನ್ನು ಮಾಡಿಸಿ ನಳನೆಂದು ಹೆಸರಿಟ್ಟು ಚೌಲೋಪನಯನಾದಿಗಳನ್ನು ಮಾಡಿಸಿ ಸರ್ವವಿದ್ಯೆಗ ಳನ್ನೂ ತಿಳಿದು ಒಲು ಜಾಣನಾಗಿರುವ ಉಪಾಧ್ಯಾಯನ ಬಳಿಯಲ್ಲಿ ವಿದ್ಯಾಭ್ಯಾಸ ವನ್ನು ಮಾಡುವುದಕ್ಕೆ ನೇಮಿಸಿದನು. ಆಗ ನಳನು ಅರವತ್ತು ನಾಲ್ಕು ವಿದ್ಯೆಗಳನ್ನೂ ಸಾಂಗವಾಗಿ ಕಲಿತು ಧನುರ್ವೇದವನ್ನು ಓದಿ ಅಶ್ವಪರೀಕ್ಷಾ ಲಕ್ಷಣಗಳನ್ನು ತಿಳಿದು ಒಲವಂತನೂ ಗಟ್ಟಿಗನೂ ಸತ್ಯವಂತನೂ ಅಡಿಗೆ ಮಾಡುವ ವಿದ್ಯೆಯನ್ನು ಚೆನ್ನಾಗಿ ಕಲಿತವನೂ ಆಗಿ ತಾನು ಕಲಿತ ವಿದ್ಯೆಗಳನ್ನು ತಂದೆಯ ಮುಂದೆ ಪರೀಕ್ಷೆ ಕೊಟ್ಟು ಆತನ ಅಪ್ಪಣೆಯನ್ನು ತೆಗೆದು ಕೊಂಡು ಒಂದು ಅಕ್ಷೌಹಿಣೀ ಬಂದೊಡನೆ ಕೂಡಿ ದಿಗ್ವಿಜಯ ಕೋಸ್ಕರವಾಗಿ ಹೊರಟು ತನ್ನ ಸವಿಾಪಕ್ಕೆ ಬಂದು ಭಯಭಕ್ತಿಯಿಂದ ಕಾಣಿಸಿಕೊಂಡು ಕಪ್ಪವನ್ನು ಕೊಟ್ಟ ದೊರೆಗಳನ್ನು ಮನ್ನಿಸಿ ತನಗೆ ಎದುರು ಬಿದ್ದ ದೊರೆ ಗಳನ್ನು ಜಯಿಸಿ ಅವರಿಂದ ಕಾಣಿಕೆ ಕಪ್ಪಗಳನ್ನು ತೆಗೆದು ಕೊಂಡು ತಿರಿಗಿ ತನ್ನ ಪಟ್ಟಿ ಣಕ್ಕೆ ಬಂದು ತಂದೆಗೆ ನಮಸ್ಕರಿಸಿ ದೇಶದ ಅರಸುಗಳು ಕೊಟ್ಟ ಕಪ್ಪ ಕಾಣಿಕೆಗಳನ್ನು ಒಪ್ಪಿಸಿದನು. ಆಗ ವೀರಸೇನ ರಾಜನು ಮಗನ ಪರಾಕ್ರಮಕ್ಕೂ ಎನಯಕ್ಕೂ ಖುದ್ದಿ ಗೂ ಸತ್ಯಕ್ಕೂ ಮೆಚ್ಚಿ ಸಂತೋಷದಿಂದ ಆತನಿಗೆ ಯುವರಾಜ ಪಟ್ಟವನ್ನು ಕಟ್ಟಿ ದನು, ಆ ಮೇಲೆ ಈ ಯುವರಾಜನಾದ ನಳಚಕ್ರವರ್ತಿಯು ಧರ್ಮದಿಂದ ರಾಜ್ಯ ವನ್ನು ಪರಿಪಾಲಿಸುತ್ತಾ ಇದ್ದನು. ಹೀಗಿರುವಲ್ಲಿ ವಿದರ್ಭದೇಶದ ಕುಂಡಿನವೆಂಬ ಹೆಸರುಳ್ಳ ಪಟ್ಟಣವನ್ನು ಆಳು. ತಿರುವ ಭೀಮರಾಜನು ತನಗೆ ಮಕ್ಕಳೆಲ್ಲವಲ್ಲಾ ! ಎಂದು ಬಹಳವಾಗಿ ಚಿಂತೆಪಡು ತಿರುವ ವೇಳೆಯಲ್ಲಿ ಬ್ರಹ್ಮರ್ಷಿಶ್ರೇಷ್ಟನಾದ ದಮನೆಂಬ ಒಬ್ಬ ಮುನಿಯು ಬರಲು
ಪುಟ:ಕಥಾಸಂಗ್ರಹ ಸಂಪುಟ ೧.djvu/೨೧೨
ಗೋಚರ