210 KANARESE SEI ECTIONS-PART III ತಮ್ಮ ಸ್ಥಾನಗಳಿಗೆ ಹೋದರು. ಆ ಸಮಯದಲ್ಲಿ ಅಲ್ಲಿ ನಡೆದ ವೃತ್ತಾಂತವೆಲ್ಲವೂ ನಳನಿಗೂ ದಮಯಂತಿಗೂ ಎಲ್ಲಾ ಆರುಸುಗಳಿಗೂ ಕನಸಿನ ತೆ ತೋರಿತು. ಆ ಬಳಿಕ ಭೀಮಭೂಪಾಲಕನು ಮಹಾವೈಭವದಿಂದ ನಳಚಕ್ರೇಶ್ವರನಿಗೂ ದಮಯಂತಿಗೂ ನೆರೆದ ಅರುಸುಗಳ ಮುಂದೆ ವಿಜೃಂಭಣೆಯಿಂದ ಮದುವೆಯನ್ನು ಮಾಡಿಸಿದನು. ಆ ಸಂತೋಷವನ್ನು ನೋಡಿ ಅನಂತರದಲ್ಲಿ ಉಚಿತಸತ್ಕಾರಗಳನ್ನು ಹೊಂದಿ ಎಲ್ಲರೂ ತಮ್ಮ ತಮ್ಮ ದೇಶಗಳಿಗೆ ಹೊರಟುಹೋದರು. ಆ ಮೇಲೆ ನಳನು ನಾರೀರತ್ವ ವಾದ ದಮಯಂತಿಯೊಡನೆ ಕೂಡಿ ಶಚೀದೇವಿಯೊಡನೆ ಕೂಡಿದ ಇಂದ್ರನೋಪಾದಿಯಲ್ಲಿ ಭೀಮರಾಜನ ಅಪ್ಪಣೆಯನ್ನು ತೆಗೆದು ಕೊಂಡು ತನ್ನ ಪಟ್ಟಣಕ್ಕೆ ಹೋಗಿ ಸಕಲ ಭೂಮಂಡಲವನ್ನೂ ಪಾಲಿಸುತ್ತಾ ಸೂರ್ಯನಹಾಗೆ ತೇಜಸ್ಸುಳ್ಳವನಾಗಿ ನಹುಷನ ಮಗನಾದ ಯಯಾತಿರಾ ಜನ ಹಾಗೆ ಅಶ್ವಮೇಧ ಮೊದಲಾದ ಅನೇಕ ಯಜ್ಞಗಳನ್ನು ಮಾಡುತ್ತಾ ಉದ್ಯಾನವನವೇ ಮೊದಲಾದ ರಮ್ಯ ಪ್ರದೇಶಗಳಲ್ಲಿ ದಮಯಂತಿಯೊಡನೆ ಲೀಲಾವಿಲಾಸಗಳಿಂದ ಹೊತ್ತನ್ನು ಕಳೆಯುತ್ತಾ ಸಮಸ್ತ ವಸ್ತುಗಳಿಂದ ತುಂಬಿರುವ ಭೂಮಂಡಲದಲ್ಲಿ ಎರಡನೆಯ ದೇವೇಂದ್ರನಂತೆ ಸುಖದಿಂದಿದ್ದನು. ಇತ್ತಲಾದೇವೇಂದ್ರನೇ ಮೊದಲಾದ ಲೋಕಪಾಲಕರು ತಮ್ಮ ತಮ್ಮ ಸ್ಥಾನ ಗಳನ್ನು ಕುರಿತು ಹೋಗುವ ದಾರಿಯಲ್ಲಿ ವ್ಯಾಸರನೊಡನೆ ಕೂಡಿ ಹೋಗುತ್ತಿರುವ ಕಲೆ ಯನ್ನು ನೋಡಿ ದೇವೇಂದ್ರನು--ನೀವಿಬ್ಬರೂ ಎಲ್ಲಿಗೆ ಹೋಗುತ್ತೀರಿ” ಎಂದು ಕೇಳಲು ಕಲಿಪುರುಷನು--ದಮಯಂತಿಯನ್ನು