ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೨೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

206 KANARESE SELECTIONS-PART Iri ಆಗ ಆತನು-ಎಲೆ, ಅರಸಿನ ಮಗಳೇ ! ನಾನು ನಳನು, ದೇವತೆಗಳ ಕೆಲ ಸಕ್ಕಾಗಿ ನಿನ್ನ ಬಳಿಗೆ ದೂತನಾಗಿ ಒಂದು ಇದ್ದೇನೆ ಇಂದ್ರ ಯಮ ವರುಣ ಅಗ್ನಿ ಈ ನಾಲ್ವರೂ ನಿನ್ನ ನ್ನು ವರಿಸಬೇಕೆಂದು ಬಯಸಿ ಬಂದಿದ್ದಾರೆ, ನೀನು ಇವರೊಳಗೆ ಯಾರನ್ನಾದರೂ ಒಬ್ಬನನ್ನು ವರಿಸು. ನಾನು ಅವರ ವರದಿಂದಲೇ ನಿನ್ನ ಅಂತಃಪುರವನ್ನು ಹೊಗುವಾಗ ನೀನು ಯಾರೆಂದೂ ಎಲ್ಲಿ ಹೋಗುತ್ತೀ ಎಂದೂ ಒಬ್ಬನಾದರೂ ಕೇಳಿದವನಿಲ್ಲ. ಇದೋ ನಾನು ಬಂದ ಕೆಲಸವು ಇದು. ಇನ್ನು ನಿನ್ನ ಮನಸ್ಸಿಗೆ ತೋರಿದ ಹಾಗೆ ನಡೆದುಕೋ ಎಂದು ಹೇಳಿದನು. ದಮ ಯಂತಿಯು ಆ ಮಾತನ್ನು ಕೇಳಿ ಆ ದೇವತೆಗಳನ್ನು ಮನಸ್ಸಿನಲ್ಲಿ ನೆನೆದು ನಮಸ್ಕ ರಿಸಿ ಆತನನ್ನು ನೋಡಿ ನಸುನಗೆಯನ್ನು ಬೀರುತ್ತಾ--ಎಲೈ ಪ್ರಾಣವಲ್ಲಭನೇ ! ನೀನೇ ಹೀಗೆ ಹೇಳಿದರೆ ನಾನು ಮಾಡತಕುದೇನು ? ನೀನು ನನ್ನ ಮನೋರಧಕೆ ಸರಿ ಯಾಗಿ ನಡೆಯಬೇಕಲ್ಲವೇ ? ಮೊದಲು ಹಂಸೆಯು ಬಂದು ನಿನ್ನ ಮಹತ್ವವನ್ನು ಹೇಳಿದಂದಿನಿಂದ ನನ್ನ ಒಡವೆವಸ್ತುಗಳನ್ನೂ ನನ್ನ ಒಡಲನ್ನೂ ನನ್ನ ಪ್ರಾಣಗಳನ್ನೂ ನಿನ್ನ ವಶಪಡಿಸಿ ನೀನೇ ಪ್ರಾಣೇಶ್ವರನೆಂದು ನೆರೆನಂಬಿ ನಿನ್ನ ವಿರಹದಿಂದಲೇ ಉಂಟಾದ ಚಿಂತಾರೂಪಬಾಧೆಯನ್ನು ತಾಳಲಾರದೆ ಹೊರಳುತ್ತಿದ್ದೇನೆ ನಿನ್ನನ್ನು ಕರತರಿಸುವುದಕ್ಕಲ್ಲ ವೇ ಸ್ವಯಂವರವೆಂಬ ನೆವದಿಂದ ಎಲ್ಲಾ ಅರಸುಗಳನ್ನೂ ಕರತರಿ ಸಿರುವುದು ಹೀಗಿರುವಲ್ಲಿ ನನ್ನನ್ನು ನೀನು ಉಪೇಕ್ಷಿಸಿದರೆ ವಿಷದಿಂದಾಗಲ ಬೆಂಕಿ ಯಿಂದಾಗಲಿ ನೀರಿನಿಂದಾಗಲೀ ನೇಣಿನಿಂದಾಗಲಿ ನಿನಗಾಗಿ ಈ ಒಡಲನ್ನು ಬಿಡುತ್ತೇನೆ ಎಂದು ನುಡಿಯಲು ನಳನು--ಎಲೆ, ಕಾಂತಾಮಣಿಯೇ ! ದಿಕ್ಷಾಲಕರೇ ನಿನ್ನನ್ನು ಬಯಸುವಾಗ ಸೀನು ಅಲ್ಲಿ ಮನುಷ್ಯನಾದ ನನ್ನ ನ್ನು ಬಯಸುವುದು ಉಚಿತವೇ ? ಲೋಕಪಾಲಕರಾಗಿಯೂ ಮಹಾತ್ಮರಾಗಿಯೂ ಇರುವ ಇಂದ್ರನೇ ಮೊದಲಾದ ದೇವತೆಗಳ ಪಾದಧೂಳೆಗಾದರೂ ಸರಿ ಹೋಲಲಾರದೆ ಇರುವ ನನ್ನನ್ನು ಏಕೆ ಬಯ ಸುತ್ತಿದ್ದೀಯೆ ? ನೀನು ದೇವತೆಗಳನ್ನೇ ವರಿಸುವುದು ಬಲು ಚನ್ನಾಗಿ ತೋರುತ್ತದೆ. ಇದಲ್ಲದೆ ದೇವತೆಗಳ ಕೆಲಸಕ್ಕೆ ಯಾವನು ಅಡ್ಡಿ ಮಾಡುವನೋ ಆತನು ಸರ್ವಸುಖ ಗಳನ್ನೂ ಕಳೆದುಕೊಂಡು ಸತ್ತು ಹೋಗುವನು. ಆದುದರಿಂದ ಆ ನಾಲ್ಕರೊಳಗೆ ಒಬ್ಬನನ್ನು ಒಪ್ಪಿ ವರಿಸಿ ನನ್ನನ್ನು ಕಾಪಾಡು, ದೇವತೆಗಳನ್ನು ವರಿಸಿದರೆ ಬಹಳ ರಮ್ಯ ವಾಗಿಯ ನುಣುಪಾಗಿಯೂ ಇರುವ ವಸ್ತ್ರಗಳ ನವರತ್ನಗಳನ್ನು ಕೆತ್ತಿದ ಒಡವೆ ಗಭೂ ದಿವ್ಯಗಂಧ ಮಾಲಿಕೆಗಳೂ ಇವೇ ಮೊದಲಾದವುಗಳನ್ನು ಧರಿಸಿ ಸ್ನೇಚ್ಛಾನು ಸಾರವಾದ ಭೋಗಗಳನ್ನು ಅನುಭವಿಸಬಹುದು .ಇಂಥಾ ದೇವತೆಗಳನ್ನು ಒಲ್ಲೆನೆಂದು ನುಡಿಯುವ ನಿನ್ನಂಥಾ ಅವಿವೇಕಿಯು ಯಾರಾದರೂ ಉಂಟೇ ? ಯಾವನ ದಂಡನೆಗೆ ಹೆದರಿ ಸರ್ವ ಪ್ರಾಣಿಗಳೂ ನ್ಯಾಯದಿಂದ ನಡೆಯುತ್ತಾರೋ ಅಂಥಾ ಯಮನನ್ನು ವರಿಸದೆ ಇರುವ ಹೆಂಗಸು ಉಂಟೇ ? ಮೂರು ಲೋಕಗಳಿಗೂ ಒಡೆಯನಾಗಿರುವ ದೇವೇಂದ್ರನನ್ನು ವರಿಸುವುದಕ್ಕಿಂತ ಇನ್ನೊಂದು ಭಾಗ್ಯವು ಬೇಕೇ ? ರತ್ನಾ ಕರಗಳಿಗೆ ಅರಸಾಗಿ ಸಕಂ ರತ್ನಗಳನ್ನೂ ಮನೆಯಲ್ಲಿ ತುಂಬಿಕೊಂಡಿರುವ ವರುಣನನ್ನಾದರೂ