202 KANARESE SELECTIONS-PART III ಹಾಗೆ ಮಾಡಿ ನಿನಗೆ ಬಹಳ ಹಿತವನ್ನು ಮಾಡುತ್ತೇನೆಂದು ಹೇಳಿತು. ನಳನು ಅದರ ಮಾತುಗಳಿಗೆ ಆಶ್ಚರ್ಯಪಟ್ಟು-ಹಾಗೆಯೇ ಮಾಡು ಎಂದು ಹೇಳಿ ಅದನ್ನು ಬಿಟ್ಟು ಬಿಟ್ಟನು. ಆನಂತರದಲ್ಲಿ ಆ ರಾಜಹಂಸವು ತನ್ನ ಕುಲದ ಪಕ್ಷಿಗಳೊಡನೆ ಕೂಡಿ ಆಕಾ ಶಮಾರ್ಗಕ್ಕೆ ಹಾರಿ ಬಹಳ ರಾಷ್ಟ್ರಗಳನ್ನು ದಾಟಿ ವಿದರ್ಭ ದೇಶದ ರಾಜಧಾನಿ ಯಾದ ಕುಂಡಿನ ಪಟ್ಟಣಕ್ಕೆ ಹೋಗಿ ತಾನು ಆಕಾಶದಲ್ಲಿಯೇ ನಿಂತು ರಾಣಿವಾ ಸದ ಹೂವಿನ ತೋಟದಲ್ಲಿ ಸಂಗಾತಿಗಳ ಜೊತೆಯಲ್ಲಿ ಆಡುತ್ತಿರುವ ದಮಯಂತಿ ಯನ್ನು ಕಂಡು ಆ ತೋಟದ ಒಳಯಿ೦ಕೆ ತನ್ನ ಹಕ್ಕಿಗಳ ಗುಂಪಿನೊಡನೆ ಕೂಡ ಇಳಿಯಿತು, ದಮಯಂತಿಯೂ ಆಕೆಯ ಸಖಿಯರೂ ಚಿನ್ನದ ಗರಿಗಳಿಂದ ಕೂಡಿರುವ ಈ ಹಂಸಪಕ್ಷಿಗಳ ಚೆಲುವನ್ನು ನೋಡಿ ಇವುಗಳನ್ನು ಹಿಡಿದುಕೊಳ್ಳಬೇಕೆಂದು ಎಣಿಸಿ ಸಖಿಯರೆಲ್ಲಾ ಹಕ್ಕಿಗಳ ಗುಂಪುಗಳನ್ನು ಅನುಸರಿಸಿಕೊಂಡೇ ಹೋದರು. ದಮಯಂತಿಯ ಮುಖ್ಯವಾದ ರಾಜಹಂಸೆಯ ಬೆಂಬಳಿಯನ್ನು ಹಿಡಿದುಹೋಗಲು ಅದು ತನ್ನನ್ನು ಹಿಂಬಾಲಿಸಿ ಬರುವ ಅರಸಿನ ಮಗಳನ್ನು ನೋಡಿ ತಾನು ಹತ್ತಿರಕ್ಕೆ ಬರುತ್ತಾ ಹಿಡಿಯುವುದಕ್ಕೆ ಬಂದರೆ ಬಳ್ಳಿಗಳ ಪೊದೆಗಳನ್ನು ಹೋಗುತ್ತಾ ತಿರಿಗಿ ಇನ್ನೇನು ? ಸಿಕ್ಕಿತು ! ಎಂಬುವಂತೆ ಅವಳ ಮನಸ್ಸಿಗೆ ತೋರಪಡಿಸಬೇಕೆಂದು ಸಮಿಾ ಪಕ್ಕೆ ಬರುತ್ತಾ ಹಿಡಿಯುವುದಕ್ಕೆ ಬಂದರೆ ಸ್ವಲ್ಪ ದೂರಕ್ಕೆ ಹಾರುತ್ತಾ ಹೀಗೆ ಆಕೆಯನ್ನು ಬಹಳ ದೂರಪ್ರದೇಶಕ್ಕೆ ಎಳಕೊಂಡು ಹೋಗಿ ಅಲ್ಲಿ ಅಕೆಯನ್ನು ನೋಡಿ ಮನುಷ್ಯರಂತೆ-ಎಲೈ, ಅರಸುಮಗಳೇ ! ನೀನು ಚಿಕ್ಕತನದಿಂದಲೂ ಬುದ್ದಿ ಇಲ್ಲದವಳ ಹಾಗೆ ಕಾಣಿಸುತ್ತೀ : ಯಾಕಂದರೆ ನಾನು ಆಕಾಶದಲ್ಲಿಯ ಭೂಮಿ ಯಲ್ಲಿಯ ತಿರುಗುವ ಹಕ್ಕಿಯು, ನೀನು ಭೂಮಿಯಲ್ಲಿ ಮಾತ್ರ ತಿರುಗುವಂಧವಳು. ನಿನಗೆ ನನ್ನನ್ನು ಹಿಡಿಯಬೇಕೆಂಬ ಆಶೆ ಹುಟ್ಟುವುದು ಹುಚ್ಚತನವಲ್ಲವೊ ? ನಾನು ಸಾಧಾರಣವಾದ ಹಂಸಪಕ್ಷಿಯಲ್ಲ, ಎಲ್ಲ ಲೋಕಗಳನ್ನೂ ಉಂಟುಮಾಡಿದ ಬ್ರಹ್ಮ ದೇವನ ವಾಹನವಾದ ಹಂಸಕುಲದ ಹಕ್ಕಿಯು, ನಾನು ಭೂಲೋಕವನ್ನು ತಿರುಗು ವದಕ್ಕೆ ಬ್ರಹ್ಮ ದೇವನ ಅಪ್ಪಣೆಯನ್ನು ತೆಗೆದು ಕೊಂಡು ಎಲ್ಲ ಲೋಕಗಳನ್ನೂ ಸುತ್ತಿ ನೋಡಿ ಇಲ್ಲಿಗೆ ಬಂದೆನು. ಇ೦ದಾ ನಾನು ನಿನ್ನ ಕೈಗೆ ಸಿಕ್ಕುವನೇ ? ಆದರೆ ನೀನು ನನಗಾಗಿ ಬಹಳ ಆಯಾಸಪಟ್ಟೆ. ಆದುದರಿಂದ ನಿನಗೊಂದು ಹಿತವಾದ ಮಾತನ್ನು ಹೇಳುತ್ತೇನೆ ; ಕೇಳು, ನಾನು ಸಂಚರಿಸದಿರುವ ಲೋಕವು ಒಂದಾದರೂ ಇಲ್ಲ. ಯಾವಲೋಕದಲ್ಲಿಯ ನಿನ್ನ ರೂಪ ರೇಖೆ ಸೌಂದರ್ಯ ಮುಂತಾದುದಕ್ಕೆ ಸರಿ ಯಾದ ಒಬ್ಬ ಹೆಂಗಸನ್ನಾ ದರೂ ನೋಡಲಿಲ್ಲ, ಹೀಗೆಯೇ ಪುರುಷರಲ್ಲಿ ನಿಷಧ ದೇಶದ ಯುವರಾಜನಾದ ನಳಚಕ್ರವರ್ತಿಗೆ ಸರಿಯಾದ ಸೊಬಗುಳ್ಳ ಪುರುಷನನ್ನು ಎಲ್ಲಿಯ ನೋಡಲಿಲ್ಲ, ಆದುದರಿಂದ ನನ್ನೊಡೆಯನೂ ಸೃಷ್ಟಿ ಕರ್ತನೂ ಆದ ಬ್ರಹ್ಮನು--ನಿನಗೆ ಆ ನಳನೇ ಗಂಡನಾಗಿಯ ಆತನಿಗೆ ನೀನೇ ಹೆಂಡತಿಯಾಗಿಯೂ ಇರಬೇಕೆಂದು ಸಂಕಲ್ಪಿಸಿ ನಿಮ್ಮಿಬ್ಬರನ್ನೂ ಸೃಷ್ಟಿಸಿ ಇದ್ದಾನೆಂದು ನನ್ನ ಮನಸ್ಸಿನಲ್ಲಿ ಎಣಿಸಿ
ಪುಟ:ಕಥಾಸಂಗ್ರಹ ಸಂಪುಟ ೧.djvu/೨೧೪
ಗೋಚರ