208 KANARESE SELECTIONS-PART III ನೀವು ಮಹಾತ್ಮರಾದುದರಿಂದಲೂ ಸರ್ವಜನರ ಮನೋಭಾವಗಳನ್ನು ತಿಳಿಯುವಂಥ ವರಾದುದರಿಂದಲೂ ನಾನು ದಿಟಗಾರನೋ ಸುಳ್ಳುಗಾರನೋ ಎಂಬುವುದನ್ನು ನಿಮ್ಮ ಮನಸಿನಲ್ಲಿ ಯೋಚಿಸಿ ನೀವೇ ತಿಳಿದುಕೊಂಡು ನಿಮ್ಮ ಬುದ್ದಿಗೆ ತೋರಿದ ಹಾಗೆ ನಡೆ ಯಬಹುದು ಎಂದು ಹೇಳಿದನು. ಆಗ ಲೋಕಪಾಲಕರು ತಮ್ಮ ಮನಸ್ಸಿನೊಳಗೆ ಇವ ನಲ್ಲಿ ವಂಚನೆಯು ಇಲ್ಲವೆಂದು ಎಣಿಸಿ ಆತನಿಗೆ ಅಪ್ಪಣೆಯನ್ನು ಕೊಟ್ಟು ಕಳುಹಿಸಿದರು. ಆ ಬಳಿಕ ಒಂದು ಶುಭದಿವಸದಲ್ಲಿ ಭೀಮ ಭೂಪಾಲಕನು ದಮಯಂತಿಯ ಸ್ವಯಂವರ ಮಂಟಪವನ್ನು ವಿಚಿತ್ರವಾಗಿ ಶೃಂಗರಿಸಿ ಎಲ್ಲಾ ಅರಸುಮಕ್ಕಳನ್ನೂ ಸ್ವಯಂವರ ಮಂಟಪಕ್ಕೆ ಬರಹೇಳಿ ಕಳುಹಿಸಲು ಅವರೆಲ್ಲ ರೂ ದಮಯಂತಿಯಲ್ಲಿ ತಗುಲಿರುವ ಮನಸ್ಸುಳ್ಳವರಾಗಿ ಉಡಿಗೆತೊಡಿಗೆಗಳನ್ನು ಉಟ್ಟು ತೊಟ್ಟು ತಮ್ಮ ತಮ್ಮ ಪರಿವಾರ ಜನಗಳೊಡನೆ ಕೂಡಿ ಸುವರ್ಣಸ್ಕಂಭ ಮಕರ ತೋರಣಾದಿಗಳಿಂದ ಬಹು ವಿಧವಾಗಿ ಅಲಂಕುಸಲ್ಪಟ್ಟಿರುವ ಸ್ವಯಂವರ ಮಂಟಪವನ್ನು ಸಿಂಹಗಳು ಪರ್ವತದ ಗುಹೆಗಳನ್ನು ಹೋಗುವ ಹಾಗೆ ಹೊಕ್ಕು ಚಿನ್ನದ ಸಿಂಹಾಸನಗಳಲ್ಲಿ ಕುಳಿತುಕೊಂಡು ಇರಲು ಆ ರಂಗಮಂಟಪವು ನಾಗಶ್ರೇಷ್ಠರಿ೦ದ ಹೊಳೆಯುತ್ತಿರುವ ಭೋಗವತೀ ಪುರದ ಹಾಗೂ ಹುಲಿಗಳಿಂದ ನಿಬಡವಾಗಿರುವ ಗಿರಿ ಗುಹೆಗಳ ಹಾಗೂ ಶೋಭಿಸು ತಿತ್ತು. ಆ ಸ್ವಯಂವರ ಮಂಟಪದಲ್ಲಿ ದೇವೇಂದ್ರನೇ ಮೊದಲಾದ ಲೋಕಪಾಲಕರು ಬಂದು ಒಂದು ಸ್ಥಳದಲ್ಲಿ ಕುಳಿತಿದ್ದರು ಆಗೆ ಪೂರ್ಣ ಚಂದ್ರಮುಖಿಯಾದ ದಮ ಯ೦ತಿಯು