ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೨೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೩ನೆಯ ಭಾಗ 205 ೩ ಮಹನೀಯರೇ ! ನಿಮ್ಮ ಹಾಗೆಯೇ ನಾನೂ ದಮಯಂತಿಯ ಸ್ವಯಂವರಕ್ಕೆ ಬಂದು ಇದ್ದೇನೆ ಆದುದರಿಂದ ನೀವು ನನ್ನನ್ನು ದೌತ್ಯ ಕಾರ್ಯಕ್ಕೆ ಕಳುಹಿಸುವುದು ಯುಕ್ತ ವಲ್ಲ, ನನ್ನಲ್ಲಿಯೇ ಪ್ರೀತಿಯುಳ್ಳ ಅರಸಿನ ಮಗಳನ್ನು ಕುರಿತು ನೀನು ಮತ್ತೊಬ್ಬ ನನ್ನು ವರಿಸೆಂದು ನಾನೇ ನುಡಿಯುವುದು ಹೇಗೆ ? ಎನಲು ದೇವೇಂದ್ರನು ನಳನನ್ನು ಕುರಿತು--ನೀನು ಮೊದಲು ನೀವು ಬಯಸಿದ ಕಾರ್ಯವನ್ನು ಅಗತ್ಯವಾಗಿ ನೆರವೇರಿ ಸುವೆನು ಎಂದು ಹೇಳಿ ಈಗ ಹೀಗೆ ಹೇಳುವುದು ತಕ್ಕುದಲ್ಲ, ಸಾವಕಾಶವನ್ನು ಮಾಡದೆ ಹೋಗಿ ನಾವು ಬಂದಿರುವದನ್ನು ದಮಯಂತಿಗೆ ಅರಿಕೆ ಮಾಡು, ದೇವತೆಗಳ ಕೆಲಸವನ್ನು ಮಾಡಿದರೆ ನಿನಗೆ ಸರ್ವಾಭೀಷ್ಟವೂ ಉಂಟಾಗುತ್ತದೆ ಅಂದನು. ಆಗ ನಳನು--ಬಹಳ ಜನರು ಕಾವಲಾಗಿರುವ ಅರಸಿನ ಮಗಳ ರಾಣಿವಾಸಕ್ಕೆ ನಾನು ಹೋಗುವುದು ಹೇಗೆ ? ಎನಲು ದೇವೇಂದ್ರನು--ನಮ್ಮ ವರದಿಂದ ಅಲ್ಲಿಗೆ ಹೋಗು ವುದಕ್ಕೆ ನಿನಗೆ ಸಾಮರ್ಥ್ಯವು ಉಂಟಾಗುತ್ತದೆ. ಶೀಘ್ರದಲ್ಲಿ ಹೋಗು ಎಂದನು. ಆಗ ಸತ್ಯಸಂಧನಾದ ನಳನು ಒದಲು ಮಾತಾಡದೆ ವಿದರ್ಭ ಪಟ್ಟಣವನ್ನು ತಂಪಿ ಅರಮನೆಯನ್ನು ಪ್ರವೇಶಿಸಿ ಬಹಳವಾದ ತೊಟ್ಟಿಗಳನ್ನೂ ಹಜಾರಗಳನ್ನೂ ಕಳೆದು ಬಂದು ಕನ್ಯಾಂತಃಪುರಕ್ಕೆ ಹೋಗಿ ಕೋಮಲಾಂಗಿಯಾಗಿಯ ಪ್ರಾಯ ದವಳಾಗಿಯೂ ಕನ್ನೈದಿಲೆಯಂತಿರುವ ಕಣ್ಣುಗಳುಳ್ಳವಳಾಗಿಯ ಬಡನಡುವಿನಿಂದ ಬಳಕುತ್ತಿರುವವಳಾಗಿಯ ಮುಗುಳು ನಗೆಯುಳ್ಳವಳಾಗಿಯ ಹೊಳೆಯುವ ಮೊಗದಾವರೆಯುಳ್ಳವಳಾಗಿಯೂ ಸಂಗಾತಿಗಳಿಂದ ಕೂಡಿದವಳಾಗಿಯೂ ಇರುವ ಕಾಂತಾಶಿರೋಮಣಿಯಾದ ದಮಯಂತಿಯನ್ನು ನೋಡಿ ಮನೋಭ್ರಮೆಯುಂಟಾಗಿ ಮದನಬಾಣಗಳಿಂದ ಪೀಡಿತನಾದರೂ ಧೀರೋದಾತ್ತ ನಾಯಕನಾದುದರಿಂದಲೂ ಸತ್ಯಸಂಧನಾದುದರಿಂದಲೂ ತಿರಿಗಿ ಧೈರ್ಯವನ್ನು ಧರಿಸಿ ನಿಂತಿರಲು ದಮಯ ತಿಯ ಸಂಗಾತಿಗಳು ಈತನನ್ನು ಕಂಡು ಶೀಘ್ರದಲ್ಲಿ ಎದ್ದು ಆತನ ತೇಜಸ್ಸನ್ನು ನೋಡಿ ಈ ದಿವ್ಯ ಪುರುಷನು ದೇವತೆಗಳು ಯಕ್ಷರು ಗಂಧರ್ವರು ಉರಗರು ಮೊದ ಲಾದವರೊಳಗೆ ಯಾರೋ ತಿಳಿಯ ಕೂಡದು ಎಂದು ತಮ್ಮತಮ್ಮ ಮನಸ್ಸುಗಳಲ್ಲಿ ಎಣಿಸುತ್ತಾ ಮಾತನಾಡಿಸುವುದಕ್ಕೂ ಶಕ್ತಿ ಸಾಲದೆ ನಾಚಿಕೆಯಿಂದ ತಲೆಯನ್ನು ಬಗ್ಗಿಸಿಕೊಂಡವರಾಗಿ ಸುಮ್ಮನಿದ್ದರು. ದಮಯಂತಿಯು ತನ್ನ ಅಂದಚೆಂದಗಳನ್ನು ನೋಡಿ ಬೆರಗಾಗಿ ನಿಂತಿರುವ ಆತನ ರೂಪಲಾವಣ್ಯಕ್ಕೆ ಆಶ್ಚರ್ಯಪಡುತ್ತಾ ಮುಖ ದಲ್ಲಿ ಮುಗುಳು ನಗೆಯನ್ನು ತೋರಿಸುತ್ತಾ ಕಡೆಗಣ್ಣ ನೋಟಗಳಿಂದ ಎವೆ ಹಾಕ ದೆ ನೋಡಿ-ಎಲೈ, ಮಹಾಪುರುಷನೇ! ಮೈಯ್ಯುಳ್ಳ ಮನ್ಮಧನೋಪಾದಿಯಲ್ಲಿ ಮೆರೆ ಯುವ ನಿನ್ನನ್ನು ನೋಡಿದ ಮಾತ್ರದಿಂದಲೇ ನನ್ನ ಮನಸ್ಸು ಕಲಕಿಹೋಗಿ ಇದೆ. ಅನೇಕ ಮಂದಿ ಕಾವಲುಗಾರರು ಕಾದಿರುವಲ್ಲಿ ಈ ಅರಸುಗಳ ಹೆಂಡಿರಿರುವ ಅರಮ ನೆಗೆ ನೀನು ಹೇಗೆ ಪ್ರವೇಶಿಸಿದೆ ? ಇಷ್ಟು ಮಂದಿಗಳಲ್ಲಿ ನಿನ್ನನ್ನು ಯಾರೂ ಕಾಣದೆ ಇರುವುದಕ್ಕೆ ಕಾರಣವೇನು ? ನಮ್ಮ ತಂದೆಯಾದ ಭೀಮರಾಜನು ಉಗ್ರವಾದ, ಆಜ್ಞೆ ಯುಳ್ಳವನು, ನೀನು ಬಂದ ಕೆಲಸವೇನು ? ಅದನ್ನು ಬೇಗ ತಿಳಿಸಿ ಬಂದ ಹಾಗೆ ಹೋಗು ಅಂದಳು.