ಪುಟ:ಕಥಾಸಂಗ್ರಹ ಸಂಪುಟ ೧.djvu/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ೩ನೆಯ ಭಾಗ 203 ಇದ್ದೇನೆ, ನೀನು ಆ ಮಹಾರಾಜನನ್ನು ಮದುವೆ ಮಾಡಿಕೊಂಡರೆ ನಿನ್ನ ಸೌಂದರ್ಯ ವೂ ಜನ್ಮವೂ ಸಫಲವಾಗುವುವು, ಅವನು ಗಂಡಸರಲ್ಲಿ ಸೊಬಗುಳ್ಳವನಾಗಿಯ ನೀನು ಹೆಂಗಸರಲ್ಲಿ ಸೊಗಸುಳ್ಳವಳಾಗಿಯೂ ಇರುವುದರಿಂದ ನೀವಿಬ್ಬರೂ ಗಂಡಹೆಂಡಿ ರಾಗಿ ಕೂಡಿದರೆ ನಿಮ್ಮಿಬ್ಬರಿಗೂ ಇದಕ್ಕಿಂತಲೂ ಹೆಚ್ಚಾದ ಸಂತೋಷವು ಎಲ್ಲಿಯ ಇಲ್ಲಇದಕ್ಕೆ ನೀನು ಒಪ್ಪಿದರೆ ನಾನು ಆ ಅರಸುಮಗನ ಬಳಿಗೆ ಹೋಗಿ ನನ್ನ ಬುದ್ದಿ ಚಮತ್ಕಾರದಿಂದ ಆತನು ನಿನ್ನನ್ನೇ ಮದುವೆಯಾಗುವ ಹಾಗೆ ಮಾಡುವೆನು ಎಂದು ಹೇಳಿತು. ಆಗ ದಮಯಂತಿಯು- ಎಲೈ, ಪಕ್ಷಿ ಕುಲೋತ್ತಮನೇ ! ನಿನ್ನ ಮಾತನ್ನು ಕೇಳಿ ನನಗೆ ಬಹು ಹೆಚ್ಚಳವಾಯಿತು. ನೀನು ಬಲು ಜಾಣನಾಗಿ ಕಾಣಿ ಸುತ್ತೀಯೋ, ನನ್ನ ನ್ನು ನಿನ್ನ ಮಗಳು ಎಂದು ಎಣಿಸಿ ನನ್ನ ಮೇಲಣ ದಯೆಯಿಂದ ಆತನ ಬಳಿಯಲ್ಲಿ ಹೇಗೆ ಹೇಳಬೇಕೋ ಹಾಗೆ ಹೇಳಿ ಆ ರಾಯನಿಗೆ ನನ್ನಲ್ಲಿ ಮನ ಸ್ಟು ಉಂಟಾಗುವಂತೆ ಮಾಡಬೇಕು ಎಂದು ಕೈಮುಗಿದು ಬಹುತರವಾಗಿ ಬೇಡಿ ಕೊಂಡಳು. ಆಗ ಹಂಸಪಕ್ಷಿಯು ದಮಯಂತಿಗೆ ಸಮಾಧಾನವನ್ನು ಹೇಳಿ ಹಾಗೇ ಮಾಡುವೆನೆಂದು ನಂಬುಗೆಯನ್ನು ಕೊಟ್ಟು ಆಕಾಶಕ್ಕೆ ಹಾರಿ ತಿರಿಗಿ ನಿಷಧ ಪಟ್ಟ ಣಕ್ಕೆ ಬಂದು ತಾನು ಮಾಡಿದ ಕಾರ್ಯವೆಲ್ಲವನ್ನೂ ದಮಯಂತಿಯ ಮನೋಭಾ ವವನ್ನೂ ನಳನೊಡನೆ ತಿಳಿಸಿತು. ಇಲ್ಲಿ ದಮಯಂತಿಯು ಹಂಸದ ಮಾತನ್ನು ಕೇಳಿದ್ದು ಮೊದಲುಗೊಂಡು