ಮಸಬೇಕೆಂದು ಆಕೆಯ ಸ್ವಯಂವರಕ್ಕೆ ಹೋಗುತ್ತೇನೆ ಅಂದನು ಇಂದ್ರನು ನಸುನಕ್ಕು ಕಲಿಪುರುಷನನ್ನು ಕುರಿತು-ವೀರ ಸೇನನ ಮಗನಾದ ನಳಚಶ್ವರನು ಅವಳನ್ನು ಮದುವೆ ಮಾಡಿಕೊಂಡನು. ಇನ್ನು ಯಾಕೆ ಹೋಗುತ್ತೀಯೇ? ಅಂದನು ಕಲಿಯು ಕೋಪಿಸಿಕೊಂಡು-ನಿಮ್ಮಂಧ ಲೋಕ ಪಾಲಕರನ್ನೆಲ್ಲಾ ನಿರಾಕರಿಸಿ, ಮನುಷ್ಯ ಮಾತ್ರನೂ ಅಲ್ಪನೂ ಆದ ನಳನನ್ನು ವರಿಸಿದ ಆ ದಮಯಂತಿಯನ್ನು ಶಿಕ್ಷಿಸಬೇಕು ಎನಲು ದೇವೇಂದ್ರನು--ನೀನು ಏಕೆ ಇಷ್ಟು ಕೋಪವನ್ನು ಮಾಡುತ್ತೀ ? ದಮಯಂತಿಯು ದೇವತೆಗಳ ಅಪ್ಪಣೆಯನ್ನು ಪಡೆದು ನಳನನ್ನು ಮದುವೆ ಮಾಡಿಕೊಂಡಿದ್ದಾಳೆ, ಸಕಲ ಧರ್ಮಶಾಸ್ತ್ರಗಳನ್ನೂ ವೇದಗಳನ್ನೂ ಇತಿಹಾಸ ಪುರಾಣಗಳನ್ನೂ ತಿಳಿದು ಸಕಲಗುಣಗಳೊಡನೆ ಕೂಡಿ ಅನೇಕ ಯಜ್ಞ ಳಗನ್ನು ಮಾಡಿ ದಯಾಶಾಲಿಯ ದಾನಶಿಲನೂ ಧೀರನೂ ಸತ್ಯವ್ರತನೂ ತಪೋ ನಿಷ್ಪನೂ ಕಮಾವಂತನೂ ಲೋಕಪಾಲಕರಿಗೆ ಸಮಾನನೂ ಆಗಿರುವ ಆ ನಳಭೂಪಾ ಲಕನಲ್ಲಿ ಯಾವನು ದ್ರೋಹವನ್ನು ಮಾಡಲು ಎಣಿಸುವನೋ ಅವನು ನರಕದಲ್ಲಿ ಮುಳು ಗುವನು ಎಂದು ನುಡಿದನು, ಆ ಬಳಿಕ ದಿಕ್ಷಾಲಕರು ತಮ್ಮ ತಮ್ಮ ಸ್ಥಾನಗಳನ್ನು ಕುರಿತು ತೆರಳಿದರು. ಅನಂತರದಲ್ಲಿ ಕಲಿಪುರಷನು ದ್ಯಾವರನನ್ನು ನೋಡಿ--ನನಗೆ ನಳನಲ್ಲಿ ಅತಿ ಕೋಪ ವುಂಟಾಗಿರುವುದರಿಂದ ಯಾವ ರೀತಿಯಿಂದಾದರೂ ಆತನಿಗೆ ರಾಜ್ಯವನ್ನು ತಪ್ಪಿಸಿ ಆತನು ದಮಯಂತಿಯನ್ನು ಅಗಲಿ ಹೋಗುವ ಹಾಗೆ ಮಾಡುತ್ತೇನೆ. ನೀನು ಪಗಡೆ
ಪುಟ:ಕಥಾಸಂಗ್ರಹ ಸಂಪುಟ ೧.djvu/೨೨೨
ಗೋಚರ