ಪುಟ:ಕಥಾಸಂಗ್ರಹ ಸಂಪುಟ ೧.djvu/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೩ನೆಯ ಭಾಗ 207 ಮದುವೆಮಾಡಿಕೋ, ಆತನನ್ನು ಒಲ್ಲದಿದ್ದರೆ ತೇಜೋವಂತನಾದ ಅಗ್ನಿ ಯನ್ನಾ ದರೂ ಗಂಡನನ್ನಾಗಿ ಮಾಡಿಕೊ, ನನ್ನ ನುಡಿಯನ್ನು ನಿರಾಕರಿಸಬೇಡ, ನಾನು ಸತ್ಯವಾಗಿ ಹೇಳುತ್ತೇನೆ ಅಂದನು. ದಮಯಂತಿಯು ಆತನ ಮಾತುಗಳನ್ನು ಕೇಳಿ ಎದೆಯಲ್ಲಿ ಅಲಗು ನೆಟ್ಟಂತೆ ಬಹಳವಾಗಿ ಸಂಕಟ ಪಡುತ್ತಾ ನಿಟ್ಟುಸುರುಗಳನ್ನು ಬಿಡುತ್ತಾ ನಳನನ್ನು ಕುರಿತು ಸರ್ವ ದೇವತೆಗಳಿಗೂ ನಮಸ್ಕಾರವು, ನೀನು ಎಷ್ಟು ಹೇಳಿದರೂ ನಿನ್ನ ಮಾತುಗಳು ನನ್ನ ಕಿವಿಗೆ ಬೀಳುವುದಿಲ್ಲ, ನಿಜವಾಗಿಯೂ ನನ್ನ ಮನಸು ಒಡಂಬಡುವುದಿಲ್ಲ , ನೀನೇ ನನ್ನ ಗಂಡನು ಮತ್ತು ನನ್ನ ಪ್ರಾಣಕ್ಕೆ ಒಡೆಯನು, ನಿನ್ನನ್ನೇ ವರಿಸಿ ಇದ್ದೇನೆ. ಈ ಮಾತು ಸುಳ್ಳಲ್ಲ, ನಿನ್ನಲ್ಲಿ ನೆಟ್ಟಿರುವ ನನ್ನ ಮನಸ್ಸು ಎಂದಿಗೂ ಅಲುಗಲಾರದು ಎಂದು ನುಡಿದು ಕೈಮುಗಿದು ನಮಸ್ಕರಿಸಿ ಕಣ್ಣೀರುಗಳ ಕೋಡಿಯನ್ನು ಹರಿಸುತ್ತಾ ಗಡಗಡನೆ ನಡುಗುತ್ತಾ ಇರುವ ಆ ಕನ್ಯತೆಯನ್ನು ನೋಡಿ--ನಾನು ದೂತನಾಗಿ ಬಂದು ಸ್ವಕಾರ್ಯದಲ್ಲಿ ಪ್ರವರ್ತಿಸುವುದು ಯುಕ್ತವಲ್ಲವಷ್ಟೆ ? ಅವಶ್ಯವಾಗಿ ನಿಮ್ಮ ಕಾರ್ಯವನ್ನು ಮಾಡುತ್ತೇನೆಂದು ದೇವತೆಗಳೊಡನೆ ಪ್ರತಿಜ್ಞೆಯನ್ನು ಮಾಡಿ ನಿನ್ನ ಬಳಿಗೆ ಬಂದು ಅದನ್ನು ಅನ್ಯಥಾ ಮಾಡುವುದು ನನಗೆ ತಕ್ಕುದಲ್ಲ . ಆದುದರಿಂದ ನನ್ನಲ್ಲಿ ದಯೆಮಾಡಿ ಅವರಲ್ಲಿ ಯಾರನ್ನಾದರೂ ಒಬ್ಬನನ್ನು ಅಗತ್ಯವಾಗಿ ವರಿಸಬೇಕು ಎಂದು ಕೈಮುಗಿದು ಬೇಡಿಕೊಂಡನು. ಆಗ ದಮಯಂತಿಯು ಕಣ್ಣೀರನ್ನು