ನಳನಲ್ಲಿಯೇ ಸಿಕ್ಕಿರುವ ಮನಸ್ಸುಳ್ಳವಳಾಗಿ ಯಾವಾಗಲೂ ನಳನನ್ನೇಸ್ಕರಿಸಿ ಹಂಬ ಲಿಸುತ್ತಾ ಭೋಜನೋಪಚಾರಗಳನ್ನು ತೊರೆದು ನಿಟ್ಟು ಸುರುಗಳನ್ನು ಬಿಡುತ್ತಾ ಕಂದಿದ ಮೊಗವುಳ್ಳವಳಾಗಿಯ ಬಡವಾದ ಮೈಯ್ಯುಳ್ಳವಳಾಗಿಯೂ ರಾತ್ರಿಯ ಹಗಲೂ ಚಿಂತೆಪಡುತ್ತಾ ಬಾರಿಬಾರಿಗೂ ಹಾ ! ಎಂದು ಬಾಯಿಬಿಟ್ಟು ನಿದ್ರೆ ಇಲ್ಲದೆ ಒಂದು ವೇಳೆ ಏನಾದರೂ ಸ್ವಲ್ಪ ನಿದ್ರೆಯು ಬಂದರೆ ಕನಸಿನಲ್ಲಿ ಆ ನಳನನ್ನು ಕಂಡು ಫಕ್ಕನೆ ಎದ್ದು ತಾನು ಕನಸಿನಲ್ಲಿ ಕಂಡ ನಳನ ಭಾವಚಿತ್ರವನ್ನು ಪಟದಲ್ಲಿ ಬರೆದು ಅದನ್ನೇ ಯಾವಾಗಲೂ ನೋಡುತ್ತಾ ಮುದ್ದಿಡುತ್ತಾ ಹೀಗೆ ನಳನ ವಿರಹವೇದನೆಯನ್ನು ತಾಳಲಾರದೆ ಇರಲು ಇದೆಲ್ಲವನ್ನೂ ನೋಡಿದ ಈಕೆಯ ಸಂಗಾತಿಗಳು ಭೀಮರಾಜನಲ್ಲಿಗೆ ಹೋಗಿ ಈ ವಿವರವನ್ನು ಅರಿಕೆಮಾಡಿದರು. ಆತನು ತನ್ನ ಮನಸ್ಸಿನಲ್ಲಿ ಒಹು ಪ್ರಕಾರವಾಗಿ ವಿಚಾರಿಸಿ ಪ್ರಾಯದವಳಾದ ನನ್ನ ಮಗಳಿಗೆ ಬೇಗ ಸ್ವಯಂವರವನ್ನು ಮಾಡಿಸಬೇಕೆಂದು ಎಣಿಸಿ-ದಮಯಂತಿಯ ಸ್ವಯಂವರವ ನಡೆಯುವುದು, ಇದಕ್ಕಾಗಿ ಸರ್ವರೂ ಬರಬೇಕೆಂದು ಎಲ್ಲಾ ಅರಸು ಗಳಿಗೂ ಹೇಳಿಕಳುಹಿಸಲು ಅವರೆಲ್ಲರೂ ಅನೆ ಕುದುರೆ ತೇರು ಕಾಲಾಳುಗಳು ಮೊದಲಾದ ಸೇನೆಯೊಡನೆ ಕೂಡಿದವರಾಗಿ ಕು೦ಡಿನ ನಗರಕ್ಕೆ ಬಂದು ಭೀಮರಾಜ ನಿಂದ ಸನ್ಮಾನಿತರಾಗಿ ಆತನು ಮಾಡಿಸಿಕೊಟ್ಟ ಬೀಡಾರಗಳಲ್ಲಿ ಇಳಿದು ಕೊಂಡರು. ಹೀಗಿರುವಲ್ಲಿ ಮೂರು ಲೋಕಗಳಲ್ಲಿಯ ಸೈಚೆಯಿಂದ ತಿರುಗುವ ನಾರ ದನು ಒಂದು ಸಮಯದಲ್ಲಿ ಸ್ವರ್ಗಕ್ಕೆ ಹೋಗಿ ದೇವೇಂದ್ರನನ್ನು ಕಾಣಿಸಿಕೊಳ್ಳಲು