ಪುಟ:ಕಥಾಸಂಗ್ರಹ ಸಂಪುಟ ೧.djvu/೨೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕಥಾಸಂಗ್ರಹ-೩ನೆಯ ಭಾಗ 2 ಯದಾಳಗಳಲ್ಲಿ ಹೊಕ್ಕು ನಳನು ಆಟದಲ್ಲಿ ಸೋಲುವಂತೆ ಮಾಡಿ ನನಗೆ ಸಹಾಯವನ್ನು ಮಾಡಬೇಕೆಂದು ಹೇಳಿ ಅವನನ್ನು ಒಡಗೊಂಡು ನಿಷಧಪಟ್ಟಣಕ್ಕೆ ಹೋಗಿ ತಾನು ನಳನನ್ನು ಸೇರುವುದಕ್ಕೆ ಹನ್ನೆರಡು ವರುಷಗಳ ಪರಿಯಂತರವೂ ಅವಕಾಶವಿಲ್ಲದೆ ಹೊಂಚಿಕೊಂಡಿರಲು ಒಂದು ದಿವಸ ನಳನು ಅಶುಚಿಯುಳ್ಳವನಾಗಿ ಸಂಧ್ಯಾವಂದ ನೆಯನ್ನು ಮಾಡಿದುದರಿಂದ ಇದೇ ಸಮಯವೆಂದು ಅವನಲ್ಲಿ ಹೊಕ್ಕು ಆತನ ಒಡಹುಟ್ಟಾ ದ ಪುಷ್ಕರನ ಬಳಿಗೆ ಹೋಗಿ--ನೀನು ನನ್ನ ಸಹಾಯದಿಂದ ನಳನನ್ನು ಜಯಿಸಿ ಆತನ ಎಲ್ಲಾ ರಾಜ್ಯವನ್ನೂ ಕಿತ್ತು ಕೋ ಎಂದು ನುಡಿದು ತಾನು ಒಂದು ಎತ್ತಿನ ರೂಪವನ್ನು ಧರಿಸಿ ಆತನ ಸಂಗಡವೇ ಬಂದನು, ಪುಷ್ಕರನು ಮಹಾನುಭಾ ವನಾದ ನಳನ ಬಳಿಗೆ ಬಂದು--ನಾನು ಒಂದು ಎತ್ತನ್ನು ತಂದಿದ್ದೇನೆ. ಇದಕ್ಕೆ ಪಂತವನ್ನು ಹಾಕಿ ಜೂಜಾಡುವಣ ಬಾ ಎಂದು ನಳನನ್ನು ಕರೆಯಲು ಆತನು ಅದಕ್ಕೆ ಒಪ್ಪಿ ಪಗಡೆಯಾಟಕ್ಕಾರಂಭಿಸಿ ದಮಯಂತಿಯು ನೋಡುತ್ತಿರುವ ಹಾಗೆ ದೈವಗತಿಯಿಂದ ಚಿನ್ನ ಬೆಳ್ಳಿ ಆನೆ ಕುದುರೆ ಮೊದಲಾದುವುಗಳನ್ನೂ ವಾಹನಗಳನ್ನೂ ನವರತ್ನ ಗಳನ್ನೂ ಒಡವೆಗಳನ್ನೂ ಪಂತಕ್ಕೆ ಒಡ್ಡಿ ನಳನು ತನ್ನ ತಮ್ಮನಾದ ಪುಷ್ಕರ ನೊಡನೆ ಜೂಜಾಡಿ ಕಡೆಗೆ ಎಲ್ಲವನ್ನೂ ಸೋತನು. ಆ ಬಳಿಕ ಮಂತ್ರಿಗಳ ಪಟ್ಟಿ ಣದಲ್ಲಿರುವ ಜನಗಳೂ ಆ ಜೂಜನ್ನು ನಿಲ್ಲಿಸಬೇಕೆಂದು ಎಣಿಸಿ ಅರಮನೆಯ ಬಾಗಿ ಲಿಗೆ ಬಂದು ಕಾವಲುಗಾರರನ್ನು ಕುರಿತು