ಸೆರಗಿನಿಂದ ಒರಸಿಕೊಳ್ಳುತ್ತಾ ಕಣ್ಣೀರು ತುಂಬಿದ ಕಣ್ಣುಗಳಿಂದ ನೋಡುತ್ತಾ-- ಎಲೈ, ನರೇಂ ದ್ರನೇ ! ನಿನಗಿಷ್ಟು ಭಯವೇಕೆ ? ನಿನ್ನಲ್ಲಿ ತಪ್ಪು ಉಂಟಾಗದಂತೆ ನಾನು ಒಂದು ಉಪಾ ಯವನ್ನು ಹೇಳುತ್ತೇನೆ ; ಕೇಳು. ಇಂದ್ರನೇ ಮೊದಲಾದ ಲೋಕ ಪಾಲಕರು ಸ್ವಯಂ ವರಮಂಟಪಕ್ಕೆ ಬಂದ ಸಮಯದಲ್ಲಿ ಸರ್ವ ದೇವತೆಗಳೂ ನೋಡುತ್ತಿರಲು ಅವರ ಅನುಗ್ರಹದಿಂದ ನಿನ್ನನ್ನೇ ವರಿಸುತ್ತೇನೆ. ಹೊರಟು ಹೋಗು ಅ೦ದಳು. ಆಗ ನಳನು ತಿರಿಗಿ ಇಂದ್ರನೇ ಮೊದಲಾದ ದಿಗೀಶರ ಬಳಿಗೆ ಬಂದು ಬಾಡಿರುವ ಮುಖದಿಂದ ಕೈಮುಗಿದು ನಿಂತಿರಲು ದೇವೇಂದ್ರನು--ಎಲೆ, ಅರಸುಮಗನೇ ! ದಮಯಂತಿಯ ಬಳಿಗೆ ಹೋಗಿದ್ದೆ ಯಾಗಿ ಅವಳಲ್ಲಿ ನಮ್ಮ ಬಯಕೆಯನ್ನು ತಿಳಿಸಿದೆಯಾ? ಅದಕ್ಕೆ ಅವಳು ಏನುತ್ತರವನ್ನು ಹೇಳಿದಳು ? ಎಂದು ಕೇಳಲು ನಳನು-ಎಲೆ, ಮಹಾತ್ಮನೇ ! ನಾನು ನಿಮ್ಮ ಅನುಗ್ರಹದಿಂದ ಆ ಕನ್ಯಕೆಯ ಆಕೆಯ ಸಂಗಾತಿ ಗಳೂ ಹೊರತು ಮಿಕ್ಕ ಕಾವಲುಗಾರರೊಬ್ಬರೂ ನನ್ನ ನ್ನು ಅರಿಯದೆ ಹೋದುದರಿಂದ ಆಕೆಯ ಬಳಿಗೆ ಹೋಗಿ ನಿಜವಾಗಿ ನಿಮ್ಮ ನಾಲ್ವರಲ್ಲಿ ಒಬ್ಬರನ್ನು ವರಿಸು ಎಂದು ಆಕೆಯನ್ನು ಕುರಿತು ಎಷ್ಟು ಬಗೆಯಲ್ಲಿ ಕೈಮುಗಿದು ಬೇಡಿಕೊಂಡಾಗ ಒಪ್ಪದೆ ಅವಳು--ನಿನ್ನನ್ನು ಹೊರತು ಮತ್ತೊಬ್ಬರನ್ನು ಎಂದಿಗೂ ವರಿಸುವುದಿಲ್ಲ, ಸ್ವಯಂವ ರದಲ್ಲಿ ಆ ದೇವತೆಗಳ ಕಟಾಕ್ಷದಿಂದ ಅವರ ಮುಂದೆಯೇ ನಿನ್ನನ್ನೇ ವರಿಸುತ್ತೇನೆ. ಹಾಗೆ ಮಾಡಿದರೆ ನಿನ್ನ ಮೇಲೆ ತಪ್ಪಿರುವುದಿಲ್ಲ, ಹೋಗು ಎಂದು ಖಂಡಿತವಾಗಿ ಹೇಳಿ ಕಳುಹಿಸಿದಳು. ನಡೆದ ವಿವರವನ್ನು ನಾನು ನಿಮಗೆ ನಿಜವಾಗಿ ತಿಳಿಸಿದ್ದೇನೆ.