ತನ್ನ ಅಂದಚೆಂದಗಳಿಂದ ಎಲ್ಲಾ ಅರಸುಮಕ್ಕಳ ಹೃದಯಗಳಿಗೂ ಸಂತೋಷವನ್ನು ಬೀರುತ್ತಾ ಸಖೀ ಜನಗಳೊಡನೆ ಕೂಡಿ ಸ್ವಯಂವರ ಮಂಟಪವನ್ನು ಹೊಕ್ಕು ಬರುತ್ತಿರಲು ಆ ರಾಜಕುಮಾರಕರ ನೋಟಗಳು ಚೆಲುವೆಯಾದ ದಮ ಯಂತಿಯ ಅಂಗೋಪಾಂಗಗಳಲ್ಲಿ ಮೊದಲು ನೋಡಿದ ತಾವನ್ನು ಬಿಟ್ಟು ಇನ್ನೊಂದು ಕಡೆಗೆ ಕದಲದೆ ನಿಂತುವು. ಆ ಸಮಯದಲ್ಲಿ ಕಂಚುಕೀಗಳೇ ಮೊದಲಾದವರು ದಮಯಂತಿಯ ಸಮೀಪಕ್ಕೆ ಬಂದು ಎಲ್ಲಾ ಅರಸುಮಕ್ಕಳ ಕುಲಗಳನ್ನೂ ಶೀಲಗಳನ್ನೂ ಹೆಸರುಗಳನ್ನೂ ಕೀರ್ತಿ ಗಳನ್ನೂ ಪ್ರತಾಪಗಳನ್ನೂ ವಿಂಗಡಿಸಿ ವಿಂಗಡಿಸಿ ಕೇಳಿ ತೋರಿಸುತ್ತಿರಲು `ಆ ದಮ ಯಂತಿಯು ಅವರೆಲ್ಲರನ್ನೂ ಕಡೆಗಣ್ಣಿನಿಂದಾದರೂ ನೋಡದೆ ಅರಸುಮಕ್ಕಳ ನಡುವೆ ನಳಾಕೃತಿಯನ್ನು ಧರಿಸಿ ಕೂತುಕೊಂಡಿರುವ ಇಂದ್ರಾದಿ ಲೋಕಪಾಲಕರ ಕಡ ನಳನು ಕುಳಿತಿರುವಲ್ಲಿಗೆ ಬಂದು ಈ ಐವರೂ ವಯೋರೂಪಗಳಿಂದ ಅಭೇದವಾಗಿ ಇರು ವುದರಿಂದಲೂ ದೊಡ್ಡವರು ಹೇಳುವಂಧ ದೇವತೆಗಳ ಗುರುತುಗಳೊಳಗೆ ಒಂದು ಗುರು ತಾದರೂ ಕಾಣಿಸದೆ ಇರುವುದರಿಂದಲೂ ಈ ಐದು ಮಂದಿಯೊಳಗೆ ನಳನು ಯರೆಂದು ತಿಳಿಯಲಿ ? ಇದಕ್ಕೇನು ಮಾಡಲಿ ? ಎಂದು ಬಹಳ ಚಿಂತೆಯಿಂದ ತನ್ನ ಮನಸ್ಸಿನಲ್ಲಿ... ನಾನು ಈ ದೇವತೆಗಳನ್ನೇ ಶರಣನ್ನು ಹೊಂದಿ ಬೇಡಿಕೊಳ್ಳುವುದೇ ಉಚಿತವೆಂದು ಎಣಿಸಿ ಅವರಿಗೆ ನಮಸ್ಕಾರವನ್ನು ಮಾಡಿ ಕೈಮುಗಿದು ಭಯದಿಂದ ನಡನಡುಗುತ್ತಾಎಲೈ, ಮಹಾತ್ಮರುಗಳಿರಾ ! ನಿಮ್ಮಿಂದಲೇ ಲೋಕದ ಜನರೆಲ್ಲರೂ ಧರ್ಮಿಷ್ಟರಾಗಿ
ಪುಟ:ಕಥಾಸಂಗ್ರಹ ಸಂಪುಟ ೧.djvu/೨೨೦
ಗೋಚರ