ನಾವು ಬಂದಿರುವುದನ್ನು ದಮಯಂತಿಗೆ ತಿಳಿಸಿರಿ ಎಂದು ಹೇಳಿ ಕಳುಹಿಸಿದರು. ಆಗ ನಳನೆ ಸಾರಧಿಯು ಆಕೆಯ ಬಳಿಗೆ ಹೋಗಿ ಅವರು ಬಂದಿರುವುದನ್ನು ತಿಳಿಸಲು ದಮಯಂತಿಯು ಕಣ್ಣೀರನ್ನು ತುಂಬಿ ನಳನ ಸನ್ನಿಧಾನಕ್ಕೆ ಹೋಗಿ--ಎಲೈ, ಭೂಪಾಲಕನೇ ! ಮಂತ್ರಿಗಳೂ ಬ್ರಾಹ್ಮಣರೂ ಕ್ಷತ್ರಿಯರೂ ವೈಶ್ಯರೂ ಶೂದ್ರರೂ ಮೊದಲಾದ ಸರ್ವ ಜನಗಳೂ ನಿನ್ನನ್ನು ನೋಡ ಬೇಕೆಂದು ಬಂದು ನಿನ್ನ ಸಮಯವನ್ನು ನೋಡುತ್ತಾ ಹಜಾರದಲ್ಲಿ ಕಾದು ಕೊಂಡಿ ದ್ದಾರೆ. ಅವರಿಗೆ ಏನು ಅಪ್ಪಣೆ ? ಎಂದು ಕೇಳಲು ನಳನು ಕಲಿಪುರುಷನ ಮಹಿಮೆ ಯಿಂದ ಉದಾಸೀನವನ್ನು ಮಾಡಿ ದಮಯಂತಿಯ ಮಾತನ್ನು ಕಿವಿಗೆ ಹಾಕಿಕೊಳ್ಳದೆ ಪ್ರತ್ಯುತ್ತರವನ್ನು ಕೊಡದೆ ಇರಲು ಅದೆಲ್ಲವನ್ನೂ ತಿಳಿದು ಅವರೆಲ್ಲರೂ ನಳನಲ್ಲಿ ಆಶೆಯನ್ನು ಬಿಟ್ಟು ತಮ್ಮ ತಮ್ಮ ಮನೆಗಳಿಗೆ ಹೋದರು. ಆ ಮೇಲೆ ದಮಯಂತಿಯ ಅಕ್ಷ ವಿದ್ಯಾ ಸಮರ್ಥನಾದ ಈ ಪುಷ್ಕರನು ತನ್ನ ಗಂಡನ ರಾಜ್ಯವನ್ನೆಲ್ಲಾ ಕಸುಕೊಂಡು ದೇಶಾಂತರಕ್ಕೆ ಅಟ್ಟು ವನು ಎಂದು ನಿಶ್ಚಯಿಸಿ ನಳನ ಸಾರಥಿಯಾದ ವಾರ್ಷೇಯನೆಂಬುವನನ್ನು ಕರಿಸಿ ಏಕಾಂತದಲ್ಲಿ ಅವ ನನ್ನು ಕುರಿತು.ನಳನ ಬುದ್ಧಿಯು ವಿಪರೀತವಾಗಿದೆ. ನಮಗೆ ಆಪತ್ತು ಬರುವುದು ಸಿದ್ದವು. ಇಂಥಾ ಸಮಯದಲ್ಲಿ ನೀವು ನಮಗೆ ಒಂದು ಉಪಕಾರವನ್ನು ಮಾಡಬೇಕು ಅದೇನೆಂದರೆ-ನಳನ ಇಂದ್ರಸೇನನಂಬ ಮಗನನ್ನೂ ಇಂದ್ರಸೇನೆ ಎಂಬ ಮಗಳನ್ನೂ ನಳನಿಗೆ ಅತ್ಯಂತ ಪ್ರಿಯಗಳಾದ ಕುದುರೆಗಳೊಡನೆ ಕೂಡಿರುವ ಆತನ ರಧದಮೇಲೆ ಕೂರಿ ಸಿಕೊಂಡು ಕುಂಡಿನ ಪಟ್ಟಣಕ್ಕೆ ಹೋಗಿ ನನ್ನ ತಂದೆಯಾದ ಭೀಮಭೂಪಾಲನಿಗೆ