ವಿಷಯಕ್ಕೆ ಹೋಗು

ಪುಟ:ಕಥಾಸಂಗ್ರಹ ಸಂಪುಟ ೧.djvu/೨೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೭ನೆಯ ಭಾಗ 209 ಸತ್ಯವಂತರಾಗಿಯ ನಡೆಯುವರು. ಪಾಪಿಷ್ಟರಾಗಿಯ ಅಸತ್ಯವಂತರಾಗಿಯ ನಡೆಯುವಂಥಾ ಜನಗಳು ನಿಮ್ಮಿಂದಲೇ ಶಿಕ್ಷೆಯನ್ನು ಹೊಂದುವರು, ನೀವು ಇಂಥಾ ಧರ್ಮದೇವತೆಗಳಾದುದರಿಂದ ನಿಮ್ಮ ಪಾದವನ್ನು ಶರಣನ್ನಾಗಿ ಹೊಂದಿದ್ದೇನೆ, ನಿಮ್ಮ ದಾಸಿಯಾದ ನನ್ನನ್ನು ದಯೆಯಿಂದ ಕಾಪಾಡಬೇಕು, ಪೂರ್ವದಲ್ಲಿ ರಾಜಹಂಸವ ನನ್ನ ಸವಿಾಪಕ್ಕೆ ಎಂದು ನಳನ ರೂಪರೇಖೆಗಳನ್ನೂ ಸದ್ದು ಣಗಳನ್ನೂ ಹೇಳಿ ಹೋದುದು ಮೊದಲುಗೊಂಡು ಆತನೇ ನನಗೆ ಪ್ರಾಣಕಾಂತನೆಂದು ನನ್ನ ತ್ರಿಕರಣದಲ್ಲಿಯ ನಿಶ್ಚಯಿ ಸಿದ್ದೇನೆ ಆತನನ್ನು ಬಿಟ್ಟು ಮತ್ತೊಬ್ಬನನ್ನು ಮದುವೆಮಾಡಿ ಕೊಳ್ಳುವದಕ್ಕೆ ನನ್ನ ಮನಸ್ಸು ಒಡಂಬಡುವುದಿಲ್ಲ, ಸತ್ಯವಾಗಿ ನುಡಿಯುತ್ತೇನೆ ನನಗೆ ನಳನೇ ಪ್ರಾಣನಾ ಯಕನೆಂದು ಮೊದಲೇ ನೀವು ನಿಯಮಿಸಿ ಇದ್ದುದರಿಂದ ನನಗೂ ಹಾಗೆ ಅಪೇಕ್ಷೆ ಹುಟ್ಟಿತು ನನ್ನ ಪಾತಿವ್ರತ್ಯವು ಕೆಡದ ಹಾಗೂ ನನ್ನ ಅಭೀಷ್ಟವು ನೆರವೇರುವ ಹಾಗೂ ನಿಮ್ಮ ಸಂಕಲ್ಪವು ಸತ್ಯವಾಗುವ ಹಾಗೂ ನನ್ನ ಮೇಲಣ ದಯೆಯಿಂದ ನಿಜವಾದ ನಳನ ರೂಪೇ ನನಗೆ ತೋರುವ ಹಾಗೆ ಅನುಗ್ರಹಿಸಬೇಕು ಎಂದು ಬಹು ದೈನ್ಯದಿಂದ ಬೇಡಿಕೊಂಡಳು ಇಂದ್ರಾದಿ ಲೋಕಪಾಲಕರು ಆ ಮಾತನ್ನು ಕೇಳಿ ಇದೆಲ್ಲವೂ ನಿಜವೆಂದು ತಿಳಿದು ಆಕೆಗೆ ನಳನ ಆಕಾರವು ತಿಳಿಯುವ ಹಾಗೆ ಅನುಗ್ರಹಿಸಿದರು. ಆಗ ದಮಯಂ ತಿಯು ಬೆವರಿಲ್ಲದ ಮೈಯುಳ್ಳವರಾಗಿಯ ಎವೆಯನ್ನು ಹಾಕದಿರುವ ಕಣ್ಣುಳ್ಳವ ರಾಗಿಯ ಬಾಡದೆ ಇರುವ ಹೂವಿನ ಮಾಲಿಕೆಗಳನ್ನು ಧರಿಸಿರುವವರಾಗಿಯ ಭೂಮಿ ಯಲ್ಲಿ ಇದ್ದರೂ ಭೂಮಿಯನ್ನು ಮುಟ್ಟದೆ ಇರುವವರಾಗಿಯೇ ಇರುವ ಈ ಮೊದ ಲಾದ ಗುರುತುಗಳನ್ನು ನೋಡಿ ಇವರೇ ಲೋಕಪಾಲಕರೆಂದು ತಿಳಿದು ತಲೆಬಾಗಿ ಕೈ ಮುಗಿದು ಆ ಒಳಿಕ ಬಾಡಿರುವ ಹಸರವನ್ನು ಮುಡಿದು ಎವೆ ಹಾಕುವ ಕಣ್ಣುಗ ಇುಳ್ಳವನಾಗಿ ಭೂಮಿಯನ್ನೊತ್ತಿ ಕುಳಿತಿರುವ ನಳನನ್ನು ನೋಡಿ ಇವನೇ ನನ್ನ ಗಂಡ ನೆಂದು ಮಸಿ ತನ್ನ ಕೈಯ್ಯಲ್ಲಿದ್ದ ಹೂವಿನ ಸರವನ್ನು ದೇವತೆಗಳ ಮುಂದೆಯೇ ಆತನ ಕುತ್ತಿಗೆಯಲ್ಲಿ ಹಾಕಿದಳು ಆಗ ಇಂದ್ರನೇ ಮೊದಲಾದ ದೇವತೆಗಳು ಸಂತೋಷಪಟ್ಟು ಆ ನಳನ ಯಜ್ಞಸಮಯದಲ್ಲಿ ತಾವು ಪ್ರತ್ಯಕ್ಷವಾಗಿ ಬಂದು ಹವಿರ್ಭಾಗಗಳನ್ನು ತೆಗೆ ದುಕೊಳ್ಳುವ ಹಾಗೂ ಆತನಿಗೆ ಪುಣ್ಯಲೋಕವು ದೊರೆಯುವಹಾಗೂ ಈ ಎರಡು ವರ ಗಳನ್ನು ಇಂದ್ರನು ಕೊಟ್ಟನು. ಯಳ್ಳೇಶ್ವರನು ನಳನು ನೆನೆದಾಗಲೇ ತಾನು ಪ್ರತ್ಯಕ್ಷ ನಾಗುವ ಹಾಗೂ ಆತನಿಗೆ ತನ್ನ ಲೋಕಸುಖಗಳು ಉಂಟಾಗುವ ಹಾಗೂ ಈ ಎರಡು ವರಗಳನ್ನು ಕೊಟ್ಟನು. ಯಮನು ನಳನು ಅಟ್ಟ ಅನ್ಯಾ ದಿಸದಾರ್ಥಗಳಿಗೆ ವಿಶೇಷ ರುಚಿಯುಂಟಾಗುವ ಹಾಗೂ ಆತನ ಹೃದಯವು ಧರ್ಮದಲ್ಲಿಯೇ ಆಸಕ್ತವಾಗಿರುವ ಹಾಗೂ ಈ ಎರಡು ವರಗಳನ್ನು ಕೊಟ್ಟನು. ವರುಣನು ಆತನು ನೆನಸಿದ ತಾವಿನಲ್ಲಿ ನೀರುಗಳುಂಟಾಗುವಹಾಗೂ ಆತನು ಧರಿಸಿಕೊಂಡಿರುವ ಹೂವಿನ ಹಾರಗಳು ಬಾಡದೆ ನಿರಂತರವೂ ಪರಿಮಳಿಸುತ್ತಾ ಇರುವ ಹಾಗೂ ಈ ಎರಡು ವರಗಳನ್ನು ಕೊಟ್ಟನು. ಈ ಪ್ರಕಾರ ನಾಲ್ವರು ಲೋಕಪಾಲಕರೂ ನಳನಿಗೆ ಎಂಟು ವರಗಳನ್ನು ಕೊಟ್ಟು ತಮ್ಮ 14 |