ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೩ನೆಯ ಭಾಗ 201 ಆತನು ಹೆಂಡತಿಯೊಡನೆ ಕೂಡಿಬಂದು ಆ ಮುನೀಶ್ವರನನ್ನು ಬಹಳವಾಗಿ ಉಪಚರಿಸಿ. ಪೂಜೆಸಿದನು, ಆ ಮುನಿಯು ಆತನ ಪೂಜೆಗೆ ಪ್ರೀತಿಪಟ್ಟು ಮಕ್ಕಳ ಬಯಕೆಯಿಂದಿ ರುವ ಅವನಿಗೆ ದಮಯಂತಿ ಎಂಬ ಒಬ್ಬ ಮಗಳೂ ದಮನು ದಾಂತನು ದಮನನು ಎಂಬ ಮೂರು ಮಂದಿ ಗಂಡು ಮಕ್ಕಳೂ ಆಗುವರು ಎಂದು ಹೇಳಿ ಆಶೀರ್ವದಿಸಿ ತನ್ನ ಆಶ್ರಮವನ್ನು ಕುರಿತು ಹೋದನು, ಆ ಬಳಿಕ ಆತನ ವಚನದಂತೆ ಆ ಭೀಮ ರಾಜನ ಪಟ್ಟದ ರಾಣಿಯ ಗರ್ಭಿಣಿಯಾಗಿ ಮೊದಲು ದಮಯಂತಿ ಎಂಬ ಹೆಣ್ಣು ಮಗಳನ್ನು ಆ ಹಿಂದೆ ಕ್ರಮವಾಗಿ ಮೂರು ಮಂದಿ ಗಂಡು ಮಕ್ಕಳನ್ನೂ ಹೆತ್ತಳು. ಆ ದಮಯಂತಿಯು ದಿನದಿನಕ್ಕೆ ಬೆಳೆದು ಪ್ರಾಯದವಳಾಗಿದ್ದು ಆಕಾರ ಕ್ಷಣಗಳಿ೦ ದಲೂ ಲಾವಣ್ಯದಿಂದಲೂ ರತೀದೇವಿಗೆ ಸಮಾನಳಾಗಿ ಮುತ್ತು ಹವಳ ವಜ್ರ ವೈಡೂರ್ಯ ಮೊದಲಾದುವುಗಳಿಂದ ಕೆತ್ತಲ್ಪಟ್ಟಿರುವ ಒಡವೆಗಳನ್ನು ಇಟ್ಟುಕೊಂಡು ಒಳ್ಳೆಯ ಹೊಂಬಣ್ಣವಾದ ಸೀರೆಯನ್ನು ಉಟ್ಟುಕೊಂಡು ನಿರಾಸೆಯ ರವಕೆಯನ್ನು ತೊಟ್ಟು ಲಕ್ಷ್ಮಿ ದೇವಿಯ ಹಾಗೆ ಒಪ್ಪುತ್ತಿದ್ದಳು. ದೇವತೆಗಳು ಗಂಧರ್ವರು ಯಕ್ಷರು ನಾಗರು ಮನುಷ್ಯರು ಇವರೊಳಗೆ ಅವಳಂತೆ ಚಂದವುಳ್ಳ ಹೆಂಗಸರು ಯಾರೂ ಇಲ್ಲದುದರಿಂದ ಇವಳನ್ನು ನೋಡಿದ ಜನರುಗಳು ಬಹಳವಾಗಿ ಆಶ್ಚರ್ಯ ಪಡುತ್ತಾ ಇದ್ದರು. ಈ ದಮಯಂತಿಯ ಸಂಗಾತಿಗಳು ಆಕೆಯೊಡನೆ--ನೀನು ಮದುವೆಯಾಗುವುದಕ್ಕೆ ನಿನ್ನ ಚೆಲುವಿಗೆ ಸರಿಯಾದ ಪುರುಷನು ಜಗತ್ತಿನಲ್ಲಿ ಯಾರೂ ಇಲ್ಲ, ನಿಷಧ ದೇಶದ ವೀರಸೇನ ರಾಜನ ಮಗನಾದ ನಳನು ಮಾತ್ರ ಚಲುವಿನಿಂದ ಮನ್ನ ಧನಿಗೆ ಎಂಟು ಮಡಿ ಹೆಚ್ಚಾಗಿ ಇರುವನು ಎಂದು ನಾವು ಕೇಳಿರುವುದರಿಂದ ಅವನನ್ನೇ ನೀನು ಮದುವೆಮಾಡಿಕೊಳ್ಳಬೇಕು ಎಂದು ಅವನ ರೂಪ ರೇಖೆ ಜಾಣತನ ಶಕ್ತಿ ಪರಾಕ್ರಮ ಮೊದಲಾದುವುಗಳನ್ನು ವಿವರಿಸುತ್ತಾ ಬಂದುದರಿಂದ ಆ ದಮ ಯಂತಿಗೆ ನಳನ ಮೇಲೆ ಮನಸ್ಸಾಗಿದ್ದಿತು. ಇತ್ರ ನಳಚಕ್ರವರ್ತಿಗೆ ಬೇಹಿನವರು ಬಂದು ಈ ದಮಯಂತಿಯ ರೂಪಲಾ ವಣ್ಯಾದಿಗಳನ್ನು ತಿಳಿಸಿದುದರಿಂದ ಈತನೂ ಆಕೆಯನ್ನೇ ಮದುವೆಮಾಡಿಕೊಳ್ಳಬೇ ಕೆಂದು ಎಣಿಸಿಕೊಂಡು ಇದ್ದನು. ಹೀಗೆ ಶ್ರವಣಮಾತ್ರದಿಂದಲೇ ಒಬ್ಬರಲ್ಲೊಬ್ಬರಿಗೆ ಆನುರಾಗವು ಹುಟ್ಟಿ ದಿನದಿನಕ್ಕೆ ನಳನಿಗೆ ದಮಯಂತಿಯಲ್ಲಿ ಮನಸ್ಸಿನ ಪ್ರೀತಿಯು ಹೆಚ್ಚು ತಿರಲು ನಳನು ಆಕೆಯ ವಿರಹವನ್ನು ತಡೆಯಲಾರದೆ ಕಾಲವನ್ನು ಕಳೆಯುವ ಉಪಾಯಕ್ಕಾಗಿ ಹೂವಿನ ತೋಟಕ್ಕೆ ಹೋಗಿ ವಿನೋದವಾಗಿ ತಿರುಗುತ್ತಿರುವಾಗ ಅಲ್ಲಿ ಚಿನ್ನದ ರೆಕ್ಕೆಗಳಿ೦ದ ಒಪ್ಪುತ್ತಿರುವ ಕೆಲವು ಹಂಸಪಕ್ಷಿಗಳನ್ನು ನೋಡಿ ಮೆಲ್ಲ ಮೆಲ್ಲನೆ ಆ ಪಕ್ಷಿಗಳ ಬಳಿಗೆ ಹೋಗಿ ಅವುಗಳೊಳಗೆ ಒಂದು ರಾಜಹಂಸವನ್ನು ಹಿಡಿದುಕೊಳ್ಳಲು ಅದು ಮನುಷ್ಯರ ಹಾಗೆ ಆತನನ್ನು ಕುರಿತು- ಎಲೈ, ಅರಸೇ ! ನನ್ನನ್ನು ಏಕೆ ಹಿಂಸಿಸುತ್ತೀಯೆ ? ನಾನು ದಮಯಂತಿಯ ಬಳಿಗೆ ಹೋಗಿ ನಿನ್ನ ಅಂದಚಂದಗಳನ್ನೂ ನಿನ್ನ ಒಳ್ಳೆಯ ಗುಣಗಳನ್ನೂ ಆಕೆಗೆ ತಿಳಿಸಿ ಲೋಕದಲ್ಲಿರುವ ಅಷ್ಟು ಮಂದಿ ಅರಸುಮಕ್ಕಳನ್ನೂ ಬಿಟ್ಟು ಆಕೆಯು ನಿನ್ನನ್ನೇ ಮದುವೆಯಾಗುವ