ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೨೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

204 KANARESE SETECTIONS-PART' III ಆತನು ಈತನಿಗೆ ಪೂಜೆಯನ್ನು ಮಾಡಿ ಕುಳ್ಳಿರಿಸಿಕೊಂಡು ಎಲೈ, ಯತಿವರ್ಯ ನೇ ! ಭೂಮಿಯಲ್ಲಿರುವ ಅರಸುಗಳು ಜಗಳದಲ್ಲಿ ಬೆನ್ನು ಕೊಡದೆ ಪ್ರಾಣಗಳಲ್ಲಿ ಅಶ ಯನ್ನು ಬಿಟ್ಟು ಹಗೆಗಳೊಡನೆ ಹೋರಿ ಶಸ್ತ್ರಾಸ್ತ್ರಗಳಿಂದ ಕೊಲ್ಲಲ್ಪಟ್ಟವರಾಗಿ ಇಲ್ಲಿಗೆ ಬಂದರೆ ನನ್ನ ಈ ಅಮರಾವತೀ ಪಟ್ಟ ಇವು ತುಂಬಿ ನನಗೆ ಸಂತೋಷವಾಗು ವುದು, ಈಗ ಅಂಥಾ ಅರಸರು ಒಬ್ಬರೂ ನನ್ನ ಪಟ್ಟಣಕ್ಕೆ ಬರುವುದಿಲ್ಲ, ಇದಕ್ಕೆ ಕಾರಣವೇನೆಂದು ಕೇಳಿದನು ಅದಕ್ಕೆ ನಾರದನು"ಎಲೈ, ಇಂದ್ರನೇ ! ಕೇಳ, ಭೂಲೋಕದಲ್ಲಿ ವಿದರ್ಭದೇಶಕ್ಕೆ ಅರಸಾದ ಭೀಮಭೂಪಾಲಕನಿಗೆ ಮಗಳಾಗಿರುವ ದಮಯಂತಿ ಎಂಬ ಒಂದು ಕನ್ಯಾರತ್ನ ವುಂಟು. ಅವಳು ತನ್ನ ಸೊಬಗಿನ ಅತಿಶಯ ದಿಂದ ಎಲ್ಲ ಹೆಂಗಸರುಗಳಲ್ಲಿಯೂ ಪ್ರಸಿದ್ದಿ ಯನ್ನು ಪಡೆದಿದ್ದಾಳೆ, ಅವಳಿಗೆ ಸಮಾನ ಳಾದ ರೂಪವತಿಯು ಹದಿನಾಲ್ಕು ಲೋಕಗಳಲ್ಲಿಯ ಇಲ್ಲ ಈಗ ಆಕೆಗೆ ಸ್ವಯಂ ವರವು ನಡೆವುದಕ್ರಾರಂಭವಾಗಿರುವುದರಿಂದ ಎಲ್ಲಾ ದೇಶದ ಅರಸ ಮಕ್ಕಳುಗಳು ಅವಳನ್ನು ಮದುವೆಮಾಡಿ ಕೊಳ್ಳಬೇಕೆಂಬ ಆಶೆಯಿಂದ ಜಗಳಗಳನ್ನು ಬಿಟ್ಟು ಆ ಭೀಮರಾಜನ ಪಟ್ಟಣಕ್ಕೆ ಹೋಗುತ್ತಾ ಇದ್ದಾರೆ ಎಂದು ಹೇಳಿದನು." ಆ ಮಾತನ್ನು ಇಂದ್ರ ಯಮ ವರುಣ ಯಜೇಶ್ವರರು ಕೇಳಿ ನಾವೆಲ್ಲರೂ ಸ್ವಯಂವರಕ್ಕೆ ಹೋಗುವಣ ಎಂದು ನಿಶ್ಚಯಿಸಿಕೊಂಡು ತಮ್ಮ ತಮ್ಮ ವಾಹನಗ ಳನ್ನು ಏರಿ ಬರುವ ದಾರಿಯಲ್ಲಿ ಅದೇ ಸ್ವಯಂವರಕ್ಕೆ ಬರುತ್ತಿರುವೆ ನಳನನ್ನು ನೋಡಿ ಈ ನಾಲ್ಕು ಮಂದಿ ದಿಕ್ಕಾಲಕರು ಪ್ರಾಯದವನಾದ ಇವನಾರು ? ಮೈಯಿಂದ ಕೂಡಿರುವ ಮನ್ಮಥನ ಹಾಗೂ ಹಣೆಯಲ್ಲಿ ಕಣ್ಣಿಲ್ಲದ ಶಿವನ ಹಾಗೂ ನಾಲ್ಕು ತೋಳುಗಳಿಲ್ಲದ ನಾರಾಯಣನ ಹಾಗೂ ಔಷ್ಣವಿಲ್ಲದ ಸೂರ್ಯನ ಹಾಗೂ ಇರುವನು, ಇವನು ಸ್ವಯಂವರಕ್ಕೆ ಹೋದರೆ ಇವನ ರೂಪರೇಖಾಲಾವ ಹ್ಯಾದಿಗಳನ್ನು ನೋಡಿ ಆ ಕನ್ಯ ಕೆಯು ಇವನನ್ನೇ ವರಿಸುವಳು. ಅನಂತರದಲ್ಲಿ ನಮ್ಮ ಮನೋರಧವು ವ್ಯರ್ಥವಾಗುವುದು ಎಂದು ಕೆಲವು ಹೊತ್ತು ಚಿಂತಿಸಿ ಎಲ್ಲರೂ ಕೂಡಿ ತಮಗನುಕೂಲವಾದ ಒಂದು ಆಲೋಚನೆಯನ್ನು ಮಾಡಿಕೊಂಡು ಆಕಾಶ ದಿಂದ ಭೂಲೋಕಕ್ಕೆ ಇಳಿದು ಬಂದು ನಳಚಕ್ರವರ್ತಿಯನ್ನು ಕುರಿತು-ಎಲೈ, ನರೇಂದ್ರನೇ ! ನೀನು ಕನಸಿನೊಳಗಾದರೂ ಸುಳ್ಳಾಡದೆ ಇರುವಂಧ ಸತ್ಯವಂತನು. ಆದಕಾರಣ ನೀನು ನಮಗೆ ದೌತ್ಯವನ್ನು ಮಾಡಿ ಸ್ವಯಂವರದಲ್ಲಿ ದಮಯಂತಿಯು ಈ ನಮ್ಮಲ್ಲಿ ಯಾರನ್ನಾ ದರೂ ವರಿಸುವ ಹಾಗೆ ಪ್ರಯತ್ನವನ್ನು ಮಾಡಬೇಕು ಅಂದರು. ಅದಕ್ಕೆ ನಳಚಕ್ರೇಶ್ವರನು-ಎಲೆ, ಮಹಾತ್ಮರುಗಳಿರಾ ! ಈ ಕೆಲಸ ವನ್ನು ನಾನು ಅವಶ್ಯವಾಗಿ ಮಾಡುತ್ತೇನೆ, ನೀವು ಯಾರು ? ನನಗೆ ತಿಳಿಸಬೇಕೆಂದು ಕೇಳಲು ಆಗ ದೇವೇಂದ್ರನು ಆತನನ್ನು ಕುರಿತು ನಮ್ಮನ್ನು ದಮಯಂತಿಯ ನಿಮಿತ್ತವಾಗಿ ಬಂದ ದಿಕ್ಕಾಲಕರು ಎಂದು ತಿಳಿ, ನಾನು ಇಂದ್ರನು ; ಈತನು ಸರ್ವ ಪ್ರಾಣಿಗಳಿಗೂ ಸಾವನ್ನುಂಟುಮಾಡುವ ಯಮನು ; ಇವನು ವರುಣನು ; ಇವನು ಅಗ್ನಿ ಯು ಎಂದು ತಿಳಿಸಲು ಆಗ ನಳಚಕ್ರವರ್ತಿಯು ಕೈಮುಗಿದು-ಎಲೆ,